ಗುರುನಾಥ ಗಾನಾಮೃತ
ದೇವದೇವನೇ ಸಖರಾಯಾಧೀಶನೇ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ದೇವದೇವನೇ ಸಖರಾಯಾಧೀಶನೇ
ದಾರಿತೋರೆಮಗೆ ಅನವರತ ಅವಧೂತನೇ ||
ಈ ಮನೆಯ ನೀನೆಲೆಸೋ ಗುಡಿಯಾಗಲಿ
ಈ ಪದವು ನಿನ್ನ ಜಪಿಸೋ ಹಾಡಾಗಲಿ |
ಗುರುಭಕ್ತಿ ಮನದಲ್ಲಿ ಸದಾ ಹಸಿರಾಗಿರಲೀ
ಗುರುಸೇವೆಗೆ ಸತತವೂ ಸಿದ್ಧವಾಗಲೀ || ೧ ||
ಕಾಯುತಿಹೆ ನಿನ್ನಾಗಮನಕೆ ಪ್ರತಿ ಕ್ಷಣವೂ
ಜಪಿಸುತಿಹೆ ನಿನ್ನ ನಾಮವೇ ಅನುಕ್ಷಣವೂ |
ಗುರುತತ್ತ್ವವು ಹೃದಯದಲಿ ಅಚ್ಚೊತ್ತಿರಲಿ
ಗುರುವಾಕ್ಯಗಳ ಸದಾ ಅನುಸರಣೆಯಿರಲೀ || ೨ ||
ನಿನ್ನ ಹಾರೈಕೆಯೇ ನಮ್ಮ ಬದುಕು
ನಿನ್ನ ಸಂತೋಷವೇ ನಮಗೆ ಬೆಳಕು |
ಗುರುನಿಷ್ಠೆಯು ಸದಾ ಎನ್ನ ಜೊತೆಯಿರಲಿ
ಗುರುಪಾದದಲಿ ಮನವೆನ್ನ ಲೀನವಾಗಲಿ || ೩ ||
No comments:
Post a Comment