ಗುರುನಾಥ ಗಾನಾಮೃತ
ಕಾದಿರುವೆನೋ ಗುರುನಾಥಾ
ರಚನೆ: ಅಂಬಾಸುತ
ಕಾದಿರುವೆನೋ ಗುರುನಾಥಾ
ನಿನ್ನ ಗುಡಿ ಬಾಗಿಲಲೀ
ದರುಷನವನು ಬೇಡೀ ||ಪ||
ಅವಗುಣಗಳನೆಣಿಸದಿರೋ ಅತಿ ದೀನ ನಾನೋ
ಆರ್ದ್ರಭಾವದೀ ಕೂಗುತಿಹೆ ಬಾರೋ ||೧||
ನಾಥ ನೀನೂ ಅನಾಥ ನಾನೂ
ಕನಿಕರಿಸಿ ಕೃಪೆ ತೋರೋ ಕರುಣಾಮಯಿ ಇನ್ನೂ ||೨||
ನೀ ಸರ್ವಸ್ವ ಎನಗೆಂದು ನಂಬಿರುವೇ
ಗತಿ ನೀನು ಸನ್ಮತಿಯಾ ಪಾಲಿಸೆಂದು ಬೇಡಲೂ ||೩||
ದರುಷನವ ನೀನಿನ್ನು ನೀಡದಿದ್ದರೇ
ದೀನಪರಿಪಾಲಕ ಎನ್ನುವುದು ಹೇಗೇ
ಸಖರಾಯಪುರಾಧೀಶಾ ಹೇ ಸದ್ಗುರುನಾಥಾ
ನಿನ್ನ ದಾಸರ ದಾಸ ಅಂಬಾಸುತ ನಾ ||೪||
No comments:
Post a Comment