ಗುರುನಾಥ ಗಾನಾಮೃತ
ಬಹು ನೊಂದಿಹೆನು ಗುರುವೇ ಬಹು ನೊಂದಿಹೆನು
ರಚನೆ: ಆನಂದರಾಮ್, ಶೃಂಗೇರಿ
ಬಹು ನೊಂದಿಹೆನು ಗುರುವೇ ಬಹು ನೊಂದಿಹೆನು
ನಿನ್ನ ಪ್ರೀತಿ ಗಳಿಸದೇ ನಿನ್ನ ಸೇವೆಯಾ ಮಾಡದೇ|
ನಾನು ನನದೆನುತ ಎಲ್ಲಾ ಬಲ್ಲವ ನಾನೆನುತ ಗರ್ವದಲಿ
ನಿನ್ನರಿವು ಗಳಿಸದಲೆ ಜಂಬದಲಿ ಬದುಕು ನಡೆಸುತಲಿ|
ಮೂರು ಹೊತ್ತಿನ ಕೂಳು ನಾನೇ ಪಡೆದೆನೆಂಬ ಹಂಬಿನಲಿ
ಒಂದು ತುತ್ತು ಪರರಿಗೆ ನೀಡದಲೆ ನಿನ್ನ ಮರೆತು ಮೆರೆಯುತಲಿ|
ಎಲ್ಲಾ ಬಲ್ಲವ ಮಹಾದೇವ ನೀನು ನಸುನಗುತ ಕುಳಿತಿರಲು
ನಿನ್ನ ಮುಂದೆಯೇ ಎಡವಿ ಬೀಳುವ ಹುಂಬನು ನಾನಲ್ಲವೇನು|
ಕೂಗಳತೆಯಾ ದೂರದಲಿ ಗುರು ನೀನಿರಲು ಕಾಣಲಿಲ್ಲ ನಾನು
ಇಂದು ಹಂಬಲಿಸಿ ಹಲುಬಿ ಮೊರೆಇಟ್ಟರೆ ಸಿಗುವಿಯಾ ನೀನು|
ಎಲ್ಲರನ ಮನ್ನಿಸುವ ಗುರುದೇವ ಎನ್ನ ಮನ್ನಿಸಲಾರೆಯ
ನಿನ್ನ ಕರುಣೆಯ ನೋಟ ಒಮ್ಮೆ ನನ್ನೆಡೆಗೆ ತೋರಿ ಹರಸಲಾರೆಯ|
No comments:
Post a Comment