ಗುರುನಾಥ ಗಾನಾಮೃತ
ಮನ್ನಿಸೆನ್ನ ಅಪರಾಧವ ಸದ್ಗುರುವೇ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಮನ್ನಿಸೆನ್ನ ಅಪರಾಧವ ಸದ್ಗುರುವೇ
ಮನ್ನಿಸೆನ್ನ ಅಪರಾಧವಾ ||
ಕಾರಣಪುರುಷನು ನೀನೆಂದರಿಯದೆ
ಲೋಕೋದ್ಧಾರಕನು ನೀನೆಂದು ತಿಳಿಯದೆ |
ಭಕ್ತರುದ್ಧಾರಕೆ ಪಣ ತೊಟ್ಟಿಹೆನೆಂದರಿಯದೆ
ಮನುಷ್ಯಮಾತ್ರದಿಂ ಕಂಡೆನಲ್ಲಾ || ೧ ||
ಬಾಹ್ಯಾಲಂಕಾರಕೆ ಬೆಲೆಕೊಟ್ಟೆನಲ್ಲಾ
ನಿನ್ನ ಆಂತರ್ಯವನರಿಯದಾದೆನಲ್ಲಾ |
ನಿನ್ನ ಮಾತಿನ ಗೂಡಾರ್ಥಗಳ ತಿಳಿಯನಾದೆನಲ್ಲಾ
ನಿನ್ನನೇ ಮೌಢ್ಯತೆಯಿಂ ನೋಡಿದೆನಲ್ಲಾ || ೨ ||
ಪುಣ್ಯಶಾಲಿಗಳಿಗೆ ಒಲಿವನು ನೀನೆಂದರಿಯಲಿಲ್ಲಾ
ನಿನ್ನೊಂದು ದೃಷ್ಟಿಯೇ ಅನುಗ್ರಹವೆಂದರಿಯಲಿಲ್ಲಾ |
ಸದಾ ಪೊರೆವ ಸದ್ಗುರುವೇ ನೀನೆಂದು ತಿಳಿಯಲೇ ಇಲ್ಲ
ನಿನ್ನ ಸರ್ವಜ್ಞ ಮಹಿಮೆಯ ತಿಳಿಯಲೇ ಇಲ್ಲ ... || ೩ ||
No comments:
Post a Comment