ಗುರುನಾಥ ಗಾನಾಮೃತ
ಜೀವಿತವು ನಿನ್ನ ಭಿಕ್ಷೆ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಜೀವಿತವು ನಿನ್ನ ಭಿಕ್ಷೆ
ಜೀವನದಿರಲಿ ನಿನ್ನ ರಕ್ಷೆ |
ಕೊಡು ನೀ ಜ್ಞಾನಚಕ್ಷು
ಮಾಡು ನನ್ನನು ಮುಮುಕ್ಷು ||
ಜನ್ಮ ಜನ್ಮದ ಸುಕೃತವೋ
ಯಾರು ಮಾಡಿದ ಪುಣ್ಯವೋ |
ಬಂದೆ ಜ್ಞಾನಾಮೃತವ ಹಿಡಿದು
ಬಡಿಸಿದೆ ಸುಜ್ಞಾನಾಮೃತವ ಕರೆದು || ೧ ।।
ಕ್ಷಣಕ್ಷಣದಲು ಜಪಿಸುವೆ ನಿನ ನಾಮವ
ಕಣಕಣದಲೂ ತುಂಬಿರಲಿ ನಿನ ಭಕ್ತಿಯ |
ಈ ಬಾಳಲಿರಿಸೋ ಅಚಲ ಭಕ್ತಿಯ
ಸಂತತ ನೀಡೆನಗೆ ಈ ಸೌಭಾಗ್ಯವ || ೨ ||
ನಿನ್ನಾನುಗ್ರಹ ಪಡೆದ ಅಜ್ಞಾನಿ
ಆಗುವನವನೀ ಜಗದಿ ಸುಜ್ಞಾನಿ ।
ಪಾದಸೇವೆಯ ಕರುಣಿಸೋ ಕಡೆತನಕ
ಕೈ ಹಿಡಿದು ಪೊರೆಯೋ ಅನವರತ ।। ೩ ।।
No comments:
Post a Comment