ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 134
ಗ್ರಂಥ ರಚನೆ - ಚರಣದಾಸ
ಅರಳೀಎಲೆ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಬೆಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿರುವ ಒಬ್ಬ ಹುಡುಗ ಆಗಾಗ್ಗೆ ಗುರು ನಿವಾಸಕ್ಕೆ ಬರುತ್ತಿದ್ದರು. ಆತ ಕಾಲೇಜು ದಿನಗಳಿಂದಲೂ ನನಗೆ ಪರಿಚಯ ಹಾಗೂ ಪರಮಾಪ್ತ ಸ್ನೇಹಿತನೂ ಕೂಡಾ.
ಆತ ಬೆಂಗಳೂರಿನ ಕಾಲೇಜಿಗೆ ಕೆಲಸಕ್ಕೆ ಸೇರಿ ಸುಮಾರು ಒಂದು ವರ್ಷ ಕಳೆದಿರಬಹುದು. ರಜೆಯ ಮೇಲೆ ತಮ್ಮೂರಿಗೆ ಬಂದು ಅಲ್ಲಿದ್ದ ಗುರುನಿವಾಸಕ್ಕೆ ಬಂದರು.
ಗುರುಗಳ ಅಣತಿಯಂತೆ ಗುರುಪುತ್ರನು ಇವರೊಂದಿಗೆ ಬೆಂಗಳೂರಿಗೆ ಹೊರಟರು. ಆಗ ಗುರುನಾಥರು ಆ ಹುಡುಗನಿಗೆ ಹೀಗೆ ಕೇಳಿದರು. "ನಿನಗೆ ಕಾಲೇಜಿನಲ್ಲಿ ಮೌಲ್ಯಮಾಪನ ಕಾರ್ಯ ಇರುತ್ತದೆಯೇ?".
ಆಗ ಆ ಹುಡುಗನು "ಇಲ್ಲ ಗುರುಗಳೆ, ಏಕೆಂದರೆ ಮೌಲ್ಯಮಾಪನ ಕಾರ್ಯ ಸಿಗಲು ಕನಿಷ್ಠ ಮೂರು ವರ್ಷ ಸೇವೆಯಲ್ಲಿರಬೇಕು" ಎಂದರು.
ಗುರುನಾಥರು ಸುಮ್ಮನೆ ದಿಟ್ಟಿಸಿ ನೋಡಿ ಸುಮ್ಮನಾದರು. ಆ ಹುಡುಗನು ಗುರು ಪುತ್ರನೊಂದಿಗೆ ಬೆಂಗಳೂರು ಕಡೆಗೆ ಹೊರಟರು. ದಾರಿ ಮಧ್ಯೆ ಅಂದರೆ ಅರಸೀಕೆರೆ ಚೆನ್ನರಾಯಪಟ್ಟಣ ಮಧ್ಯೆ ಪ್ರಕೃತಿ ಕರೆಗಾಗಿ ಅವರಿಬ್ಬರೂ ಕಾರಿನಿಂದ ಇಳಿದರು.
ಆಗ ಆ ಹುಡುಗನಿಗೆ ಕಾಲೇಜು ಮುಖ್ಯಸ್ಥರಿಂದ ಕರೆ ಬಂತು. ಅದರ ಸಾರಾಂಶ ಹೀಗಿತ್ತು. "ನಿಮಗೆ ಎಲ್.ಐ.ಸಿ. ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪನ ಮಾಡಲು ಅರ್ಹತಾ ಪತ್ರವನ್ನು ರವಾನಿಸಲಾಗಿದೆ. ದಯಮಾಡಿ ಸಕಾಲದಲ್ಲಿ ಮೌಲ್ಯಮಾಪನಕ್ಕೆ ಹಾಜರಾಗುವುದು" ಎಂದು. ಆ ಹುಡುಗ ಈ ವಿಚಾರವನ್ನು ತಿಳಿದು ದಂಗಾದನು. ಕಾರಣ ಕೆಲಸಕ್ಕೆ ಸೇರಿ ಒಂದೇ ವರ್ಷಕ್ಕೆ ಮೌಲ್ಯಮಾಪನ ಕಾರ್ಯಕ್ಕೆ ಅರ್ಹತೆ ಸಿಗುವುದು ಹುಡುಗಾಟವಾಗಿರಲಿಲ್ಲ. ಗುರು ಕೃಪೆಯಿಂದಾಗಿ ಆ ಅವಕಾಶವು ಅವನದಾಗಿತ್ತು.
ಅದೇ ಹುಡುಗ ಮತ್ತೊಮ್ಮೆ ಊರಿಗೆ ಬಂದಿದ್ದಾಗ ಅವನ ತಾಯಿ ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈ ಘಟನೆಯನ್ನು ಇತ್ತೀಚಿಗೆ ಚರಣದಾಸನಾದ ನನ್ನನ್ನು ಭೇಟಿಯಾದಾಗ ಈ ರೀತಿಯಾಗಿ ವಿವರಿಸಿದರು.
"ನನ್ನ ತಾಯಿಯ ಹೊಟ್ಟೆ ನೋವಿಗೆ ಕಾರಣ ಹರ್ನಿಯಾ ಎಂದು ವೈದ್ಯರ ಪರೀಕ್ಷೆಯಿಂದ ತಿಳಿದು ಬಂತು. ನಾನು ಮರುದಿನ ಕಾಲೇಜಿನ ಕೆಲಸಕ್ಕಾಗಿ ಹೋಗಲೇಬೇಕಾದ ಅನಿವಾರ್ಯತೆ ಇತ್ತು. ಆದರೆ ತಾಯಿಯ ಆರೋಗ್ಯವೂ ಅಷ್ಟೇ ಮುಖ್ಯವಾಗಿತ್ತು. ನಾನು ಅಮ್ಮನನ್ನು ಕರೆದುಕೊಂಡು ಗುರುನಿವಾಸಕ್ಕೆ ಬಂದೆ. ಗುರುಗಳು ಇರಲಿಲ್ಲ.
ಅದಾಗಲೇ ದಣಿದಿದ್ದ ನಾನು ಅಲ್ಲಿಯೇ ಮಲಗಿಕೊಂಡೆ. ಸುಮಾರು ಮಧ್ಯಾನ್ಹ 3-30 ರ ಹೊತ್ತಿಗೆ ಗುರುನಾಥರ ಧ್ವನಿ ಕೇಳಿ ಎದ್ದು ಕುಳಿತೆ. ಗುರುನಾಥರು ಬಂದಿದ್ದರು. ಆ ನಂತರ ನನ್ನನ್ನು ಕರೆದುಕೊಂಡು ಊರೊಳಗೆ ಹಾಗೂ ಈಶ್ವರ ದೇಗುಲಕ್ಕೆ ಕರೆದುಕೊಂಡು ಹೋದರು. ಅಲ್ಲಿ ಅರಳಿ ಮರದ ಕೆಳಗೆ ಕುಳಿತಿದ್ದಾಗ ಅಮ್ಮನ ಅನಾರೋಗ್ಯದ ಕುರಿತಾಗಿ ಹೇಳಿದೆ. ಆದರೆ ಗುರುನಾಥರು ಏನೂ ಪ್ರತಿಕ್ರಿಯಿಸಲಿಲ್ಲ. ಅಲ್ಲಿಂದ ಎಂಟು ಗಂಟೆ ಹೊತ್ತಿಗೆ ಮನೆಗೆ ಬಂದೆವು.
ಇದ್ದಕ್ಕಿದ್ದಂತೆ ನನ್ನ ಕಡೆ ತಿರುಗಿದ ಗುರುನಾಥರು ಹೀಗೆ ಹೇಳಿದರು "ನೋಡಯ್ಯಾ ಸೀದಾ ಅರಳಿ ಮರದ ಸಮೀಪ ಹೋಗು. ಅಲ್ಲಿಂದ ಹನ್ನೆರಡು ಅರಳಿ ಎಲೆಗಳನ್ನು ಎತ್ತಿಕೊಂಡು ಬಾ" ಎಂದರು. ನಾನು ಹಾಗೆ ಮಾಡಿದೆ.
ನಂತರ ಗುರುನಾಥರು ಹೀಗೆ ಮುಂದುವರೆಸಿದರು. "ನಿನ್ನ ತಾಯಿಯ ಹೊಟ್ಟೆ ನೋವಿಗೆ ಇದೇ ಔಷಧಿ. ಪ್ರತಿದಿನ ಬೆಳಿಗ್ಗೆ ಎದ್ದು ಒಂದು ಎಲೆಯನ್ನು ಸೂರ್ಯನಿಗೆ ತೋರಿಸಿ ನಿನ್ನ ತಾಯಿಯ ಹೊಟ್ಟೆಯ ಮೇಲಿಡು. ಅಷ್ಟು ಸಾಕು. ಇನ್ನು ಮುಂದೆ ಅಮ್ಮನ ಆರೋಗ್ಯ ಸರಿಯಾಗುವುದು" ಎಂದರು. ನಾನು ಗುರುಗಳಿಗೆ ನಮಸ್ಕರಿಸಿ ಅಮ್ಮನೊಂದಿಗೆ ಊರಿಗೆ ವಾಪಾಸಾದೆ. ಆ ನಂತರ ಅಮ್ಮ ಗುರುನಾಥರು ಹೇಳಿದಂತೆಯೇ ಮಾಡಿದರು.
"ನೀವು ನಂಬುತ್ತೀರೋ ಇಲ್ಲವೋ ಇಂದಿಗೂ ನನ್ನ ತಾಯಿಗೆ ಹೊಟ್ಟೆ ನೋವು ಎಂದೂ ಬಾಧಿಸಲಿಲ್ಲ. ವೈದ್ಯರಿಂದ 'ಶಸ್ತ್ರಚಿಕಿತ್ಸೆಯಿಂದ ಮಾತ್ರ ಗುಣಮುಖವಾಗುವುದು' ಎಂದು ಹೇಳಲ್ಪಟ್ಟಿದ್ದ ಖಾಯಿಲೆ ಕೇವಲ ಒಂದು ಅರಳಿ ಎಲೆಯಿಂದ ಗುಣವಾಗುವುದೆಂದರೆ ಆ ಗುರುವಿನ ಶಕ್ತಿ ಎಂತಹದ್ದಿರಬಹುದು".
"ಆ ಗುರು ನನಗೆ ಹಾಗೂ ನನ್ನ ಕುಟುಂಬದ ಮೇಲೆ ತೋರಿದ ಪ್ರೀತಿಗೆ ಹಿಂತಿರುಗಿ ಕೊಡಲು ನಮ್ಮಲ್ಲಿ ಏನೂ ಇಲ್ಲ. ಇದ್ದರೆ ಅದು ಆ ಗುರುವೇ ಹೇಳಿಕೊಟ್ಟ ಉತ್ತಮ ನಡವಳಿಕೆ ಮಾತ್ರ" ಎಂದು ನುಡಿದು ಕ್ಷಣಕಾಲ ಭಾವುಕರಾದರು.....,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya venkatachala avadootarige nanna bhakti poorvaka namanagalu. Swamy Yellaranu sadaa kaala Harasi asheervadisi Kaapadi. Sarve jano sukinobavantu.
ReplyDelete