ಗುರುನಾಥ ಗಾನಾಮೃತ
ಮನಸು ಕೂಗುತಿಹದು ನಿನ್ನನೇ ಬೇಡು ಎಂದು
ರಚನೆ: ಆನಂದರಾಮ್, ಶೃಂಗೇರಿ
ಮನಸು ಕೂಗುತಿಹದು ನಿನ್ನನೇ ಬೇಡು ಎಂದು
ಯೋಗ್ಯತೆ ಏನೋ ನಾ ಅರಿಯೆ ನಿನ್ನ ಬಜಿಸಲು ಇಂದು|
ಬರೀ ಬೇಕು ಬೇಡಗಳ ನಡುವೆ ನಾನಿರುವೆ ಇಂದು
ಮೋಹ ಮಾಯೆಯ ಸುಳಿಯಲಿ ಈಜುತಿಹೆನಿಂದು|
ಎಷ್ಟು ಬೇಡಿದರೂ ಬರಿದಾಗದು ಆಸೆಯ ಮಹಾಪೂರ
ದಡ ಸೇರದಾ ಈ ಮನವು ಬೇಡುತಿದೆ ಗುರುವಿನ ಆಸರೆಯ ತೀರ |
ಮೂರು ದಿನದ ಈ ಬದುಕಿಗೆ ನೀಡೆನಗೆ ನಿನ್ನ ಆಸರೆ
ನಿನ್ನ ಬಜಿಸುತ ಮರೆಯುವೆ ನಿತ್ಯ ಜೀವನದ ಹೊರೆ|
ಬದುಕು ಹಸನು ಮಾಡೆಂದು ಬೇಡುವೆನು ಗುರುವೇ
ಸ್ವಾರ್ಥತೆಯ ಸೋಗಿಂದ ನನ್ನ ಬಿಡಿಸೆನ್ನ ಗುರುವೇ|
ಅವರಿವರ ಗೊಡವೆ ಬೇಡ ಎನಗೆ ನನ್ನ ಗುರುವೇ
ನಿನ್ನ ಸನಿಹದಲಿ ನನ್ನ ಮನಕೆ ನೆಲೆ ಸಿಗಲಿ ಗುರುವೇ|
No comments:
Post a Comment