ಗುರುನಾಥ ಗಾನಾಮೃತ
ಜಗದ್ವಂದ್ಯ ಅವಧೂತ ಗುರುನಾಥಾ
ರಚನೆ: ಅಂಬಾಸುತ
ಜಗದ್ವಂದ್ಯ ಅವಧೂತ ಗುರುನಾಥಾ
ಸದ್ಭಕ್ತರ ಪೊರೆಯುತಲಿಹ ಸಖರಾಯಪುರಾಧೀಶಾ ||ಪ||
ಸಾಧನೆಯೊಳಗಡಗಿಹಾ ನಿಜ ಸಂತ ನೀ
ಅನುಭವವೇದ್ಯ ಆನಂದ ರೂಪ ನೀ
ಸಾತ್ವಿಕರ ಹೃದಯದಾ ಸಿಂಹಾಸನದೊಳು ನೀ
ಕುಳಿತಿರುವ ಬೋಧರೂಪ ನೀ ||೧||
ರಾಗದ್ವೇಷವ ಮೀರಿದ ಸ್ವಾತ್ಮಾರಾಮ ನೀ
ಭೂತ ಭವಿಷ್ಯ ವರ್ತಮಾನವ ಅರಿತವಾ ನೀ
ಸ್ವಾನುಭವದಾ ಸುಖಸಾರವ ನೀಡುತಲಿಹೆ ನೀ
ಸತ್ಸಂಗದೊಳಿರಿಸೀ ಸಂತೃಪ್ತಿ ನೀಡುವವ ನೀ ||೨||
ಮನದ ವಿಕಾರ ಅಳಿಸುವಾ ಸಾಕಾರ ರೂಪ ನೀ
ಕರುಣದಿ ಕಣ್ಣೀರಾ ಒರೆಸುವವನೂ ನೀ
ಜ್ಞಾನದ ಮನೆಗೊಯ್ವಾ ನೌಕೆಯ ನಾವೀಕ ನೀ
ಅಹಂಭಾವವ ಅಳಿಸೋ ಅಪ್ರಮೇಯನು ನೀ ||೩||
ಶ್ರೀವೇಂಕಟಾಚಲ ನಾಮಾಂಕಿತ ನೀ
ಅಂಬಾಸುತನಾ ಅನವರತಾ ಪೊರೆಯುವವ ನೀ
ಅವನಾ ಪಾಲಿನ ಜಗದಂಬಿಕೆಯ ರೂಪವೂ ನೀ
ಆದ್ಯಂತರಹಿತಾ ಅಸಮಾನ್ಯನೂ ನೀ ||೪||
No comments:
Post a Comment