ಒಟ್ಟು ನೋಟಗಳು

Tuesday, February 14, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 133


    ಗ್ರಂಥ ರಚನೆ - ಚರಣದಾಸ 

ಸಕ್ಕರೆ 



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಮತ್ತೆ ಕೆಲ ಹೊತ್ತು ತಡೆದು ಮತ್ತೊಂದು ಘಟನೆ ಹೇಳಲಾರಂಭಿಸಿದರು. ಸ್ವಾಮಿ ನನ್ನ ತಾಯಿ 6-7 ವರ್ಷದ ಹಿಂದೆ ಪಾರ್ಶ್ವವಾಯು ರೋಗಕ್ಕೆ ತುತ್ತಾದರು. 

ಆ ಸಮಯಕ್ಕೆ ಸರಿಯಾಗಿ ನಾನು ಗುರುನಿವಾಸದ ಕಡೆಗೆ ಹೊರಟಿದ್ದೆ. ಆಗ ಕರೆ ಮಾಡಿದ ಚಿಕ್ಕಮಗಳೂರು ವಾಸಿಯಾದ ಒಬ್ಬ ಬಂಧುಗಳು ಗುರುನಿವಾಸಕ್ಕೆ ತಲುಪಿಸಲು ಹೂವನ್ನು ನನ್ನ ಹಸ್ತ ಕಳಿಸಿಕೊಟ್ಟರು. 

ನಾನು ಶ್ರದ್ಧೆಯಿಂದ ಆ ಹೂವುಗಳನ್ನು ಸಖರಾಯಪಟ್ಟಣಕ್ಕೆ ತಂದು ಗುರುಗಳ ಹಸ್ತ ನೀಡಿದೆ. ಆಗ ಅಲ್ಲಿ ಹಲವು ಜನ ಮಹಿಳೆಯರಿದ್ದರು. 

ನನ್ನನ್ನು ಕಂಡ ಗುರುನಾಥರು "ಬಾರಯ್ಯಾ ನಿನಗೋಸ್ಕರ ಕಾಯುತ್ತಾ ಇದ್ದೆ" ಅಂದರು. ನಾನು ಆ ಹೂವುಗಳನ್ನು ಗುರುಗಳಿಗೆ ಸಮರ್ಪಿಸಿ ನಮಸ್ಕರಿಸಿದೆ. ಗುರುನಾಥರ ಅಣತಿಯಂತೆ ಅಲ್ಲಿದ್ದ ಕೆಲ ಮಹಿಳೆಯರು ನನಗೆ ನಮಸ್ಕರಿಸಿದರು. ಈ ನಮಸ್ಕಾರದ ಉದ್ದೇಶವೇನೆಂದು ನನಗೆ ತಿಳಿಯದ ನಾನು ಎಲ್ಲವೂ ಗುರುವಿನ ಇಚ್ಚೆ ಎಂದು ಸುಮ್ಮನಿದ್ದೆ. ಕೆಲ ಹೊತ್ತಿನ ನಂತರ ಎರಡು ಮೂರು ತಿಂಗಳಿನಿಂದ ನನ್ನ ತಾಯಿ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿರುವ ವಿಚಾರವನ್ನು ಗುರುಗಳಿಗೆ ತಿಳಿಸಿದೆ. 

ವಿಷಯ ತಿಳಿದ ಗುರುನಾಥರು ಸ್ವಲ್ಪ ಸಕ್ಕರೆಯನ್ನು ನೀಡಿ ಅಮ್ಮನಿಗೆ ತಿನ್ನಲು ತಿಳಿಸಿದರು. ಹಾಗೂ ನನಗೂ ತಿನ್ನುವಂತೆ ತಿಳಿಸಿದರು. ನಾನು ಗುರುಗಳಿಗೆ ನಮಸ್ಕರಿಸಿ ಮನೆಗೆ ವಾಪಸಾಗಿ ಅಮ್ಮನಿಗೆ ಸಕ್ಕರೆಯನ್ನು ನೀಡಿದೆ. ಅದನ್ನು ಬಳಸಿದ ನಂತರ ನನ್ನ ತಾಯಿಯವರು ಇಂದು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವಷ್ಟು ಸಬಲರಾಗಿರುವರು. ಮಾತ್ರವಲ್ಲ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವಷ್ಟು ಆರೋಗ್ಯವಾಗಿರುವರು. ಇದಕ್ಕೆಲ್ಲ ಕಾರಣ ನನ್ನ ಗುರುವರ್ಯನ ಕರುಣೆ ಎಂದು ಹೇಳಿ ನಿಲ್ಲಿಸಿದರು.......,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

2 comments:

  1. Guru venkatachala Avara paadagalige nanna bhakti poorvaka namanagalu. Swamy sadaa kaala Yellaranu Harasi haagu asheervadisi Daari torisi Guruvarya. Hari om tatsat

    ReplyDelete
  2. Namgu gurugala hanugraha agutta guruji plz heli?

    ReplyDelete