ಗುರುನಾಥ ಗಾನಾಮೃತ
ಕಳ್ಳತನ ಮಾಡ ಬೇಡವೋ ಭಕ್ತಿಯೊಳು ಎಲ್ಲಾ ಗುರು ಅರಿಯುವನೋ
ರಚನೆ: ಆನಂದರಾಮ್, ಶೃಂಗೇರಿ
ಕಳ್ಳತನ ಮಾಡ ಬೇಡವೋ ಭಕ್ತಿಯೊಳು ಎಲ್ಲಾ ಗುರು ಅರಿಯುವನೋ
ಮಳ್ಳನಂತೆ ನಟಿಸಿ ಮರುಳ ಮಾಡಬೇಡವೋ ಗುರುದೇವ ಎಲ್ಲಾ ಬಲ್ಲನೋ|
ಬರೀ ಪೊಳ್ಳು ಮಾತುಗಳ ಬಕುತಿಯ ಗುರು ಎಂದೂ ಒಲ್ಲನೋ
ಸುಳ್ಳು ಬಕುತಿಯ ಆಟವ ಆಡಿ ಗುರುವ ಬೇಡ ಬೇಡವೋ|
ಎಲ್ಲಾ ತಿಳಿದವನಂತೆ ಬದುಕಿ ಏಲ್ಲೂ ಸಲ್ಲದೆ ಇರಬೇಡವೋ
ಎಲ್ಲರೊಳ ಒಬ್ಬನಾಗಿ ಗುರುವಿನ ಪದ ಸೇವೆಯ ಪಡೆಯೋ|
ನಾನು ನಂದೆಂಬ ಭ್ರಮೆಯ ಅರಮನೆಯ ವಾಸ ಮಾಡ ಬೇಡವೋ
ಎಲ್ಲಾ ನಿನ್ನದೆಂಬುವ ಬಾವದಲಿ ನಡೆದು ನೀ ಬಡವನಾಗಿರೋ|
ಹುಚ್ಚು ಮನಸಿನ ಕುದುರೆಗೆ ಮನವ ನೀಡ ಬೇಡವೋ
ಶುದ್ದ ಮನದ ಬಕುತಗೆ ಗುರು ಎಂದಾದರೂ ತಾ ಒಲಿಯುವನೋ|
No comments:
Post a Comment