ಗುರುನಾಥ ಗಾನಾಮೃತ
ತೋರುವ ಬಕುತಿಯು ನಿಜವೋ ನಾನರಿಯೆ ಗುರುವೇ
ರಚನೆ: ಆನಂದರಾಮ್, ಶೃಂಗೇರಿ
ತೋರುವ ಬಕುತಿಯು ನಿಜವೋ ನಾನರಿಯೆ ಗುರುವೇ
ನಿನ್ನ ನೆನೆಯದೆ ಸುಮ್ಮನೇ ಇರಲಾರೆ ನಾನೆಂದು ಗುರುವೇ|
ಕುಕರ್ಮ ಘಟಿಸಿ ಪರಿತಪಿಸಿ ನಿನ್ನ ಭೇಡುವೆನು ನಾನು
ಅದೆನ್ನ ಕರ್ಮದ ಫಲವೆನ್ನುವೆಯಾ ಗುರುವೇ ನೀನು|
ಮನಸು ಮರಗುತಿದೆ ಮೌನವಾಗಿ ಮಾಡಿದ ಕರ್ಮಕೆ
ಅರಿವಿದ್ಡರೂ ತಡೆಯದಾದೆ ಆ ಆಮಿಷವ ಗುರುವೇ|
ಬಕುತಿಗಿಂತ ಬಲು ಚಂದವೆನಿಸಿ ಅಲ್ಪ ಆಸೆಯ ಸುಳಿಗಳು
ಕಾಲ ಮೀರಿದೆ ಗುರುವೇ ನಿಜವ ಅರಿತು ಇನ್ನು ಹೊರಬರಲು |
ಮುಸುಕು ತುಂಬಿಹುದು ಕಾಣದೇ ಬದುಕಿನ ನಿಜ ಸತ್ಯಗಳು
ತಿಳಿವು ಮೂಡಲು ಬೇಡಿ ಪಿಡಿಯುವೆ ಗುರುವೇ ನಿನ್ನ ಪಾದಾರವಿಂದಗಳು|
ಅಲ್ಪನ ಕೂಗು ಕೇಳದೇ ಗುರುವೇ ಸಾಕುಮಾಡು ಈ ಪರೀಕ್ಷೆಯನು
ಅಳಿದುಳಿದ ಬದುಕಿನಾ ದಿನಗಳಿಗೆ ಗುರುವೇ ಆಸರೆಯೇ ನೀನು|
No comments:
Post a Comment