ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 127
ಗ್ರಂಥ ರಚನೆ - ಚರಣದಾಸ
ಗತಿ - ಮತಿ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಇತ್ತೀಚೆಗೆ ಬೇಲೂರು ಸಮೀಪದ ವ್ಯಕ್ತಿಯೊಬ್ಬರು ಸಿಕ್ಕಿದ್ದರು. ಅವರು ಹಿಂದಿನಿಂದಲೂ ಸಖರಾಯಪಟ್ಟಣಕ್ಕೆ ಬರುತ್ತಿದ್ದರು.
ಚರಣದಾಸನಾದ ನಾನು ಅವರನ್ನು ನಿಮ್ಮ ಅನುಭವವನ್ನು ತಿಳಿಸುವಿರಾ? ಎನ್ನಲು
ಆತ, ನನ್ನ ಜೀವನದ ಗತಿ-ಮತಿ ಎಲ್ಲವೂ ಆಗಿರುವ ನಮ್ಮ ಗುರುನಾಥರ ಬಗ್ಗೆ ಹೇಳಲು ಪದಗಳೇ ಸಾಕಾಗುವುದಿಲ್ಲ ಎಂದು ನುಡಿದು ಕೆಲಕ್ಷಣ ಭಾವಪರವಶರಾಗಿ ಹೀಗೆ ಹೇಳತೊಡಗಿದರು.
ಸ್ವಾಮಿ ನಾನು ಗುರುನಿವಾಸಕ್ಕೆ ಬರುತ್ತಿದ್ದ ವಿಚಾರ ನಿಮಗೆ ತಿಳಿದೇ ಇದೆ. ಈಗ ಆರೆಂಟು ವರ್ಷಗಳ ಹಿಂದೆ ನಾನು ನನ್ನ ಸ್ನೇಹಿತರು ಬಂಧುಗಳು ಒಟ್ಟಾಗಿ ಐದಾರು ಜನ ಕಾರನ್ನು ಬಾಡಿಗೆಗೆ ಪಡೆದು ಗುರುದರ್ಶನಕ್ಕಾಗಿ ಸಖರಾಯಪಟ್ಟಣದ ಕಡೆಗೆ ಹೊರಟೆವು. ನಾವು ಅರ್ಧ ದಾರಿ ಕ್ರಮಿಸಿ ಆಗಿತ್ತು. ಆಗ ನನಗೆ ಒಂದು ದೂರವಾಣಿ ಕರೆ ಬಂತು.
ಕರೆ ಮಾಡಿದವರು ಹೀಗೆ ಹೇಳಿದರು.
ನನ್ನ ಜೊತೆಯಲ್ಲಿ ನನ್ನ ಮಾವನವರಿದ್ದರು. ಅವರ ಮಗ (ಸುಮಾರು 5-6 ವರ್ಷ) ಶಾಲೆಯಿಂದ ಬರುವಾಗ ಶಾಲಾ ಬಸ್ ಕಂಡಕ್ಟರ್ ನ ಆತುರದಿಂದಾಗಿ ಅದೇ ಬಸ್ ನ ಹಿಂದಿನ ಚಕ್ರದಡಿ ಸಿಕ್ಕಿಕೊಂಡನು. ಬಸ್ಸು ಸರಿಯಾಗಿ ಅವನ ಸೊಂಟದ ಮೇಲೆಯೇ ಹಾಡು ಹೋಗಿತ್ತು.
ಗಾಬರಿಗೊಂಡಿದ್ದ ನನ್ನ ಮಾವನವರಿಗೆ ನಾನು ಈ ರೀತಿ ಹೇಳಿದೆ. "ನೋಡಿ, ನಮ್ಮೊಂದಿಗೆ ನಮ್ಮ ಗುರುನಾಥರಿದ್ದಾರೆ. ಅವರು ಇಂದಿಗೂ ನಮ್ಮ ಕೈ ಬಿಡುವುದಿಲ್ಲ" ಎಂದು ಧೈರ್ಯ ತುಂಬಿದೆ. ಹಾಗೂ ನಾನೂ ಅಂತೆಯೇ ಪ್ರಾರ್ಥನೆ ಮಾಡಿದೆ. ನಾವು ಸಖರಾಯಪಟ್ಟಣಕ್ಕೆ ಹೋಗುವುದರ ಬದಲಿಗೆ ಆ ಬಾಲಕನನ್ನು ಸೇರಿಸಿದ್ದ ಹಾಸನದ ಆಸ್ಪತ್ರೆಗೆ ಬಂದೆವು.
ಅಲ್ಲಿಗೆ ಬಂದ ನಮಗೆ ಆಶ್ಚರ್ಯ ಕಾದಿತ್ತು. ಅಷ್ಟು ದೊಡ್ಡ ಬಸ್ ಮೈಮೇಲೆ ಹಾದು ಹೋಗಿದ್ದರೂ ಏಟು ಮಾತ್ರ ಸೈಕಲ್ ಗುದ್ದಿದರೆ ಆಗುವಷ್ಟು ಸಣ್ಣ ಪ್ರಮಾಣದಲ್ಲಿ ಆಗಿತ್ತು. ಇದಕ್ಕೆ ಇತರರು ಏನೆನ್ನುವರು ಎಂಬ ತರ್ಕಗಳು ನನಗೆ ಬೇಡ. ಆದರೆ ನಾವು ನಂಬಿದ ನಮ್ಮ ಗುರು ನಮ್ಮನ್ನು ಕೈಬಿಡಲಿಲ್ಲ, ಎಂದೂ ಕೈ ಬಿಡಲಾರ. ಇಂದಿಗೂ ಆ ನಂಬಿಕೆಯಲ್ಲೇ ಜೀವನ ಸಾಗಿಸುತ್ತಿರುವೆನು. ಎಂದು ಕಣ್ತುಂಬಿಕೊಂಡರು.....,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya venkatachala swamy Avara paadagalige nanna saashtaanga pranaamagalu. Swamy yellarigu manashanti haagu nemmadi karunisi asheervadisi. Hari om tatsat.
ReplyDelete