ಗುರುನಾಥ ಗಾನಾಮೃತ
ಸಾವಧಾನದಿಂದ ಸೇವೆ ಮಾಡಿ ಧನ್ಯರಾಗಿರೊ
ರಚನೆ: ಅಂಬಾಸುತ
ಸಾವಧಾನದಿಂದ ಸೇವೆ ಮಾಡಿ ಧನ್ಯರಾಗಿರೊ
ಸಗುಣರೂಪಿ ಗುರುವ ಮೂರುತಿಯ ಮನದಿ ತುಂಬಿಕೊಳ್ಳರೊ ||ಪ||
ವಿಷಯವೆಂಬೊ ವಿಷವ ಬಿತ್ತದೆ ಪರವಶವು ನೀವಾಗಿರೊ
ರಾಗದ್ವೇಶವ ರಾಚೊ ಮಾತನು ಆಡದೆ ಮೌನವಾಗಿ ||೧||
ಕಳೆಯೊ ಸಮಯವ ಕೂಡಿಕೊಂಡು ಕೊಳೆಯ ಕಳೆದುಕೊಂಡು
ತನು ಮನವ ದಂಡಿಸಿ ತನ್ಮಯತೆಯನೇ ಇರಿಸೀ ||೨||
ಅರಿಗಳೆಲ್ಲರ ಮರೆತು ಅರಿವ ಕೊಡುವ ದೊರೆಯ ಅರಸೀ
ಸರಸದಿಂದ ಭಕ್ತಿ ರಸದಿ ಗುರುವಿನೊಡನಾಡುತಾ ||೩||
ಸಮರ್ಥ ಸದ್ಗುರು ಸುಲಭ ಸಾಧ್ಯನು ಸೇವೆಗೆಂದಿಗೂ
ಅಂಬಾಸುತನ ಪದದೊಳಡಗಿಹ ಹೇಳಲೆಂದಿಗೂ ||೪||
No comments:
Post a Comment