ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 129
ಗ್ರಂಥ ರಚನೆ - ಚರಣದಾಸ
ಈಶ್ವರ ದರ್ಶನ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಈ ಎರಡು ಘಟನೆಗಳು ನಡೆದಿದ್ದು ಬೇರೆ ಬೇರೆ ಸ್ಥಳದಲ್ಲಿ ಹಾಗೂ ಬೇರೆ ಬೇರೆ ಕಾಲದಲ್ಲಿ. ಈ ಎರಡು ಘಟನೆಗಳು ನಡೆದ ಸಂದರ್ಭ ಚರಣದಾಸನಾದ ನಾನು ಗುರುನಿವಾಸದಲ್ಲೇ ಇದ್ದೆ.
ಸಾಮಾನ್ಯವಾಗಿ ಗುರುನಾಥರು ಮೈಸೂರಿನ ಕಡೆ ಹೋದಾಗಲೆಲ್ಲಾ ನಂಜನಗೂಡಿನ ನಂಜುಂಡೇಶ್ವರನ ದರ್ಶನ ಮಾಡದೇ ಬಂದ ಉದಾಹರಣೆ ಇಲ್ಲ. ನಮ್ಮನ್ನೂ ಹಲವು ಬಾರಿ ನಂಜುಂಡೇಶ್ವರನ ದರ್ಶನಕ್ಕೆ ಕಳಿಸುತ್ತಿದ್ದರು. ಒಮ್ಮೆ ಹಾಸನದ ಭಕ್ತರೊಬ್ಬರ ಕಾರಿನಲ್ಲಿ ಮೈಸೂರಿನ ಕಡೆಗೆ ಹೊರಟರು.
ಅಂದು ರಾತ್ರಿ ಮೈಸೂರಿನಲ್ಲೇ ವಾಸ್ತವ್ಯ ಮಾಡಿದ ಗುರುನಾಥರು ಬೆಳಿಗ್ಗೆ ಎದ್ದವರೇ ಆ ಭಕ್ತರನ್ನು ಕರೆದು, "ಏನಪ್ಪಾ ಇಂದು ನನಗೆ ಈಶ್ವರನ ದರ್ಶನ ಮಾಡಿಸ್ತೀರಲ್ವಾ?" ಎಂದು ಕೇಳಿದರು. ಈ ಮಾತಿನ ಮರ್ಮವನ್ನು ಅರಿಯದ ಅವರು ಸುಮ್ಮನೆ ನಕ್ಕರು. ನಂತರ ಅವರಿಗೆ ಮಾವಿನ ಹಣ್ಣು ಕೊಂಡುಕೊಳ್ಳುವಂತೆ ಗುರುನಾಥರು ತಿಳಿಸಿದರು. ಇವರು ಸಾಕಷ್ಟು ಹಣ್ಣುಗಳನ್ನು ತೆಗೆದುಕೊಂಡು ಕಾರಿನಲ್ಲಿಟ್ಟುಕೊಂಡರು.
ಕಾರು ನಂಜನಗೂಡಿನ ಕಡೆ ಹೊರಟಿತು. ಸುಮಾರು ಅರ್ಧ ದಾರಿ ಸಾಗಿರಲು ಎದುರಿನಿಂದ ಪ್ರಪಂಚದ ಪರಿವೆಯನ್ನೇ ತೊರೆದ, ಮೈಯೆಲ್ಲ ಮಣ್ಣಾದ ವ್ಯಕ್ತಿಯೊಬ್ಬ ನಡೆದು ಬರುತ್ತಿದ್ದರು. ಕೂಡಲೇ ಕಾರನ್ನು ನಿಲ್ಲಿಸಿದ ಗುರುನಾಥರು ಇಳಿದು ಬಂದು ಆ ವ್ಯಕ್ತಿಗೆ ನಮಸ್ಕರಿಸಿದರು. ಹಾಗೂ ತಮ್ಮ ಜೊತೆ ಇದ್ದವರಿಗೂ ನಮಸ್ಕರಿಸುವಂತೆ ತಿಳಿಸಿದರು. ನಂತರ ಅವರಿಗಾಗಿಯೇ ತಂದಿದ್ದ ಹಣ್ಣನ್ನು ಬಿಡಿಸಿ ಕೊಡಲು ಆ ವ್ಯಕ್ತಿ ಅದನ್ನು ಸ್ವೀಕರಿಸಿದರು. ನಂತರ ಅವರ ಪಾದಗಳಿಗೆ ಹೂವು ಹಾಕಿ ಪೂಜಿಸಿದರು. ನಂತರ ಆ ವ್ಯಕ್ತಿ ಅಲ್ಲಿಂದ ಮುನ್ನೆಡೆದರು.
ಈ ಘಟನೆ ಹೇಗಿತ್ತೆಂದರೆ ಗುರುನಾಥರಿಗೆ ದರ್ಶನ ಕೊಡಲೋಸುಗವೇ ಆ ವ್ಯಕ್ತಿ ಎದುರು ಬಂದಂತಿತ್ತು. ನಂತರ ಕಾರನ್ನೇರಿದ ಗುರುನಾಥರು ತನ್ನನ್ನು ಕರೆತಂದ ಭಕ್ತರನ್ನು ಕುರಿತು "ಸ್ವಾಮಿ, ಅಂತೂ ತಮ್ಮ ಕಾರಣವಾಗಿ ಈಶ್ವರ ದರ್ಶನವಾಯಿತು" ಎಂದರು.
ಮತ್ತೊಮ್ಮೆ ಕೆಲವು ಭಕ್ತರನ್ನು ಶೃಂಗೇರಿಗೆ ಕಳುಹಿಸಿದ ಗುರುನಾಥರು ಅವರನ್ನು ಕರೆದು ಹೀಗೆ ಹೇಳಿದರು. "ಮಾರ್ಗ ಮಧ್ಯದಲ್ಲಿ ನಿಮಗೆ ಈಶ್ವರ ದರ್ಶನ ಕೊಡುವನು. ತಪ್ಪದೆ ಅವನಿಗೆ ಹಣ್ಣು ನೀಡಿ ಗೌರವಿಸಿ" ಎಂದು ಹೇಳಿ ಕಳುಹಿಸಿದರು.
ಅಂತೆಯೇ ಹೊರಟ ಆ ಭಕ್ತರಿಗೆ ಮಾರ್ಗ ಮಧ್ಯದಲ್ಲಿ ಮೈತುಂಬಾ ಕೊಳಕಾಗಿ ದುರ್ನಾತ ಬೀರುತ್ತಿದ್ದ ವ್ಯಕ್ತಿಯೊಬ್ಬ ಎದುರಾದರು. ಕಾರನ್ನು ನಿಲ್ಲಿಸಿದ ಅವರು ಆತನಿಗೆ ಗುರುನಾಥರು ಹೇಳಿದಂತೆಯೇ ಹಣ್ಣು ಹಾಲನ್ನು ನೀಡಿ ನಮಸ್ಕರಿಸಿ ಅಲ್ಲಿಂದ ಹೊರಟರು.
ವಾಪಸಾದ ಅವರು ಗುರುನಾಥರನ್ನು "ಗುರುನಾಥರೇ ಅವರು ಯಾರು? ವಾಸನೆ ಬರುತ್ತಿದ್ದರಲ್ಲಾ?" ಎಂದು ಸಂಶಯದಿಂದಲೇ ಪ್ರಶ್ನಿಸಲು ಗುರುನಾಥರು ನಗುತ್ತಾ, "ನಿಮ್ಮ ಅದೃಷ್ಟ. ಇಂದು ಈಶ್ವರ ದರ್ಶನ ನೀಡಿದ" ಎಂದು ಹೇಳಿ ಮೌನವಾದರು. ಪ್ರಶ್ನೆ ಕೇಳಿದವರು ಗುರು ನೀಡಿಯೇ ಈ ಅವಕಾಶಕ್ಕಾಗಿ ಮನಸಾರೆ ವಂದಿಸಿದರು.
ಮತ್ತೊಮ್ಮೆ ಮಂಗಳೂರು ಸಮೀಪದ ದಂಪತಿಗಳು ಗುರುದರ್ಶನಕ್ಕಾಗಿ ಬಂದರು. ಚಿಕ್ಕಮಗಳೂರಿನ ಗುರು ಬಂಧುಗಳ ಮನೆಯಲ್ಲೇ ದರ್ಶನವಿತ್ತ ಗುರುಗಳು ಆ ದಂಪತಿಗಳನ್ನು ತನ್ನ ಸಮೀಪವೇ ಕೂರಿಸಿಕೊಂಡರು. ಆ ದಂಪತಿಗಳು ಒಂದು ಸಂಶಯದೊಂದಿಗೆ ಬಂದಿದ್ದರು.
ಅವರನ್ನು ಕುರಿತು ಗುರುನಾಥರು "ನಿಮ್ಮ ಪ್ರಶ್ನೆಗೆ ಕೆಲವೇ ಹೊತ್ತಿಗೆ ಉತ್ತರ ಸಿಗುತ್ತದೆ" ಎಂದು ನುಡಿದು ಒಂದು ಪುಸ್ತಕ ಪೆನ್ನು ನೀಡಿ ಅದ್ವೈತಪೀಠದ ಪರಮಗುರುಗಳೊಬ್ಬರ ನಾಮವನ್ನು ಬರೆಯುವಂತೆ ತಿಳಿಸಿದರು.
ಆ ದಂಪತಿಗಳು ಮೊದಲನೇ ಪುಟ ಬರೆದು ಮುಗಿಸುವ ಮುನ್ನವೇ ಆ ಯತಿಗಳ ದೊಡ್ಡ ಫೋಟೋದೊಂದಿಗೆ ಗುರು ಭಕ್ತರೊಬ್ಬರು ಆಗಮಿಸಿದರು. ಆ ಗುರುಭಕ್ತರ ಮಕ್ಕಳು ಸಲುಗೆಯಿಂದ ಗುರುನಾಥರ ತೊಡೆಯನ್ನೇರಿ ಕುಳಿತರು. ಅದೇ ಸಮಯಕ್ಕೆ ತಲೆ ಎತ್ತಿದ ಆ ದಂಪತಿಗಳಿಗೆ ಗುರುನಾಥರು ಅನಘಾಸಹಿತ ದತ್ತನಾಗಿ ದರ್ಶನ ಕೊಟ್ಟರು. ಕೂಡಲೇ ತಲೆತಗ್ಗಿಸಿದ ಆ ದಂಪತಿಗಳು ಆ ಪುಸ್ತಕದಲ್ಲಿ "ದತ್ತ ದರ್ಶನವಾಯಿತು" ಎಂದು ಬರೆದು ಗುರುನಾಥರಿಗೆ ತೋರಿಸಿದರು.
ಗುರುನಾಥರು "ಹೌದಮ್ಮಾ... " ಎಂದು ತಲೆಯಾಡಿಸಿ ಆ ಪುಸ್ತಕದಲ್ಲಿ ತನ್ನ ಸಹಿ ಹಾಕಿದರು.
ಈ ಘಟನೆಗಳನ್ನು ಅವಲೋಕಿಸಿದಾಗ ಗುರುನಾಥರು ಚರಣದಾಸನಾದ ನನ್ನಲ್ಲಿ ಆಗಾಗ್ಗೆ ಹೇಳುತ್ತಿದ್ದ "ಗುರು ಯಾವ ರೂಪದಲ್ಲಿ ಬರುತ್ತಾನೋ ಗೊತ್ತಿಲ್ಲಪ್ಪಾ. ಅದಕ್ಕೆ ಯಾವ ಜೀವೀನೂ ಕಡೆಗಣಿಸಬೇಡಿ ಗೌರವಿಸಿ" ಎಂಬ ಮಾತು ನೆನಪಿಗೆ ಬರುತ್ತದೆ......,,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Swamy venkatachala Avara paadagalige nanna bhakti poorvaka namanagalu. Sarvarannu uddarisi asheervadisi Kaapadi Guruvarya. Sarve jano sukinobavantu.
ReplyDelete