ಒಟ್ಟು ನೋಟಗಳು

Sunday, January 7, 2018

ಗುರುನಾಥ ಗಾನಾಮೃತ 
ಸುಮ್ಮನಾಗಲಿಲ್ಲವೋ ಎನ್ನ ನಾಲಿಗೇ
ರಚನೆ: ಅಂಬಾಸುತ 


ಸುಮ್ಮನಾಗಲಿಲ್ಲವೋ ಎನ್ನ ನಾಲಿಗೇ
ಬಲು ಹೆಮ್ಮಿಗೆಯಲಿ ಅಬ್ಬರಿಸಿಹುದೀ ನಾಲಿಗೇ ||ಪ||

ದುಷ್ಟತನವನು ಪೊಗಳಿಹುದೀ ನಾಲಿಗೇ
ಬಹು ಶಿಷ್ಟರನು ತೆಗಳುತಿಹುದೀ ನಾಲಿಗೇ
ನಾಮಸ್ಮರಣೆಗೆ ಒಲ್ಲೆ ಎಂಬುದಿ ನಾಲಿಗೇ
ಬಲುಪೊಳ್ಳು ಹಾಡಿಗೆ ರಾಗ ಹಾಕಿಹುದೀ ನಾಲಿಗೇ ||೧||

ಉಪ್ಪುಹುಳಿ ಖಾರಕೆ ಸೋತಿಹುದೀ ನಾಲಿಗೇ
ಸತ್ವಯುತ ಸಪ್ಪೆಯ ಗಂಜಿಯಾ ತ್ಯಜಿಸಿಹುದೀ ನಾಲಿಗೇ
ಅಸುರಪಾನಕೆ ನೀರಾಡಿಸಿಹುದೀ ನಾಲಿಗೇ
ಸುರಸ್ತೋತ್ರಕೆ ಮೂಕವಾಗುವುದೀ ನಾಲಿಗೇ ||೨||

ಅತಿಷಯದ ಅಹಂಕಾರದಿ ಅಂಬಾಸುತನಾ ನಾಲಿಗೇ
ನಾದವಿನೋದದಿ ಕಾಲಕಳೆಯುತಿದೆ ನಾಲಿಗೆ
ಘನ್ನಮಹಿಮಾ ಸಖರಾಯಪುರವಾಸನಾ
ನಾಮವ ಪೇಳದೇ ನರಕಕ್ಕೀಡಾದ ನಾಲಿಗೇ ||೩||

No comments:

Post a Comment