ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 142
ಗ್ರಂಥ ರಚನೆ - ಚರಣದಾಸ
ಅನಾಥೋ ದೈವ ರಕ್ಷಕಃ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಭಕ್ತರ ಕೂಗಿಗೆ ಕಣ್ಣೀರಿಗೆ ಭಗವಂತ ಎಲ್ಲಿದ್ದರೂ ಕಿವಿಗೊಡುವನು. ಅಂತಹ ಸಂದರ್ಭದಲ್ಲಿ ಗುರುವಿಗೆ ದೇಶ-ಕಾಲಗಳಾವುವೂ ಅಡೆ ತಡೆಯಾಗದು.
ಒಮ್ಮೆ ಗುರುನಾಥರು ಇದ್ದಕ್ಕಿದ್ದಂತೆ ಸಖರಾಯಪಟ್ಟಣದಿಂದ ಬೆಂಗಳೂರಿಗೆ ಬಂದಿಳಿದರು. ತಮ್ಮ ಸಹೋದರಿಯ ಮನೆಗೆ ಬಂದು ಅಲ್ಲಿಂದ ತಮ್ಮ ದೂರದ ಬಂಧುವಿಗೆ ಕರೆ ಮಾಡಿ ದ್ವಿಚಕ್ರವಾಹನ ತರಲು ತಿಳಿಸಿದರು. ಗುರುವಿನ ಪರಮ ಭಕ್ತರಾದ ಅವರು ಕೂಡಲೇ ಬಂದರು. ಗಾಡಿ ಏರಿದ ಗುರುನಾಥರು ರಾಜಾಜಿನಗರದ ಗಲ್ಲಿಯೊಳಗೆ ಹೋಗಿ ಒಂದು ಮನೆಯ ಮುಂದೆ ನಿಲ್ಲಿಸಲು ಸೂಚಿಸಿದರು.
ಗಾಡಿಯಿಂದ ಇಳಿದವರೇ ಒಬ್ಬ ವ್ಯಕ್ತಿಯ ಹೆಸರನ್ನು ಹೇಳಿ "ಅವರ ಮನೆ ಇಲ್ಲೇ ಎಲ್ಲೋ ಬರುತ್ತೆ ಸ್ವಲ್ಪ ವಿಚಾರಿಸಯ್ಯಾ" ಅಂದರು. ಜೊತೆಗೆ ಬಂದ ಆ ವ್ಯಕ್ತಿ ಆ ಕಡೆ ಈ ಕಡೆ ವಿಚಾರಿಸುತ್ತಿರುವಾಗ ಗುರುನಾಥರು ನಿಂತಿದ್ದ ಮನೆಯ ಪಕ್ಕದ ಮನೆಯಿಂದ ಹೊರಬಂದ ದಂಪತಿಗಳು ಗುರುನಾಥರನ್ನು ನೋಡಿ ಓಡೋಡಿ ಬಂದು ಗುರುಗಳೇ ಅಂತೂ ನಮಗೆ ದರ್ಶನ ನೀಡಿದಿರಲ್ಲಾ ಎಂದು ನಮಸ್ಕರಿಸಿ, ತಮ್ಮ ಮನೆಯೊಳಗೆ ಕರೆದೊಯ್ದರು. ಕರೆದು ಒಳಗೆ ಕುಳ್ಳಿರಿಸಿ, ಹೀಗೆ ಹೇಳಿದರು. "ಗುರುಗಳೇ ನಾವು ನಿಮ್ಮ ದರ್ಶನ ಪಡೆಯಲು ಸಖರಾಯಪಟ್ಟಣಕ್ಕೆ ಹಲವು ಬಾರಿ ಬಂದಿದ್ದೆವು. ಆದರೆ ದರ್ಶನವಾಗಿರಲಿಲ್ಲ. ಇಂದು ನಮ್ಮ ಮನೆಯ ಬಾಗಿಲಿಗೇ ಬಂದು ದರ್ಶನ ನೀಡಿ ನಮ್ಮನ್ನು ಕೃತಾರ್ಥರಾಗಿಸಿದ್ದೀರಿ. ನಮ್ಮ ಮನೆಯ ವಿಳಾಸ ನಿಮಗೆ ಹೇಗೆ ತಿಳಿಯಿತು?" ಎಂದು ಕೇಳಿದರು.
ಆಗ ಗುರುನಾಥರು ನಗುತ್ತಾ ಆ ಮನೆಯೊಡತಿ ಕಡೆ ತಿರುಗಿ ಹೀಗೆ ಕೇಳಿದರು. "ಏನಮ್ಮಾ, ಗುರುಗಳು ಬರದೇ ನಾ ಆಹಾರ ಮುಟ್ಟೋಲ್ಲ ಅಂತ ಉಪವಾಸ ಕುಳಿತಿರುತ್ತೀಯಲ್ಲಾ? ಹಾಗೆಲ್ಲಾ ಹಸಿದುಕೊಂಡು ಇರಬಾರದು. ಊಟ ಮಾಡು", ಎನ್ನಲು ಆ ಮನೆಯೊಡತಿ ಹೌದೆಂದು ತಲೆಯಾಡಿಸಿದರು.
ನಂತರ ಗುರುನಾಥರು "ಎಲ್ಲಿ ಒಳಗಿದ್ದ ಹಾಲುಬಾಯಿ ತಾ ತಿನ್ನಬೇಕು ನಾನು" ಅಂತ ಕೇಳಲು ಆಕೆ ಸಂತೋಷದಿಂದ ತಂದು ಗುರುವಿಗೆ ಸಮರ್ಪಿಸಿದಳು.
ನಂತರ ಆಕೆ ತನಗೆ ಎರಡು ಹೆಣ್ಣು ಮಕ್ಕಳಿರುವರೆಂದು ಹೇಳಿ ಒಬ್ಬಾಕೆಯನ್ನು ಒಳಗಿನಿಂದ ಹೊರ ಕರೆತಂದು ಗುರುವಿಗೆ ನಮಸ್ಕರಿಸಲು ಹೇಳಿದರು. ಆಕೆ ಹಾಗೆಯೇ ಮಾಡಿದಳು. ನಂತರ ಎರಡನೇ ಮಗಳನ್ನು ಕರೆದು ನಿಲ್ಲಿಸಿ ಗುರುಗಳೇ ಈಕೆ ತುಂಬಾ ಮಂಕು. ಈಕೆಗೆ ಏನೂ ತಿಳಿಯೋದಿಲ್ಲ ಎಂದು ಮೂದಲಿಸುವಂತೆ ನುಡಿದರು.
ಕೂಡಲೇ ಮಧ್ಯೆ ಮಾತನಾಡಿದಾಗ ಗುರುನಾಥರು "ಹಾಗೆಲ್ಲಾ ಹೇಳಬಾರದು. ಆಕೆ ತುಂಬಾ ಚುರುಕಿದ್ದಾಳೆ. ಈಕೆಗೆ ಮೊದಲು ಮದುವೆ ಆಗುತ್ತೆ. ದೀರ್ಘ ಸುಮಂಗಲಿಯಾಗಿ ಸುಖವಾಗಿ ಬಾಳುತ್ತಾಳೆ" ಎಂದು ಧೈರ್ಯ ನೀಡಿ ಆ ಮಗಳಿಗೆ ಹಾಲು ಬಾಯಿ ತಿನ್ನಿಸಿ ಅಲ್ಲಿಂದ ಹೊರಟರು.
ಅಂದ ಹಾಗೆ ಆಗ ಸಮಯ ರಾತ್ರಿ 9:30 ಆಗಿತ್ತು. ದಾರಿಯಲ್ಲಿ ಬರುವಾಗ, "ನನಗೆ ಮಾಡಲು ಬೇಕಾದಷ್ಟು ಕೆಲಸವಿರುತ್ತೆ ಕಣಯ್ಯಾ" ಎಂದು ನುಡಿದು ಸುಮ್ಮನಾದರು.
ಒಮ್ಮೆ ಬಾಣಾವರದಲ್ಲಿ ಶ್ರೀ ಕೃಷ್ಣ ಯೋಗೇಂದ್ರ ಯತೀಶ್ವರರ ಆರಾಧನೆಯೋ ಅಥವಾ ಜಯಂತಿ ಕಾರ್ಯಕ್ರಮವೋ ನಡೆದಿತ್ತು. ಎಂದಿನಂತೆ ಗುರು ಬಾಂಧವರು ಭಕ್ತಾದಿಗಳೆಲ್ಲರೂ ಬಾಣಾವರದಲ್ಲಿ ಸೇರಿದ್ದರು. ನಾನು ಮಾಮೂಲಿನಂತೆ ಸಖರಾಯಪಟ್ಟಣದಿಂದ ಬಾಣಾವರಕ್ಕೆ ಕಲಿಸಬೇಕಾದ ಸಾಮಾನು ಸರಂಜಾಮುಗಳನ್ನು ಗುರುನಾಥರ ಅಣತಿಯಂತೆ ಅಣಿಗೊಳಿಸಿ ಕಳಿಸಿಕೊಟ್ಟು ಕಾರ್ಯ ಮುಗಿಸಿದೆ.
ಬಾಣಾವರದಲ್ಲಿ ಹೋಮ ಪೂಜೆ ಕಾರ್ಯಗಳು ಮುಗಿದು ಓಟವಾಗಿ ಹೊರಡುವ ಕಾಲಕ್ಕೆ ಸರಿಯಾಗಿ ಅದೆಲ್ಲಿದ್ದವೋ ಜೇನು ಹುಳುಗಳು ಇದ್ದಕ್ಕಿದ್ದಂತೆ ದಾಳಿ ಮಾಡಿ ಕಚ್ಚತೊಡಗಿದವು. ಕೆಲವರು ಆಸ್ಪತ್ರೆಗೂ ದಾಖಲಾದರು.....,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya venkatachala avadootarige nanna saashtaanga pranaamagalu. Sadaa kaala nimma aashirvaada haagu rakshe yellara mele erali yendu beduva obba bhakta. Hari om tatsat.
ReplyDelete