ಒಟ್ಟು ನೋಟಗಳು

Sunday, February 26, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 145


    ಗ್ರಂಥ ರಚನೆ - ಚರಣದಾಸ 

ಚಂದ್ರಶೇಖರ ಪಾಹಿಮಾಂ 



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಗುರುನಾಥರ ದೂರದ ಸಂಬಂಧಿಯೂ ಆದ ಒಬ್ಬ ಹುಡುಗ ಗುರು ನಿವಾಸಕ್ಕೆ ಆಗಾಗ್ಗೆ ಬರುತ್ತಿದ್ದರು. ಮನೆಯ ಆರ್ಥಿಕ ಸ್ಥಿತಿ ಸಾಧಾರಣವಾಗಿತ್ತು. ಗುರುನಾಥರ ಮಗನ ಸ್ನೇಹಿತನೂ ಆಗಿದ್ದ ಆತ ಗುರು ನಿವಾಸದ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. 

ಆತ ಸಾಮಾನ್ಯವಾಗಿ ಅಗತ್ಯಕ್ಕಿಂತ ಹೆಚ್ಚು ಮಾತನಾಡುತ್ತಿರಲಿಲ್ಲ. ನಾನು ಗುರು ನಿವಾಸಕ್ಕೆ ಬಂದ ದಿನದಿಂದಲೂ ಆತ ಹಾಗೂ ಅವರ ಹಿರಿಯ ಸೋದರ ನನಗೆ ಪರಿಚಯವಿತ್ತು. ಸಾತ್ವಿಕ ಗುಣದವರಾದ ಇಬ್ಬರೂ ನಂತರದಲ್ಲಿ ನನ್ನೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿರುವರು. ಆತ ತೀರಾ ಇತ್ತೀಚೆಗೆ ಸಿಕ್ಕಾಗ ಅವರು ಮಾತನಾಡುತ್ತಾ  ಜೀವನದಲ್ಲಿ ನಡೆದ ಘಟನೆಯನ್ನು ಬಿಚ್ಚಿಟ್ಟರು. 

ನಾನು ಇಂಜಿನೀಯರಿಂಗ್ ಓದುತ್ತಿದ್ದ ಸಂದರ್ಭ, ಅದರಲ್ಲಿನ ಒಂದು ವಿಷಯ ನನಗೆ ಅರ್ಥವಾಗುತ್ತಿರಲಿಲ್ಲ. ಏನೇ ಮಾಡಿದರೂ ಒಂದು ಚೂರೂ ತಲೆಗೆ ಹತ್ತಲಿಲ್ಲ. ಇದೆ ಸಂದರ್ಭ ನನ್ನ ಪರೀಕ್ಷೆಯ ಹಿಂದಿನ ದಿನ ಗುರುನಾಥರು ಬೆಂಗಳೂರಿಗೆ ಬಂದ ವಿಷಯ ತಿಳಿದು ಅಲ್ಲಿಗೆ ಹೋಗಿ ಗುರುನಾಥರಿಗೆ ನಮಸ್ಕರಿಸಿದೆ. ಗುರುದರ್ಶನಕ್ಕಾಗಿ ಬಹಳ ಜನ ಬಂದಿದ್ದ ಕಾರಣ ನನಗೆ ಏನನ್ನು ಮಾತನಾಡುವ ಅವಕಾಶ ಸಿಗಲಿಲ್ಲ. ಈ ಮಧ್ಯೆ ಗುರುನಾಥರು ನಮ್ಮೆಲ್ಲರನ್ನೂ ಮೈಸೂರಿಗೆ ಪಾದುಕಾ ಪೂಜೆಗಾಗಿ ಕಳಿಸಿಕೊಟ್ಟರು. ಅಲ್ಲಿಂದ ಬೆಂಗಳೂರಿಗೆ ತಿರುಗಿ ಬರುವಾಗ ರಾತ್ರಿ ಒಂದು ಗಂಟೆ ಆಗಿತ್ತು. ಈ ವಿಷಯ (subject) ನನಗೆ ಏನೂ ಅರ್ಥವಾಗುತ್ತಿಲ್ಲ. ಎಷ್ಟೇ ಓದಿದರೂ ತಲೆಯಲ್ಲಿ ನಿಲ್ಲುತ್ತಿಲ್ಲ. ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದೆ ಅಸಹಾಯಕನಾಗಿ. ಆಗ ಅಲ್ಲೇ ಗುರುಭಕ್ತರ ಮನೆಯೊಳಗಿದ್ದ ಚಂದ್ರಶೇಖರ ಭಾರತೀ ಯತಿವರ್ಯರ ಫೋಟೋಗೆ ಹಾಕಿದ್ದ ಒಂದು ಹೂವನ್ನು ನನಗೆ ನೀಡಿ "ಇದನ್ನು ಹಿಡಿದುಕೊಂಡು ಹೋಗು. ಎಲ್ಲವನ್ನೂ ಹೂವೇ ಬರೆಸುತ್ತೆ" ಎಂದು ಧೈರ್ಯ ನೀಡಿ ಕಳಿಸಿದರು. ವಾಸ್ತವವೆಂದರೆ ನಾನು ಆ ದಿನ ಒಂದಿನಿತೂ ಓದಿಕೊಂಡಿರಲಿಲ್ಲ. ಪರೀಕ್ಷೆಯಲ್ಲಿ ಏನು ಬರೆದೆನೋ ಅಂತಾನೂ ಗೊತ್ತಿಲ್ಲ. ಹೋಗಿ ಬರೆದು ಬಂದೆ ಅಷ್ಟು ಮಾತ್ರ ಗೊತ್ತು. ಆಶ್ಚರ್ಯವೆಂದರೆ ಗುರುವಾಕ್ಯದಂತೆಯೇ ನಾನು ಆ ವಿಷಯದಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆ ಹೊಂದಿದೆ. ಇಂದು ನಾನು ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದು ಗುರುಕೃಪೆಯಿಂದಾಗಿಯೇ. ನನ್ನ ಜೀವನದ ಪ್ರತಿ ಹೆಜ್ಜೆಯಲ್ಲೂ ಗುರುನಾಥರು ಜೊತೆಗಿದ್ದು ನಡೆಸುತ್ತಿದ್ದಾರೆ ಎಂದು ಕೃತಜ್ಞತೆಯಿಂದ ಸ್ಮರಿಸಿದರು. ಮಾತ್ರವಲ್ಲ, ಚರಣದಾಸನಾದ ನಾನು ನೋಡಿದಂತೆ ಸಮಸ್ಯೆ ಹೊತ್ತು ಗುರುನಿವಾಸಕ್ಕೆ ಬರುತ್ತಿದ್ದ ಹೆಚ್ಚಿನ ಭಕ್ತರಿಗೆ "ಚಂದ್ರಶೇಖರ...... " ಹೇಳಿಕೊಳ್ಳಿ ಅಥವಾ ಬರೆಯಿರಿ. ಅವನೇ ಎಲ್ಲಾ ದಾರಿ ಸುಗಮಗೊಳಿಸುತ್ತಾನೆ ತಿಳಿಯಿತೇ? ಎಂದು ಹೇಳುತ್ತಿದ್ದರು.....,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

1 comment:

  1. Parama poojya venkatachala gurugalige nanna bhakti poorvaka namanagalu. Sadaa kaala Yellaranu Harasi Daari torisi olleyadaaguvante asheervadisi Guruvarya. Hari om tatsat.

    ReplyDelete