ಗುರುನಾಥ ಗಾನಾಮೃತ
ಒಲ್ಲದ ಮನದಿಂದ ಕೈ ಮುಗಿದು ಬೇಡಿದೊಡೆ
ರಚನೆ: ಆನಂದರಾಮ್, ಶೃಂಗೇರಿ
ಒಲ್ಲದ ಮನದಿಂದ ಕೈ ಮುಗಿದು ಬೇಡಿದೊಡೆ
ಎಲ್ಲೋ ಮನವಿತ್ತು ಕೂಗಿದೊಡೆ ಬರಲಾರನು
ಗುರುರಾಯ ಸಖರಾಯಪುರದ ಮಹನೀಯನು|
ನಡೆದಾಡುವ ದೇವನು ನಿನ್ನ ಎಲ್ಲಾ ನಡೆಯ ಬಲ್ಲನು
ಕಣ್ತಪ್ಪಿಸಿ ನಡೆಯದೇನು ಅವ ಎಲ್ಲಾ ಬಲ್ಲ ದೇವನು|
ಅವಕಾಶವಾದಿಯಂತೆ ಭಕ್ತಿ ತೋರಿದೊಡೆ ನಾನು
ಮರುಳಾಗಿ ಕರುಣಿಸನು ಎಂದೂ ನನ್ನ ಗುರುದೇವನು
ಪ್ರಚಾರ ಪ್ರಿಯನಲ್ಲ ನನ್ನ ಗುರು ಏನೂ ಬಯಸನು
ಅಡೆತಡೆಯಿಲ್ಲದೆ ಗುರು ಸದಾ ಸ್ವಪ್ರಕಾಶಿಸುವವನು|
ಏನೂ ಬಯಸದ ಗುರು ಇರುವುದೆಲ್ಲ ಕೊಡುವನು
ನಿನ್ನರ್ಪಣೆಯ ಎಲ್ಲರಿಗೂ ಅವ ಸಮರ್ಪಿಸುವನು|
ಅರ್ತತೆಯ ಕೂಗಿನ ನಿಜ ಬಕುತನ ಪ್ರಿಯ ಇವನು
ನಿಜಬಕುತನ ತಿದ್ದಿತೀಡಿ ಸದಾ ಸರಿದಾರಿ ತೋರುವನು
ಬೃಂದಾವನದಲಿ ನೆಲಸಿಹನು ನಮ್ಮೆಲ್ಲರ ದೇವನು
ಸಕರಾಯಪುರವೆಂಬ ಪುಣ್ಯ ಭೂ ವೈಕುಂಠದೊಳು|
No comments:
Post a Comment