ಒಟ್ಟು ನೋಟಗಳು

Tuesday, December 12, 2017

ಗುರುನಾಥ ಗಾನಾಮೃತ 
ಜೋಳಿಗೆಯ ಹಿಡಿದು ನಿನ್ನ
ರಚನೆ: ಅಂಬಾಸುತ 


ಜೋಳಿಗೆಯ ಹಿಡಿದು ನಿನ್ನ
ಮನೆ ಮುಂದೆ ನಿಂತಿಹೆ ಗುರುವೇ
ನಿಜ ಭಕ್ತಿ ಎಂಬ ಹಿಡಿ
ಭಿಕ್ಷೆಯಾ ನೀ ನೀಡೋ ||ಪ||

ಭಕ್ತಿ ಇಲ್ಲದ ನಾನೂ
ಬರಿ ಭುಕ್ತನಾಗಿಹೆನೋ
ಯುಕ್ತಿ ಮಾರ್ಗವನರಿಯೇ
ಮುಕ್ತನಾಗಲೂ
ಬಾಗಿಲನು ತೆರೆದು ಬಾ
ಬೇಗ ಹೊರಗೇ ಪ್ರಭುವೇ
ಧೇಹಿ ಧೇಹಿ ಎನುತಿಹೇ
ಕೇಳದೇ ನಿನಗಿನ್ನೂ ||೧||

ಅಪಾತ್ರ ನಾನೆಂಬಾ
ಭಾವ ನಿನ್ನೊಳಗಿಹುದೇ
ನೀ ಬಾರದಿದ್ದರೇ
ಬದುಕಲಾರೆನೊ ನಾನೂ 
ಭಿಕ್ಷೆ ನೀಡಲು ಪಾತ್ರ
ಅಪಾತ್ರವೇತಕೋ
ಈ ದೀನ ಸ್ಥಿತಿ ಕಂಡು
ಕನಿಕರವು ಬಾರದೇ ||೨||

ಭಿಕ್ಷೆ ನೋಡದ ನೀನೂ
ಕಕ್ಷಿಯೊಳು ಉತ್ತಮನೋ ?
ಕರುಣಾಕರನೆಂಬಾ
ಬಿರುದಿಗರ್ಥವು ಏನೋ?
ಅಂಬಾಸುತನು ನಾನು
ಬೇಡಿಕೊಳ್ಳುತಲಿಹೆನೋ
ತಪ್ಪಿದ್ದರೆ ಮನ್ನಿಸೋ
ಭಕ್ತಿ ಭಿಕ್ಷೆಯ ನೀಡೋ ||೩||

No comments:

Post a Comment