ಗುರುನಾಥ ಗಾನಾಮೃತ
ನಿನ್ನ ನಾಮ ಮರೆಯಿತು ಮನವು ಮಲಿನವಾಯಿತು
ರಚನೆ: ಆನಂದರಾಮ್, ಶೃಂಗೇರಿ
ನಿನ್ನ ನಾಮ ಮರೆಯಿತು ಮನವು ಮಲಿನವಾಯಿತು
ನಿಮ್ಮ ಸೇವೆಯ ತೊರೆಯಿತು ತನು ಬಾರವಾಯಿತು|
ನಿನ್ನ ಮಾತ ತೊರೆಯಿತು ಹೃದಯ ಕೇಳದಾಯಿತು
ನಯನ ಕಾಣದಾಯಿತು ದರುಶನ ಮಾಡದಾಯಿತು|
ನಿನ್ನ ಸ್ತುತಿಸದಾಯಿತು ಮಾತು ಹೊರಡದಾಯಿತು
ನಾನು ಮೆರೆಯಿತು ನಿನ್ನ ತೊರೆದು ದೂರ ಮಾಡಿತು|
ತೋರಿಕೆಯ ಬರದಲಿ ನಿನ್ನ ಮರೆತು ಎಲ್ಲಾ ಬೇಡಿತು
ನಿಜ ಬಕುತಿಯ ಮರೆತು ಪದ ಪುಂಜ ಮೆರೆಯಿತು|
ಅರಿವಿಲ್ಲದೆ ನಡೆದಿದೆ ಇದು ಅರ್ಥವಿಲ್ಲದ ಬದುಕಾಗಿದೆ
ನಿಜವನರಿಯದೆ ನಿನ್ನ ನಂಬದೆ ಬದುಕು ಬರಡಾಗಿದೆ|
ನೀನಿಲ್ಲದೆ ಬೇರೇನು ಬೇಡದು ಈ ಜೀವಕೆ ಸಾಕಾಗಿದೆ
ನಿನ್ನರಿವು ಮೂಡಿಸಿ ಎನ್ನನು ನೀ ಕೈ ಹಿಡಿಯಬಾರದೆ|
No comments:
Post a Comment