ಗುರುನಾಥ ಗಾನಾಮೃತ
ಸಖರಾಯಪುರವಾಸಿಯೇ ಸದ್ಗುರುವರಾ
ರಚನೆ: ಅಂಬಾಸುತ
ಸಖರಾಯಪುರವಾಸಿಯೇ ಸದ್ಗುರುವರಾ
ಸತತ ಪೊರೆಯೋ ಭಕುತರಾ ||ಪ||
ಶ್ರೀನಿವಾಸ ಶಾರದೆಯಾ ಉದರದಿ ಜನಿಸಿದೆ
ವೇಂಕಟಾಚಲ ನಾಮದೀ
ಶರಣು ಹೊಕ್ಕ ಭಕುತ ಜನರನು ಕರುಣದಿಂದಾ ಕಾಯಲೆಂದೇ
ಧರೆಯೊಳವತರಿಸಿದೆ ನೀ ದತ್ತನ ರೂಪೀ ||೧||
ಪತಿಭಿಕ್ಷೆಯನು ಬೇಡಿ ಸತಿಯೊಬ್ಬಳು
ನಿನ್ನ ಪಾದವ ಪಿಡಿದಿರೇ
ಸೌಭಾಗ್ಯ ದ್ರವ್ಯಗಳನೇ ಆ ಸತಿಗೆ ನೀ ನೀಡೀ
ಮರಳಿ ಬರುವನು ನಿನ್ನ ಪುರುಷ ಮರುಕಪಡದಿರು ಎಂದಿಹೇ||೨||
ಬಂದಂಥಾ ಭಕುತರಿಗೇ ಅಡಿಗಡಯನು ಮಾಡಲು
ಜಲಕ್ಷಾಮ ತಲೆದೋರಿರೇ
ಆಕರ್ಷಿಸಿದೇ ಮೇಘಗಳನೂ ನೋಡುತಾ ಆಕಾಶವನ್ನೂ
ಮಳೆಯ ಸುರಿಸಿದೆ ಮಹಾನೀಯನೆ ಜಲಕ್ಷಾಮವ ಕಳೆಯಲೂ ||೩||
ಸನ್ಯಾಸಿ ತಾನಾಗಲೂ ಬಾಲಕನೊಬ್ಬಾ
ಆಗ್ರಹದಿ ಬೇಡಿರಲೂ
ಕಾವಿ ದೇಹಕ್ಕಲ್ಲ ಕನಸನು ಕಾಣುವುದ ನೀನೀಗಲೇ ಬಿಡು
ನಿತ್ಯ ಸಾಧನೆ ಮಾಡು ಮನಸಿಗೆ ಕಾಷಾಯ ವಸ್ತ್ರ ತೊಡಿಸೆಂದೇ ||೪||
ಮಡಿಲು ತುಂಬದ ಮಾತೆಗೇ ನಾ ಮಗನಿಹೆ
ಚಿಂತೆ ಏತಕೆ ಎಂದೇ
ಮುತ್ತಿನಂಥಾ ಮಾತನಾಡುತ ಮನಸಿನಾ ಕಲ್ಮಷವ ಕಳೆಯುತಾ
ಮೋಹದಾಹವ ನೀಗಿಸಿದೆ ನೀ ಮಹಾನುಭಾವನೇ ||೫||
ಗುರುವೇ ದೈವವೆಂದೇ
ಗುರುತರ ಭಾಗ್ಯ ಗುರುವಿಂದಲೇ ಎಂದೇ
ಮಾತೆಯಾದೆ ಪಿತನು ಆದೆ ಸೋದರನಾದೆ ಸಖನು ಆದೇ ಧರ್ಮಮಾರ್ಗವ ತೋರುತಾ ಎಮ್ಮನುದ್ದರಿಪಾ ಸದ್ಗುರುವಾದೇ ||೬||
ಅತಿಷಯದಾ ಭಕುತಿಯಲೀ ಬೇಡಡಿಹೆನಯ್ಯಾ
ಅನುಗ್ರಹಿಸೋ ಈ ಪಾಮರನಾ
ಅಂಬಾಸುತನಾ ಪದಗಳ ಈ ಮಾಲೆಯ ನೀ ಧರಿಸೋ
ತಪ್ಪುಗಳನೂ ಮನ್ನಿಸುತಲೀ ಎನ್ನನಪ್ಪಿ ಒಪ್ಪಿಕೊಳ್ಳೋ ||೭||
No comments:
Post a Comment