ಗುರುನಾಥ ಗಾನಾಮೃತ
ಎಲ್ಲರಂತಲ್ಲ ನನ್ನ ಗುರುವು ಮಹಾ ಮಹಿಮನೋ
ರಚನೆ: ಆನಂದರಾಮ್, ಶೃಂಗೇರಿ
ಎಲ್ಲರಂತಲ್ಲ ನನ್ನ ಗುರುವು ಮಹಾ ಮಹಿಮನೋ
ಅವನಿಗೆ ಅರಿವಿಲ್ಲದ ವಿಷಯ ಜಗದಲಿ ಇಲ್ಲವೋ|
ಏನು ಮಾಡಿದರೇನು ಅದು ಗುರುವಿಗೆ ಸಾಲದೋ
ಏನನೂ ಬೇಡನೋ ಅವ ಎಲ್ಲವನೂ ಬಿಟ್ಟವನೊ|
ನಲಿದಾನ ಗುರು ನಿಜಬಕುತಿಯ ಕಂಡು ಒಲಿದಾನೋ
ಎಲ್ಲರ ಮನ ಮನದಲೂ ಉಸಿರಲೂ ಇದ್ಧಾನೋ |
ಕೊಡುವನೋ ನೀ ಬೇಡುವುದ ಗುರು ಹರಸುವನೋ
ಕೇಳುವ ಮೊದಲೇ ಅರಿತು ನಿನ್ನನು ಸಲಹುವನೋ|
ನುಡಿವನೋ ಮನ ನೋಯದಂತೆ ನಿಜ ಸತ್ಯವನೋ
ಅರಿತು ನಡೆದರೆ ಎಂದೂ ಕೈ ಬಿಡದೇ ಪೊರೆವನೋ|
ಗುರು ಬಕುತಿಯ ಸಾರವ ಅರುಹಿ ತೋರಿಹನೋ
ಎಲ್ಲವೂ ಗುರುವೆಂದು ನಂಬಿ ನಡೆದು ತೋರಿಹನೋ|
No comments:
Post a Comment