ಗುರುನಾಥ ಗಾನಾಮೃತ
ಕರುಣಿಸೋ ಗುರುವೆ ಕರುಣಿಸೋ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಕರುಣಿಸೋ ಗುರುವೆ ಕರುಣಿಸೋ
ದಯಪಾಲಿಸೋ ಸದ್ಗುರುವೇ ದಯಪಾಲಿಸೋ |
ನಿನ್ನ ಪಾದದಡಿಯ ಧೂಳಾದರೂ ಸರಿಯೆ
ನಿನ್ನ ಪಾದುಕೆಯ ಕಣವಾದರೂ ಸರಿಯೆ |
ನೀನು ಕಣ್ಣಂಚಿನ ಕಿರುನೋಟ ಬೀರಿದರೂ ಸರಿಯೆ
ನಿನ್ನ ತುಟಿಯಂಚಿನ ಮೆಲ್ನಗೆ ಸೂಸಿದರೂ ಸರಿಯೆ || ೧ ||
ನಿನ್ನ ವರದ ಸವಿನುಡಿಯಾದರೂ ಸರಿಯೆ
ನಿನ್ನ ಪೂಜಿಸಿದ ಸುಂದರಸುಮವಾದರೂ ಸರಿಯೆ !
ನಿನ್ನ ಪಾದಸ್ಪರ್ಷಿಸುವ ಬಿಡಿಮಲ್ಲೆಯಾದರೂ ಸರಿಯೆ
ನಿನ್ನ ಪಾದವ ತೊಳೆವ ಜಲವಾದರೂ ಸರಿಯೆ || ೨ ||
No comments:
Post a Comment