ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 137
ಗ್ರಂಥ ರಚನೆ - ಚರಣದಾಸ
ಭಾವತೀವ್ರತೆಗೆ ಒಲಿವ ಗುರು
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಆ ಹುಡುಗ ಇಂಜಿನೀಯರಿಂಗ್ ಮುಗಿಸಿ ಒಳ್ಳೆಯ ಕೆಲಸದಲ್ಲಿದ್ದನು. ಆತ ಹೇಗೋ ಗುರು ಸಂಪರ್ಕವಾಗಿ ಆಗಾಗ್ಗೆ ಗುರುನಿವಾಸಕ್ಕೆ ಬರುತ್ತಿದ್ದನು. ಕೊನೆಕೊನೆಗೆ ಈ ಸಂಪರ್ಕ ಯಾವ ಮಟ್ಟದಲ್ಲಿತ್ತೆಂದರೆ ಆತ ಪ್ರತಿ ಶನಿವಾರ ಬೆಂಗಳೂರಿನಿಂದ ಹೊರಟು ಗುರುನಿವಾಸಕ್ಕೆ ಬಂದು ಆ ದಿನ ಪೂರ್ತಿ ಅಡುಗೆ ಹಾಗೂ ಇತರ ಕಾರ್ಯಗಳನ್ನು ಮಾಡಿ ತಾನೇ ಬಂದ ಭಕ್ತರಿಗೆಲ್ಲ ಬಡಿಸಿ ತಡ ರಾತ್ರಿ ಬಸ್ಸಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದನು.
ಮೊದ ಮೊದಲು ಗುರುನಾಥರು ಆತನನ್ನು ಹೇಗೆ ಪರೀಕ್ಷಿಸುತ್ತಿದ್ದರೆಂದರೆ ಸಣ್ಣಸಣ್ಣ ತಪ್ಪುಗಳಿಗೂ ವಿಪರೀತ ಬಯ್ಯುತ್ತಿದ್ದರು. ಆದರೂ ಆತ ಮಾತ್ರ ನಿರಂತರವಾಗಿ ಗುರುಸೇವಾ ನಿರತನಾಗಿರುತ್ತಿದ್ದನು. ಹೀಗೆ ಕೆಲವು ತಿಂಗಳು ನಡೆದ ನಂತರ ಗುರುನಾಥರೇ ಅವನಿಗೆ ಚಿಕ್ಕಮಗಳೂರು ಸಮೀಪದ ಕನ್ಯೆಯನ್ನು ನೋಡಿ ಮದುವೆಯನ್ನು ಮಾಡಿಸಿದರು.
ಆತ ಕೆಲ ವರ್ಷ ಆಂಧ್ರಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭ ಒಮ್ಮೆ ಊರಿಗೆ ಬಂದು ತಿರುಗಿ ಹೊರಡುವ ಸಮಯ. ಒಮ್ಮೆ ಹೊರಟರೆಂದರೆ ಮತ್ತೆ ಊರಿಗೆ ಬರುವುದು ಆರೆಂಟು ತಿಂಗಳಿಗೊಮ್ಮೆ. ರಜೆ ಸಿಕ್ಕುತ್ತಿದ್ದುದು ಅಪರೂಪವಾಗಿತ್ತು. ದಂಪತಿಗಳನ್ನು ಕಲಿಸಲು ರೈಲು ನಿಲ್ದಾಣಕ್ಕೆ ಬಂಧುಗಳೆಲ್ಲರೂ ಬಂದಿದ್ದರು. ಆತನ ಪತ್ನಿ ಮತ್ತೆ ಎಂದು ಗುರುದರ್ಶನವಾಗುವುದೋ? ಇನ್ನೊಂದು ಬಾರಿ ಗುರುದರ್ಶನ ನೀಡಬಾರದೇ? ಎಂದು ಮನದಲ್ಲೇ ತೀವ್ರವಾಗಿ ಪ್ರಾರ್ಥಿಸುತ್ತಿದ್ದಳು.
ರೈಲು ಬರಲು ಇನ್ನು ಕೇವಲ ಎರಡು ನಿಮಿಷ ಬಾಕಿ ಇತ್ತು. ಆಗ ಗುರುನಾಥರು ಇದ್ದಕ್ಕಿದ್ದಂತೆಯೇ ರೈಲು ನಿಲ್ದಾಣಕ್ಕೆ ಬಂದು ಈ ದಂಪತಿಗಳಿಗೆ ಶುಭ ಹಾರೈಸಿದರು. ತನ್ನ ಮನದಾಸೆ ಈಡೇರಿದ್ದಕ್ಕೆ ಆಕೆಗೆ ಅತೀವ ಆನಂದವಾಯಿತು. ಆದರೆ ಇನ್ನು ಒಂದು ನಿಮಿಷ, ಹೊರಡಬೇಕಲ್ಲ ಎಂದು ತಲ್ಲಣಿಸುತ್ತಿದ್ದಳು. ಆಗ ರೈಲ್ವೇ ಇಲಾಖೆಯಿಂದ ಒಂದು ಮಾಹಿತಿ ಬಂತು. ಅದೇನೆಂದರೆ, ಅವರು ಹೋರಾಡಬೇಕಾದ ರೈಲು ಇನ್ನು ಹದಿನೈದು ನಿಮಿಷ ತಡವಾಗುವುದೆಂದು ತಿಳಿದು ಬಂತು.
ಹೀಗೆ ಭಕ್ತರ ಚಿಕ್ಕ ಪುಟ್ಟ ಭಾವಗಳಿಗೂ ಅವರವರ ಭಾವ ಶುದ್ಧತೆ ಹಾಗೂ ಭಾವತೀವ್ರತೆಯ ಆಧಾರದಲ್ಲಿ ಒಲಿಯುತ್ತಿದ್ದ ಗುರುನಾಥರ ಕರುಣೆ ಹಾಗೂ ಪ್ರೀತಿ ಅನನ್ಯವಾದುದು......,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya venkatachala avadootarige nanna saashtaanga pranaamagalu. Guru venkatachala Avara asheervaada mattu karune sadaa kaala doreyali. Hari om tatsat.
ReplyDelete