ಗುರುನಾಥ ಗಾನಾಮೃತ
ಅರಿವು ನೀಡೊ ಗುರುವು ಬಂದಾ ಅರಿತು ನೆಡೆಯಿರೊ
ರಚನೆ: ಅಂಬಾಸುತ
ಅರಿವು ನೀಡೊ ಗುರುವು ಬಂದಾ ಅರಿತು ನೆಡೆಯಿರೊ
ಮರೆತು ಮರೆವು ಎನ್ನದಿರಿ ಗುರುವ ಅರಿಯಿರೊ ||ಪ||
ಆಡಂಬರದ ಪೂಜೆ ಬಿಟ್ಟು ಆರತಿ ಮಾಡಿರೊ
ನಿರ್ಮಲ ಮನದಿ ಅವನ ಚರಣಕ್ಕೆರಗಿ ನಮಿಸಿರೊ ||೧||
ಆತ್ಮೋದ್ಧಾರದ ವರವ ಬೇಡಿ ಆನಂದ ಪಡೆಯಿರೊ
ಶಂಕೆ ಬಿಟ್ಟು ಶರಣು ಎನುತ ಅವನ ಭಜಿಸಿರೊ ||೨||
ತಮವ ಕಳೆವ ಜ್ಯೋತಿ ರೂಪ ಗುರುವು ಕಾಣಿರೊ
ತನ್ಮಯದಿ ಕೂಗೆ ಓಡಿ ಬರುವ ನೋಡಿರೊ ||೩||
ಹರಿಯು ಹರನು ಅಜನು ಭವನು ಗುರುವು ನಮಿಸಿರೊ
ಭಕ್ತಿ ಇತ್ತು ಮುಕ್ತಿವೀವ ಗುರುವ ಸ್ಮರಿಸಿರೊ ||೪||
ನಿಜಾನಂದ ನೀಡುವನು ಗುರುವು ಹರಸುತಾ
ನಾವೀಕನಾಗಿ ಭವ ಸಾಗರ ದಾಟಿಸುತಾ ||೫||
ಸಖರಾಯಪುರವಾಸಿ ಗುರುವಾ ಬೇಡಿರೊ
ಅಂಬಾಸುತನ ಪೊರೆವಾತನ ನಿತ್ಯ ಕಾಣಿರೊ ||೬||
No comments:
Post a Comment