ಗುರುನಾಥ ಗಾನಾಮೃತ
ನಿನ್ನ ಬಣ್ಣಿಸಲು ಅದೆಷ್ಟು ಬಕುತರೋ ಗುರುವೇ
ರಚನೆ: ಆನಂದರಾಮ್, ಶೃಂಗೇರಿ
ನಿನ್ನ ಬಣ್ಣಿಸಲು ಅದೆಷ್ಟು ಬಕುತರೋ ಗುರುವೇ
ನಿನ್ನ ನಂಬಿಹ ಪಾಮರನು ನಾನೂ ಒಬ್ಬ ಗುರುವೇ|
ಮನದಿ ನೆನೆದರೆ ಅಂತರಾಳದಲಿ ನೆಮ್ಮದಿ ನೀಡುವೆ
ಬಜಿಸಿ ಪಾಡಲು ಎಲ್ಲಾ ನಿನ್ನವರೆಂದು ನೀ ಪೊರೆವೇ|
ನಿನ್ನ ನೆನೆಯುತ ಒಮ್ಮೆಯೂ ಮುಂದಡಿ ಇಡಲಿಲ್ಲ
ಹಿಂದೆ ನಿಂತು ಎನ್ನ ಕೈ ಬಿಡದೆ ನೀ ಕಾಯುವೆಯಲ್ಲಾ|
ಸರಿ ತಪ್ಪುಗಳ ಅರಿವು ನೀ ನೀಡಿ ಸಲಹುವೆ ಗುರುವೇ
ಹುಂಬ ತನವನಳಿಸಿ ಎನ್ನ ಮನುಜನಾ ನೀಮಾಡುವೆ|
ಬಲು ದುಸ್ತರವು ಈ ಬದುಕು ನೀ ಹಸನು ಮಾಡುವೆ
ದಣಿವು ಆರಲು ಸದಾ ನಿನ್ನ ನಾಮವನು ನೆನೆಯುವೆ|
ಎಷ್ಟು ಬೇಡಿದರೂ ಎನ್ನ ಹರಸಲಿಲ್ಲಾ ಆ ದೈವವೂ
ನಿನ್ನ ನೆನೆದೊಡೆ ಬಂದು ಸಲಹುವನು ನನ್ನ ಗುರುವು|
No comments:
Post a Comment