ಗುರುನಾಥ ಗಾನಾಮೃತ
ಹರಸುವ ಹರನೇ ಬಂದ ಭುವಿಗೆ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಹರಸುವ ಹರನೇ ಬಂದ ಭುವಿಗೆ
ಹರನೇ ನರನಾಗಿ ಬಂದ ಧರೆಗೆ |
ಆ ನರನೇ ಗುರುವಾಗಿ ಒಲಿದ ಮನೆಗೆ
ಗುರುವೇ ಆನಂದ ತಂದ ಬಾಳಿಗೆ ||
ಮಾತೆಯ ಮಮತೆಯ ತೋರುತಾ
ನಗುತಲೆ ತಪ್ಪನು ತಿದ್ದುತಾ |
ಜನರ ಮುಗ್ಧಭಕ್ತಿಯಾ ನೋಡುತಾ
ಭಕ್ತರ ಸಂಕಷ್ಟಗಳ ಪರಿಹರಿಸುತಾ || ೧ ||
ಮನಶುದ್ಧಿಯಿಂದ ಬಾಳುವೆ ಮಾಡಿರೆನ್ನುತಾ
ಒಮ್ಮನದಿಂದ ಗುರುವನು ಸೇವಿಸಿರೆನ್ನುತಾ |
ಭಾವಶುದ್ಧಿಯಲಿ ಬದುಕನು ಕಳೆಯಿರೆನ್ನತಾ
ಕರ್ತವ್ಯದಲ್ಲಿ ದೈವವನು ಕಾಣಿರೆನ್ನುತಾ || ೨ ||
ಸಾತ್ವಿಕರಲ್ಲಿ ನಾನಿಹೆ ಎನ್ನುತಾ
ದುರುಳರಿಗೆ ಮನವ ಶುದ್ಧಿಮಾಡಿರೆನ್ನುತಾ |
ಭವದ ಬದುಕನು ಭಕ್ತಿಯ ತೈಲದಿ ಉರಿಸಿರೆನ್ನುತಾ
ಆತ್ಮಸಾಕ್ಷಾತ್ಕಾರದ ದಾರಿಯ ತೋರುತಾ || ೩ ||
No comments:
Post a Comment