ಗುರುನಾಥ ಗಾನಾಮೃತ
ಗುರುವೇ ಸಖರಾಯಪುರವರಾಧೀಶಾ
ರಚನೆ: ಅಂಬಾಸುತ
ಗುರುವೇ ಸಖರಾಯಪುರವರಾಧೀಶಾ ||ಪ||
ಸಕಲ ಮಂಗಳಕಾರಕ ಸನ್ಮತಿ
ದಾಯಕ ಸುಂದರರೂಪ ಅವಧೂತ ||ಅ.ಪ||
ಸುಜನ ಪೋಷಕ ನೀ ಕುಜನ ವಿನಾಶಕ
ಅಜ ಹರಿಹರರ ಸ್ವರೂಪಾ
ನಿಜಸುಖ ನೀಡೆಂದು ಬೇಡುವೆ ಬಳಿ ಬಂದೂ
ಭಜಕ ಜನ ಮನ ನಿವಾಸನಾ ||೧||
ಅನಾಥ ನಾಥ ಆಪದ್ಭಾಂಧವಾ
ಅತಿಷಯ ಪ್ರೇಮ ಸುದಾಯಕಾ
ಮನ ತಮವನು ಕಳೆಯೋ ಜ್ಞಾನಾದಿತ್ಯಾ
ಮಮತೆಯೆ ಮೂರ್ತಿವೆತ್ತಂತಿರುವಾತ ||೨||
ಸತ್ ಚಿತ್ ಸುಖ ಆನಂದ ಸಾಧಕ
ಭಕ್ತ ರಕ್ಷಕಾ ಭಗವಂತಾ
ಸಾಧು ಸಜ್ಜನರ ಸಂಘದೊಳೆನ್ನನಿರಿಸೀ
ಸಲಹೋ ಸೋಹಂಭಾವವ ನೀಡೀ ||೩||
ನಿತ್ಯ ನಿರುತವೂ ನಿನ್ನನೇ ಭಜಿಪೆನು
ಸತ್ಯಮೂರುತೀ ಗುರುನಾಥಾ
ಅಂಬಾಸುತನಾ ಅಂತರಂಗದ ದೊರೆಯೇ
ಶ್ರೀವೇಂಕಟಾಚಲ ನಾಮಾಂಕಿತನೇ ||೪||
No comments:
Post a Comment