ಗುರುನಾಥ ಗಾನಾಮೃತ
ನಿನ್ನ ಚರಣ ಕಮಲ ಕಂಡು ಧನ್ಯವೀ ತನುಮನ
ರಚನೆ: ಅಂಬಾಸುತ
ನಿನ್ನ ಚರಣ ಕಮಲ ಕಂಡು ಧನ್ಯವೀ ತನುಮನ
ಪುಣ್ಯಶೇಷ ಇದಕೆ ಕಾರಣ ನಾ ಪಾವನಾ ಪಾವನ ||ಪ||
ಸೋಗು ನೀ ಸಾರಿದ ಪದವ ಪೋಣಿಸುತ್ತಿರಲು
ಪರಮಪುರುಷ ಪರಂಧಾಮನ ಪಾದ ಕಾಣಬಯಸಿರಲು ||೧||
ರಾಶಿ ಹೆರಳ ನಡುವೆ ನಗುವ ಸೂಸಿದಾ ವದನ
ತೋರುತಾ ತನ್ಮಯದ ಭಕ್ತಿಯ ನೀಡಿದಾ ಪುಣ್ಯಕ್ಷಣ ||೨||
ಸಿಂಹನಂತೆ ಒಮ್ಮೆ ಕಂಡು ತಾಯಿಯಂತೆ ಒಮ್ಮೆ ಬಂದು
ತಿಳಿಯದವನ ಮನಕೆ ಅರಿವ ಹಸಿರು ತೋರಣ ಕಟ್ಟಿದಾ ||೩||
ಆತ್ಮಸಖನ ಆನಂದವೀವನ ಅಂಬಾಸುತನ ಪೊರೆದವನ
ಸಖರಾಯಪುರದೊಳಗೆ ನಿಜಸುಖವ ನೀಡಲು ನಿಂತವನ ||೪||
No comments:
Post a Comment