ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 121
ಗ್ರಂಥ ರಚನೆ - ಚರಣದಾಸ
ಸರ್ವಧರ್ಮ ಸಮಭಾವ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಸದ್ಗುರುವಿಗೆ ಜಾತಿ ಎಂಬುದಿಲ್ಲ. ವಿಷಯದೊಳಗೆ ಇದ್ದು ವಿಷಯ ವಾಸನೆಯಿಂದ ದೂರವಿರುವವನು ಸದ್ಗುರು.
ಒಮ್ಮೆ ಗುರುನಾಥರು ಅದ್ವೈತ ಪೀಠವೊಂದರ ಯತಿವರೇಣ್ಯರ ದರ್ಶನ ಮಾಡಿ ಚಿಕ್ಕಮಗಳೂರಿನ ಓರ್ವ ಯುವಕನ ಕಾರಿನಲ್ಲಿ ಬರುತ್ತಿರುವಾಗ ದಾರಿ ಮಧ್ಯದಲ್ಲಿ ಒಂದು ಸಣ್ಣ ಅಂಗಡಿಯ ಮುಂದೆ ನಿಲ್ಲಿಸಲು ಹೇಳಿದರು. ಅದು ಮುಸ್ಲಿಂ ಧರ್ಮೀಯರ ಅಂಗಡಿಯಾಗಿತ್ತು. ಗುರುನಾಥರು ಆ ಅಂಗಡಿಯಿಂದ ಕಾಫಿ ತರಿಸಿ ಕುಡಿದರು. ಉಳಿದವರಿಗೂ ಕುಡಿಯಲು ಹೇಳಿದರಾದರೂ ಕಾರಿನ ಮಾಲೀಕನನ್ನು ಹೊರತು ಇನ್ಯಾರೂ ಕುಡಿಯಲಿಲ್ಲ.
ಮತ್ತೊಮ್ಮೆ ಅದೇ ಯುವಕನ ಕಾರಿನಲ್ಲಿ ಬರುತ್ತಿರುವಾಗ ಕಾರಿನ ಚಕ್ರ ಸ್ಫೋಟಗೊಂಡಿತು. ದಾರಿಯಲ್ಲಿ ಚಕ್ರ ಸರಿಪಡಿಸುವವರು ಯಾರೂ ಇಲ್ಲವಲ್ಲ ಎಂದು ಯೋಚಿಸುತ್ತಿರುವಾಗ ಎಲ್ಲಿಂದಲೋ ಬಂದ ನಾಲ್ಕೈದು ಮುಸ್ಲಿಂ ಯುವಕರು ಕಾರಿನ ಚಕ್ರವನ್ನು ಬದಲಿಸಿಕೊಟ್ಟರು. ಕೈಯಲ್ಲಿ ಕೊಡಲು ಕಾಸಿಲ್ಲದ ಆ ಹುಡುಗ ಹಣ್ಣನ್ನು ಮಾತ್ರ ನೀಡಲು, ಗುರುನಾಥರು ಒಂದಷ್ಟು ಕಾಸನ್ನು ನೀಡಿದರು.
ಇನ್ನೇನು ಕಾರು ಹೊರಡಬೇಕು ಅನ್ನುವಷ್ಟರಲ್ಲಿ ಅಲ್ಲೇ ಇದ್ದ ಮನೆಯೊಂದರಿಂದ ಹೊರಬಂದ ಮುಸ್ಲಿಂ ಮಹಿಳೆಯೊಬ್ಬಳು ಓಡೋಡಿ ಬಂದು ಗುರುನಾಥರಿಗೆ ಕೈಮುಗಿದು ಹೀಗೆ ವಿನಂತಿಸಿದಳು. "ಸ್ವಾಮಿ ನನ್ನ ಮಗ ಲಾರಿ ಚಾಲಕನಾಗಿರುವನು. ಆತನಿಗೆ ಯಾವುದೇ ಆಪತ್ತು ಬರದಂತೆ ಕಾಪಾಡಿ".
ಆಗ ಗುರುನಾಥರು "ಚಿಂತಿಸಬೇಡ ತಾಯಿ. ಇನ್ನು ಆರು ತಿಂಗಳಲ್ಲಿ ನಿನ್ನ ಮಗ ಲಾರಿಯ ಮಾಲೀಕನಾಗುವನು" ಎಂದು ಅಭಯವಿತ್ತರು. ಇದರಿಂದ ಸಂತಸಗೊಂಡ ಆಕೆ ತನ್ನ ಮನೆಗೆ ಬಂದು ಆತಿಥ್ಯ ಸ್ವೀಕರಿಸಬೇಕೆಂದು ಹಠ ಮಾಡತೊಡಗಿದಳು.
ಕೊನೆಗೆ ಒಪ್ಪಿದ ಗುರುನಾಥರು ಆಕೆಯ ಮನೆಗೆ ಹೋಗಿ ಆಕೆಯ ಕೈಯಿಂದ ಒಂದು ಲೋಟ ನೀರು ಕುಡಿದು ಆಶೀರ್ವದಿಸಿ ಬಂದರು. ಗುರುವಾಕ್ಯದಂತೆಯೇ ಆಕೆಯ ಮಗ ಲಾರಿಯನ್ನು ತೆಗೆದುಕೊಂಡರು.
ಮತ್ತೊಂದು ಸಂದರ್ಭ. ಇಂಜಿನೀಯರಿಂಗ್ ನಲ್ಲಿ ನಪಾಸಾದ ವಿದ್ಯಾರ್ಥಿಯೊಬ್ಬ ಗುರುನಾಥರಲ್ಲಿಗೆ ಬಂದು ತನ್ನ ಸಮಸ್ಯೆಗೆ ಪರಿಹಾರ ನೀಡಬೇಕೆಂದು ವಿನಂತಿಸಿದನು.
ಆಗ ಗುರುನಾಥರು ಆತನಿಗೆ ಒಂದು ಪೆನ್ನು, ಒಂದು ಪ್ಯಾಕ್ ಬಿಸ್ಕತ್ತು, ಒಂದು ಪ್ಯಾಕ್ ಊದುಬತ್ತಿ, ಒಂದು ಪ್ಯಾಕ್ ಸಿಗರೇಟು ತರಲು ಹೇಳಿದರು.
"ಅದು ಏಕೆ? ಎಂದು ಕೇಳಿ ಇನ್ನೇನು ಬೇಕೆಂದು ಇನ್ನೊಮ್ಮೆ ಹೇಳಿ, ನಾನು ಬರೆದುಕೊಳ್ಳುತ್ತೇನೆ" ಎಂದು ನುಡಿದ ಆ ವಿದ್ಯಾರ್ಥಿಗೆ ಗುರುನಾಥರು "ನನ್ನ ನೋಡಿದ್ಯಲ್ಲಯ್ಯಾ? ಸಾಕು ನಡಿ" ಎಂದು ನುಡಿದರು. ಆಗ ಜೊತೆಯಲ್ಲೇ ಇದ್ದ ಚಿಕ್ಕಮಗಳೂರಿನ ಯುವಕ ಸಲುಗೆಯಿಂದ "ಏನಂದ್ರಿ ಗುರುನಾಥರೇ?" ಎಂದು ಕೇಳಿದನು. ಆಗ ಗುರುನಾಥರು ಸಲುಗೆಯಿಂದ "ಗುದ್ದಿ ಬಿಡ್ತೀನಿ ನೋಡು" ಎಂದು ಹೇಳಿ ಮಾತು ನಿಲ್ಲಿಸಿದರು.....,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Parama poojya venkatachala avadootarige nanna bhakti poorvaka namanagalu. Swamy Yellaranu sadaa kaala Kaapadi, Harasi asheervadisi. Sarve jano sukinobavantu.
ReplyDelete