ಗುರುನಾಥ ಗಾನಾಮೃತ
ಗುರುನಾಥ ನೀ ಬೆಳಗಿದೆ ಈ ಬಾಳನು
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥ ನೀ ಬೆಳಗಿದೆ ಈ ಬಾಳನು
ಮಾತೆಯಾಗಿ ನೀ ಸಲಹಿದೆ ನಮ್ಮನು ||
ಅಜ್ಞಾನದ ಅಂಧಕಾರದಿ ನಾ ಅಡಗಿದ್ದೆ
ಮೋಹದಾ ಮುಸುಕಿನಲಿ ನಾ ಮುಳುಗಿದ್ದೆ |
ಮಿಂಚಾಗಿ ಬಂದೆ ನೀ ನನ್ನ ಮನದಲಿ
ಆಸರೆಯಾಗಿ ನಿಂತೆ ಜೊತೆಯಲಿ || ೧ ||
ಕಲೆತೆ ನಮ್ಮ ವಾಗರ್ಥಗಳಲಿ
ಬೆರೆತೆ ನನ್ನ ಮನೆಮನಗಳಲೀ |
ಬೆಳಗಿದೆ ಸುಜ್ಞಾನದಾ ಜ್ಯೋತಿಯ
ತೋರಿಸಿದೆ ಅರಿವಿನಾ ಮನೆಯ || ೨ ||
ಅಮಿತಜ್ಞಾನದಾ ಆಗರವಾಗಿಹೆ
ಸ್ವಾತ್ಮಬೋಧದ ಬೋಧಕವಾಗಿಹೆ |
ಮನೋವ್ಯಾಪಾರದಾ ದರ್ಪಣವಾಗಿ
ಆತ್ಮಜ್ಞಾನಪಡೆಯಲು ಸ್ಫೂರ್ತಿಯಾಗಿ || ೩ ||
No comments:
Post a Comment