ಗುರುನಾಥ ಗಾನಾಮೃತ
ತೊರೆಯಲಾಗುವುದೇ ಗುರು ನಿನ್ನ ಸೇವೆಯ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ತೊರೆಯಲಾಗುವುದೇ ಗುರು ನಿನ್ನ ಸೇವೆಯ
ಮರೆತು ಬಾಳಲು ಸಾಧ್ಯವೇ ಗುರು ನಿನ್ನ ಜಪವ ।। ಪ ।।
ಹೃನ್ಮೂಲೆಯಲಿ ನೆಲೆಸಿಹೆ ನೀ ಭದ್ರವಾಗಿ
ಚಿತ್ತದೊಳೆಗರನ್ನ ಬೆರೆತಿಹೆ ನೀ ಶಾಂತವಾಗಿ |
ಮಾತಿನಲಿ ಬರುತಿಹೆ ನೀ ವ್ಯಕ್ತವಾಗಿ
ಉಸಿರುಸಿರಲಿ ತುಂಬಿಹೆ ನೀ ಚೇತನನಾಗಿ || ೧ ||
ಜನರೆಲ್ಲ ಮೂಢನೆಂದು ನಿಂದಿಸಲಿ
ಭ್ರಾಂತಿಯು ನಿನದೇನೆಂದು ಜರಿಯಲಿ |
ಮಾತುಮಾತಿನಲೂ ಸುಮ್ಮನೆ ಹಂಗಿಸಲಿ
ಹೆಜ್ಜೆಹೆಜ್ಜೆಯಲೂ ಪ್ರಾಬಲ್ಯವವರ ಮೆರೆಯಲೀ || ೨ ||
ಬೇಕಿಲ್ಲ ಪ್ರಭುವೇ ಧನಕನಕಸ್ಥಾನಮಾನ
ಬೇಕಿಲ್ಲ ನಮಗೆ ಕ್ಷಣಿಕಭೋಗದಾ ಸಮ್ಮಾನ
ಕೇಳುವುದೊಂದೇ ನಿನ್ನ ಇಹಪರದ ಉದ್ಧಾರ
ಕರುಣಿಸು ಗುರುವೇ ಮುಕ್ತಿಮಾರ್ಗದಾ ಶ್ರೀಕಾರ || ೩ ||
No comments:
Post a Comment