ಒಟ್ಟು ನೋಟಗಳು

Monday, February 13, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 132


    ಗ್ರಂಥ ರಚನೆ - ಚರಣದಾಸ 

ಕೃಪೆ 



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಇಷ್ಟು ಹೇಳಿ ಮತ್ತೆ ಕೆಲಕಾಲ ಮೌನಕ್ಕೆ ಜಾರಿದ ಆ ವ್ಯಕ್ತಿ ಮತ್ತೊಂದು ಘಟನೆಯೊಂದಿಗೆ ಗುರು ಲೀಲಾಮೃತವನ್ನು ಬಡಿಸಲು ಅಣಿಯಾದರು. 

ಸ್ವಾಮಿ, ನಮ್ಮ ಕುಟುಂಬದಲ್ಲಿ ಯಾರಿಗೂ ಹೆಣ್ಣು ಸಂತಾನವಿರಲಿಲ್ಲ. ನಮ್ಮ ತಂದೆ ತಾಯಿಗೆ ನಾವು ಆರು ಜನ ಗಂಡು ಮಕ್ಕಳು. ನಾವೆಲ್ಲರೂ ವಿವಾಹಿತರು. ಆದ್ರೆ ನಮಗಾರಿಗೂ ಹೆಣ್ಣು ಸಂತಾನವಾಗಿರಲಿಲ್ಲ. ನಾನು ಕುಟುಂಬದಲ್ಲೇ ಕೊನೆಯವನು. 

ನನ್ನ ಅತ್ತಿಗೆಯವರನ್ನು ಸೇರಿಸಿದ್ದ ಆಸ್ಪತ್ರೆಗೆ ನಾನು ಆಗಾಗ್ಗೆ ನನ್ನ ಹೆಂಡತಿಯ ಆರೋಗ್ಯ ಪರೀಕ್ಷಿಸಲು ಬರುತ್ತಿದ್ದೆ. ನನಗಾಗಲೇ ಒಂದು ಗಂಡು ಮಗುವಿತ್ತು. ಅವನೊಂದಿಗೆ ನಾನು ಆಗಾಗ್ಗೆ ಗುರುನಿವಾಸಕ್ಕೆ ಬರುತ್ತಿದ್ದೆ. ನೀವೂ ಅವನನ್ನು ನೋಡಿರುವಿರಿ. ನನಗೆ ಒಂದು ಹೆಣ್ಣು ಮಗು ಬೇಕೆಂಬ ಆಸೆ ಉತ್ಕಟವಾಗಿತ್ತು. ಆದರೂ ಎಲ್ಲವೂ ಗುರುವಿನ ಇಚ್ಛೆಯಂತಾಗಲಿ. ಇಂತಹ ವಿಚಾರಗಳನ್ನೆಲ್ಲ ಗುರುಗಳಲ್ಲಿ ಕೇಳಬಾರದು ಎಂದು ಮನದೊಳಗೆ ಯೋಚಿಸಿ ನನಗೆ ನಾನೇ ಸಮಾಧಾನ ಹೇಳಿಕೊಳ್ಳುತ್ತಿದ್ದೆ.

ಇದಾಗಿ ಕೆಲ ಕಾಲಾನಂತರ ಗುರುನಿವಾಸಕ್ಕೆ ಬಂದಿದ್ದ ನಾನು ಅಲ್ಲಿಂದ ಹಿಂತಿರುಗುವಾಗ ಆ ಆಸ್ಪತ್ರೆಗೆ ಹೆಂಡತಿಯನ್ನು ಪರೀಕ್ಷೆಗಾಗಿ ಕರೆದೊಯ್ದೆ. ನನ್ನಾಕೆಯನ್ನು ಮಾತನಾಡಿಸಿ ಪರೀಕ್ಷಿಸಿದ ವೈದ್ಯರು ನನ್ನ ಮಗನನ್ನು ಕುರಿತು ಹೀಗೆ ಕೇಳಿದರು. "ಏನಪ್ಪಾ, ನಿಮಗೆ ತಮ್ಮ ಬೇಕೋ ತಂಗಿ ಪಾಪು ಬೇಕೋ?" ಎನ್ನಲು ಆತ "ನಂಗೆ ತಮ್ಮ ಬೇಕು" ಎಂದು ನುಡಿದ. 

ಆಗ ಅದೇ ವೈದ್ಯ ನನ್ನ ಮಗನಿಗೆ, "ಅಲ್ವೋ ಪುಟ್ಟ ನಾವು ಈ ಬಾರಿ ನಿಂಗೆ ತಂಗಿ ಪಾಪು ಬರಲಿ ಅಂತ ಬೇಡುತ್ತಿದ್ದರೆ ನೀನು ತಮ್ಮ ಪಾಪು ಬೇಕು ಅಂತ ಇದ್ದೀಯಲ್ಲಾ?" ಎಂದು ಪ್ರಶ್ನಿಸಿ ನನ್ನನ್ನು ಕುರಿತು ಈ ಬಾರಿ ನಿಮಗೆ ಹೆಣ್ಣು ಮಗುವಾಗಲಿದೆ ಎಂದರು. ಆದರೂ ನಾವು ಅವೆಲ್ಲ ಗುರುವಿನ ಇಚ್ಚೆ ಎಂದು ಭಾವಿಸಿ ಮೌನವಾದೆವು. 

ತುಂಬು ಗರ್ಭಿಣಿಯಾದ ನನ್ನ ಪತ್ನಿ ಸಕಾಲದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಇದು ನನ್ನ ಗುರು ನಮ್ಮ ಭಾವನೆಗೆ ಸ್ಪಂದಿಸಿ ಕರುಣಿಸಿದ ಪ್ರಸಾದ. 

ಅಂತೆಯೇ ಆಕೆಯೂ ಆಟ, ಓದು, ಕೆಲಸ ಎಲ್ಲದರಲ್ಲಿ ಚುರುಕಾಗಿರುವಳು. ಮಾತ್ರವಲ್ಲ ನಡವಳಿಕೆಯಲ್ಲೂ ಉತ್ತಮಳಿದ್ದಾಳೆ. ಹೆಚ್ಚೇಕೆ ನಮ್ಮ ಇಡೀ ಕುಟುಂಬದ ಕಣ್ಣಾಗಿ ಬೆಳೆಯುತ್ತಿರುವಳು ಎಂದು ಹೇಳಿ ಗುರುಕಾರುಣ್ಯವನ್ನು ಅಭಿಮಾನದಿಂದ ನೆನೆದರು......,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

1 comment:

  1. Poojya Guruvarya venkatachala Avara paadagalige nanna poojya namanagalu. Swamy Yellaranu sadaa kaala Harasi e kantaka dinda mukthi kodi. Sarve jano sukinobavantu.

    ReplyDelete