ಗುರುನಾಥ ಗಾನಾಮೃತ
ಉಪವಾಸ ಕುಳಿತು ನಾಮ ಜಪಿಸುವ ಪರಿ ಏನು
ರಚನೆ: ಆನಂದರಾಮ್, ಶೃಂಗೇರಿ
ಉಪವಾಸ ಕುಳಿತು ನಾಮ ಜಪಿಸುವ ಪರಿ ಏನು
ಎಲ್ಲೆಲ್ಲೋ ಓಡುವ ಮನವ ಹಿಡಿದಿಡಿಲಾರೆ ನಾನು
ನಿನ್ನ ಪಡೆಯಲು ಸುಲಭದ ದಾರಿ ತೋರು ಗುರುವೇ ನೀನು|
ಮಧುರವಾಗಿಹ ಫಲವ ಅರ್ಪಿಸಿ ಸೇವೆ ಮಾಡಲೇನು
ಮದು ತುಂಬಿದ ಹಾಲಿನೊಡೆ ಅಭಿಷೆಕ ಮಾಡಲೇನು
ಎಳನೀರ ಜೊತೆಗೂಡಿ ಗಂಗೆಯಾ ಸಮರ್ಪಿಸಲೇನು
ಸುಗಂಧ ಪೂರಿತ ಪುಷ್ಪಮಾಲೆಯ ನೀಡಲೇ ನಾನು|
ತುಳಸೀ ಮಾಲೆಯ ಮಾಡಿ ನಿನ್ನ ಸಿಂಗರಿಸಲೇ ನಾನು
ಪತ್ರೆಗಳ ತುಂಬಿದ ಮಂಟಪದಿ ನಿನ್ನ ಕೂರಿಸಲೇನು
ಧೂಪ ದೀಪಗಳ ನಡುವೆ ಇರಿಸಿ ಆರಾದಿಸಲೇ ನಾನು
ಮಂತ್ರ ತಂತ್ರದಲಿ ನಿತ್ಯ ಪೂಜಿಸಿ ಸಂಭ್ರಮಿಸಲೇನು|
ಕಾಮ ತುಂಬಿದ ಮನದೊಳು ಜಪಿಸಿ ಫಲವಿಲ್ಲವೇನು
ಮದ ಮತ್ಸರದಿಂದ ನಡೆದು ಹಾಡಿ ಹೊಗಳಿದರೇನು
ಕ್ರೋಧ ತುಂಬಿದ ಮನದಿ ಜಪಿಸಿ ಬೇಡಿದರೇನು
ನೀ ಒಲಿಯಲು ಶುದ್ದ ಮನವೊಂದು ಸಾಕಲ್ಲವೇನು|
No comments:
Post a Comment