ಗುರುನಾಥ ಗಾನಾಮೃತ
ಇಂದೇಕೆ ಮನಸು ಭಾರವಾಗಿದೆ ಏನೂ ಬೇಡವಾಗಿದೆ
ರಚನೆ: ಆನಂದರಾಮ್, ಶೃಂಗೇರಿ
ಇಂದೇಕೆ ಮನಸು ಭಾರವಾಗಿದೆ ಏನೂ ಬೇಡವಾಗಿದೆ
ನಿನ್ನ ಸೇವೆಯ ಹಂಬಲ ಬಲು ಕಾಡುತಿದೆ ಗುರುವೇ|
ಪಾಪಿಯು ನಾನು ನಿನ್ನ ಬಜಿಸಲು ಅಮಾನ್ಯನೋ
ಅನ್ಯರ ಬದುಕ ಅಪಹಾಸ್ಯ ಮಾಡುವ ಮೂಡನೋ|
ನಿನ್ನ ಕೊಂಡಾಡಿ ಪಾಡುತ ಸೇವೆ ಮಾಡದವ ನಾನು
ಪದಗಳಲೇ ಆಟವಾಡುತ ಕಾಲ ಕಳೆದು ಸೋತೆನೋ|
ನಿಜಬಕುತರ ಸಂಗ ಪಡೆಯದೆ ಭಕ್ತಿಮಾಡದಾದೆನೋ
ಎನ್ನ ಬಕುತಿಯೇ ಮೇಲೆoದು ಗರ್ವ ಪಡುವವನೋ|
ಮನವೆಂಬ ಮಾಯಾ ಜಾಲದಲಿ ಜಾರಿಹೋದೆನೋ
ಪರಿತಪಿಸಿ ವಿಧ ವಿಧದಿ ನಿನ್ನ ಬೇಡಿ ಕಾಡುತಿಹೆನೋ|
ಸತ್ಯವ ಅರಿಯದೆ ಮಿಥ್ಯೆಯಾ ನಂಬಿ ನಡೆದಿಹಿನೋ
ಇನ್ನಾದರೂ ನನ್ನ ಮನ್ನಿಸಿ ಹರಸಿ ನಡೆಸೋ ಗುರುವೇ|
No comments:
Post a Comment