ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 128
ಗ್ರಂಥ ರಚನೆ - ಚರಣದಾಸ
ಹುಯಿಲು
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಬೇಲೂರಿನ ಅದೇ ವ್ಯಕ್ತಿಯನ್ನು ಕುರಿತು, ನಮ್ಮ ಗುರುಗಳ ಬಗ್ಗೆ ಇನ್ನೇನಾದರೂ ಇದ್ದರೆ ಹೇಳಿರೆಂದು ವಿನಂತಿಸಿದೆ. ಕ್ಷಣಕಾಲ ಮೌನ ತಳೆದ ಅವರು ತಮ್ಮ ಮನದಾಳದಿಂದ ಗುರುವಿನ ಲೀಲಾಮೃತವನ್ನು ಹೀಗೆ ಹೇಳತೊಡಗಿದರು.
ಅಂದು ನನ್ನ ಜೊತೆ ಕಾರಿನಲ್ಲಿ ಬಂದಿದ್ದ ನನ್ನ ಮಾವ ಹಾಗೂ ಅವರ ಕೆಲ ಸ್ನೇಹಿತರು ಸೇರಿಕೊಂಡು ಕಾಫಿ ಬೀಜ ಮಾರಾಟದ ವ್ಯವಹಾರ ಆರಂಭಿಸಿದರು. ಕೆಲಕಾಲ ವ್ಯವಹಾರ ಚೆನ್ನಾಗಿಯೇ ನಡೆಯಿತಾದರೂ ಅದೇನಾಯಿತೋ ಇದ್ದಕ್ಕಿದ್ದಂತೆಯೇ ವ್ಯಾಪಾರ ಇಳಿಮುಖವಾಗತೊಡಗಿತು. ಕೊನೆ ಕೊನೆಗೆ ವ್ಯವಹಾರ ನಡೆಸುವುದೇ ದುಸ್ತರವಾಯಿತು.
ಕಾಫಿ ಬೀಜ ನೀಡಿದವರು ಹಣ ಕೊಡಿ ಎಂದು ಅಂಗಡಿ, ಮನೆ ಮುಂದೆ ಬರತೊಡಗಿದರು. ಈ ಹಿಂಸೆ ತಾಳಲಾರದೆ ನಮ್ಮ ಮಾವನವರು ಸಮೀಪದ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡರು.
ಮನೆಯ ಆಧಾರಸ್ತಂಭವನ್ನೇ ಕಳೆದುಕೊಂಡ ಕುಟುಂಬ ತುಂಬ ದಿಗಿಲಗೊಳಗಾಯಿತು. ಈ ಮಧ್ಯೆ, ಇವರಿಗೆ ಕಾಫಿ ಮಾರಿದ್ದ ಮಾಲೀಕನೊಬ್ಬ ತನಗೆ ಬರಬೇಕಾದ ಬಾಕಿ ಮೊತ್ತ ಏಳು ಲಕ್ಷ ರೂಪಾಯಿಯನ್ನು ಕೂಡಲೇ ಹಿಂತಿರುಗಿಸಬೇಕೆಂದು ಒತ್ತಾಯಿಸತೊಡಗಿದರು.
ಇವರು ಯಾವುದೇ ಉತ್ತರ ಕೊಡದಿದ್ದರಿಂದ ಆತ ದೇವರಿಗೆ ಹುಯಿಲು ಕೂಡುವೆ ಎಂದು ಬೆದರಿಸಿ ಹೊರಟುಹೋದ. ಈ ಮಧ್ಯೆ ನಮ್ಮ ಮಾವನವರ ಸಮಸ್ಯೆ ಹಾಗೆಯೇ ಉಳಿಯಿತು. ಕೊನೆಗೆ ಒಂದು ದಿನ ನಮ್ಮ ಅತ್ತೆಯವರ ಅಪೇಕ್ಷೆಯ ಮೇರೆಗೆ ನಾನು ಅತ್ತೆಯೊಂದಿಗೆ ಸಖರಾಯಪಟ್ಟಣಕ್ಕೆ ಬಂದೆ.
ಆ ಸಮಯ ಗುರುನಾಥರು ಈಶ್ವರ ದೇಗುಲದ ಮುಂದೆ ಕುಳಿತಿರುವುದನ್ನು ತಿಳಿದ ನಾನು ಮತ್ತು ನನ್ನ ಅತ್ತೆಯವರು ಅಲ್ಲಿಗೆ ಹೋದೆವು. ಅವರನ್ನು ನೋಡಿದಾಕ್ಷಣ ಗುರುನಾಥರು "ಏನು ಸಕಲೇಶಪುರದವರೇ?" ಎಂದು ಕೇಳಿದರು. ತಾವು ಒಂದೂ ಮಾತನಾಡದೇ ಗುರುನಾಥರು ತಮ್ಮ ಬಗ್ಗೆ ಹೇಳುವುದನ್ನು ಕೇಳಿ ನಮ್ಮ ಅತ್ತೆಯವರು ಆಶ್ಚರ್ಯಚಕಿತರಾದರು.
ಕೊನೆಗೆ ಭಕ್ತರೊಬ್ಬರ ಮೂಲಕ ಜಹಂಗೀರು ತರಿಸಿ ನನ್ನ ಅತ್ತೆಯ ಕೈಯಿಂದಲೇ ಎಲ್ಲರಿಗೂ ಕೊಡಿಸಿದರು. ಸ್ವಲ್ಪ ಹೊತ್ತಿನ ನಂತರ ಗುರುನಾಥರು "ಏನು ಹುಯಿಲು ಅಂದ ಹಾಗೆ ಕಾಣುತ್ತೆ" ಅಂದರು.
ಆಗ ನಾನು ಅತ್ತೆಯವರಿಗೆ ಅಂದು ಏಳು ಲಕ್ಷ ರೂಪಾಯಿ ಸಂಬಂಧ ನಡೆದ ಹುಯಿಲಿನ ವಿಚಾರವಾಗಿ ನೆನಪಿಸಿ ಹೌದೆಂದೆನು.
ನಂತರ ಆ ಹುಯಿಲನ್ನು ತೆಗೆಸಬೇಕೆಂದು ಕೇಳಲು ಗುರುನಾಥರು "ಮೂರು ಮಂಗಳವಾರ ಕಾಲ ಸಮೀಪದ ದೇವಿ ದೇಗುಲಕ್ಕೆ ಹೋಗಿ ಬನ್ನಿ" ಎಂದು ನುಡಿದರು.
ಅದಾದ ನಂತರ ಇಂದು ಆ ಸದ್ಗುರುವಿನ ಕೃಪೆಯಿಂದಾಗಿ ನನ್ನ ಹಾಗೂ ನನ್ನ ಅತ್ತೆಯವರ ಕುಟುಂಬ ಸುಖವಾಗಿ ಇದ್ದೇವೆ ಎಂದು ಮನತುಂಬಿ ನುಡಿದು ಮೌನವಾದರು....,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Venkatachala avadootarige nanna bhakti poorvaka namanagalu. Swamy e kantaka dinda yellarigu mukthi kottu manashanti honduvante asheervadisi. Sarve jano sukinobavantu.
ReplyDelete