ಗುರುನಾಥ ಗಾನಾಮೃತ
ಅಜಹರಿಹರ ರೂಪ ಅಗಣಿತ ಗುಣ ಮಹಿಮ ಅಖಂಡ ಅನಂತ ವರದಾತಾ
ರಚನೆ: ಅಂಬಾಸುತ
ಅಜಹರಿಹರ ರೂಪ ಅಗಣಿತ ಗುಣ ಮಹಿಮ ಅಖಂಡ ಅನಂತ ವರದಾತಾ
ಎನ್ನ ಸ್ಥಿತಿ ಗತಿ ನೀ ಗುರುನಾಥಾ ನಿನ್ನ ಭಜಿಸುವೆ ಸದ್ಗುರುನಾಥಾ ||
ದತ್ತಚರಿತ ಪಾರಾಯಣ ತತ್ಪರ ಆದಿತ್ಯೋಪಾಸಕಾ
ಎನ್ನ ಸ್ಥಿತಿ ಗತಿ ನೀ ಗುರುನಾಥಾ ನಿನ್ನ ಭಜಿಸುವೆ ಸದ್ಗುರುನಾಥಾ ||
ಶ್ರೀನಿವಾಸ ಶ್ರೀಶಾರದಾ ತನಯ ಸಾಕ್ಷಾತ್ ಶಂಕರ ರೂಪಾ
ಎನ್ನ ಸ್ಥಿತಿ ಗತಿ ನೀ ಗುರುನಾಥಾ ನಿನ್ನ ಭಜಿಸುವೆ ಸದ್ಗುರುನಾಥಾ ||
ಸತ್ಯ ಸುಂದರಾ ಸಾತ್ವಿಕ ಸಾಧಕ ಸಚ್ಚಿದಾನಂದ ರೂಪಾ ನಿಜ
ಎನ್ನ ಸ್ಥಿತಿ ಗತಿ ನೀ ಗುರುನಾಥಾ ನಿನ್ನ ಭಜಿಸುವೆ ಸದ್ಗುರುನಾಥಾ ||
ತಮನಾಶಕ ತನ್ಮಯ ಭಕ್ತಿದಾಯಕ ಘನ್ನ ಪುರುಷೋತ್ತಮ
ಎನ್ನ ಸ್ಥಿತಿ ಗತಿ ನೀ ಗುರುನಾಥಾ ನಿನ್ನ ಭಜಿಸುವೆ ಸದ್ಗುರುನಾಥಾ ||
ಸಖರಾಯಪುರಾಧೀಶಾ ಮಂಗಳಕಾರಕ ಶ್ರೀವೇಂಕಟಾಚಲ
ಎನ್ನ ಸ್ಥಿತಿ ಗತಿ ನೀ ಗುರುನಾಥಾ ನಿನ್ನ ಭಜಿಸುವೆ ಸದ್ಗುರುನಾಥಾ ||
ಅಂಬಾಸುತ ಹೃನ್ಮಂದಿರ ವಾಸಾ ಅಚ್ಯುತ ಆದ್ಯಂತ ರಹಿತಾ
ಎನ್ನ ಸ್ಥಿತಿ ಗತಿ ನೀ ಗುರುನಾಥಾ ನಿನ್ನ ಭಜಿಸುವೆ ಸದ್ಗುರುನಾಥಾ ||
No comments:
Post a Comment