ಗುರುನಾಥ ಗಾನಾಮೃತ
ಎಲ್ಲಾ ನಿನ್ನದೇ ಗುರು ಈ ಜಗ ಈ ಮನ ಈ ತನುವು
ರಚನೆ: ಆನಂದರಾಮ್, ಶೃಂಗೇರಿ
ಎಲ್ಲಾ ನಿನ್ನದೇ ಗುರು ಈ ಜಗ ಈ ಮನ ಈ ತನುವು
ನೀನಲ್ಲದೆ ಇನ್ನೇನಿದೆ ಜಗದಿ ಎಲ್ಲಾ ಗುರುಮಯವು|
ನಾನು ನನ್ನದು ಎಲ್ಲಾ ಭ್ರಮೆಯು ನೀನೇ ಸತ್ಯವು
ಅಣು ಅಣುವು ತುಂಬಿ ತೋರುತ್ತಿದೆ ನೀನೇ ನಿತ್ಯವು|
ಏನು ನಿನ್ನ ಲೀಲೆಯೋ ಗುರುವೇ ಅರಿವಿಗೆ ಬಾರದು
ಎಲ್ಲಾ ನಿನದೆಂದು ನಿನಗರ್ಪಿಸೆ ಎಲ್ಲಾ ಕಳೆಯುವುದು|
ಮನ ನಿಲ್ಲದೆ ಎಲ್ಲೋ ಓಡುವುದು ಬಾರವಾಗುವುದು
ನಿನ್ನ ಬಜಿಸಿದೊಡೆ ಎಲ್ಲೆಮೀರದೆ ಶಾಂತವಾಗುವುದು|
ಆಸೆ ಬುರುಕನ ಮನವಿದು ಏನನೋ ಬಯಸುವುದು
ನಿನ್ನ ನಾಮವು ನಿಜ ಬಕುತಿಯ ದಾರಿ ತೋರುವುದು|
ನಿರರ್ಥಕ ಜೀವನ ಬೇಡವೋ ಗುರು ಅರ್ಥ ನೀಡೋ
ನೀ ನಡೆವ ಹಾದಿಯಲಿ ದೂಳುಮಾಡಿ ನಡೆದಾಡೋ|
No comments:
Post a Comment