ಗುರುನಾಥ ಗಾನಾಮೃತ
ವೇಂಕಟಾಚಲನೆಂಬೊ ಗುರು ಸಂಕಟ ಹರಿಸಲು ಬಂದಾನೊ
ರಚನೆ: ಅಂಬಾಸುತ
ವೇಂಕಟಾಚಲನೆಂಬೊ ಗುರು ಸಂಕಟ ಹರಿಸಲು ಬಂದಾನೊ
ಜಗಕಂಟಕರೆಲ್ಲರ ತುಳಿದಾನೊ ಸಖರಾಯಪುರದೊಳು ನಿಂತಾನೊ ||ಪ||
ಶ್ರೀನಿವಾಸ ಶಾರದಾಸುತನಾಗಿ ಭುವಿಯೊಳು ಜನಿಸ್ಯಾನೊ
ಭಾವಿಕ ಭಕುತರ ಭಾರವ ಕಳೆಯೇ ಭಗವಂತ ಹೀಗೆ ಇಳಿದ್ಯಾನೊ ||೧||
ನಕ್ಕಾನೊಮ್ಮೆ ಸಿಡಿದಾನೊಮ್ಮೆ ಒಕ್ಕಲ ಮನಕೆ ವರವಾಗ್ಯಾನೆ
ಬೆಕ್ಕಸ ಬೆರಗಾಗೊ ಮಾತಾಡ್ಯಾನೆ ದತ್ತನಾಗಿಯೇ ತಾ ಕಂಡಾನೆ ||೨||
ಸಾಧು ಪೂಜೆಯ ಮಾಡ್ಯಾನೊ ಸಜ್ಜನರ ಸಂಘವ ನೀಡ್ಯಾನೊ
ಲಜ್ಜೆ ಬಿಟ್ಟು ಭಜಿಸಿರಿ ಗುರು ಒಲಿವನು ನಿಮಗೆ ಎಂದಾನೊ ||೩||
ವೇದ ಬೋಧೆ ಮಾಡ್ಯಾನೊ ವಾದ ಬೇಡ ಎಂದಾನೊ
ಗಾದಿಗೆ ಎಂದೂ ಏರಾನೋ ಗುರು ಗೂಢ ತಿಳಿಯಿರಿ ಅಂದಾನೊ ||೪||
ಅಂಬಾಸುತನಾ ಮನದಾಗೆ ಎಂದೂ ಪದವಾಗಿ ನಲಿದು ಕುಣಿದ್ಯಾನೊ
ಪದಗಳ ಮೂಲಕ ಪಾದಪೂಜೆಯ ನಿತ್ಯ ಪಡೆಯುತ ಮೆರೆದಾನೊ ||೫||
No comments:
Post a Comment