ಗುರುನಾಥ ಗಾನಾಮೃತ
ಎಷ್ಟು ಕಾಲ ಭವದ ಚಿಂತೆಯಲಿ ಇರಿಸುತೀಯೋ ಗುರುರಾಯ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಎಷ್ಟು ಕಾಲ ಭವದ ಚಿಂತೆಯಲಿ ಇರಿಸುತೀಯೋ ಗುರುರಾಯ
ಅರಿವಿನ ಮನೆ ಇನ್ನೆಷ್ಟು ದೂರವಿದೆಯೋ ಗುರುನಾಥ |
ಮಾಡುವ ಸೇವೆಯಲಿ ಕುಂದುಬಂದಿತೇ ಗುರುನಾಥ
ಜಪಿಸುವ ನಾಮವು ಕಡಿಮೆಯಾಯಿತೇ ಗುರುದೇವ |
ಹೀನ ಕಾರ್ಯದಲಿ ಮನವು ತೊಡಗೀತೇ ಗುರುನಾಥ
ಅನ್ಯರ ವಿಷಯದಲಿ ನುಡಿಯು ಹೊರಟೀತೇ ಗುರುದೇವ |
ಜಗದ ವೈಭವದಿ ತನುವು ಮೆರೆದೀತೇ ಗುರುನಾಥ
ಬದುಕಿನಾ ಸಂಕಟದಿ ನಿನ್ನನೇ ಮರೆತೆನೇ ಗುರುರಾಯ |
ನನ್ನದೆಂಬ ಅಭಿಮಾನದಿ ಮಾಯೆ ಮುಸುಕೀತೇ ಗುರುರಾಯ
ಅತಿಯಾದ ಆಸೆಯಲ್ಲಿ ಅಜ್ಞಾನ ಕವಿದೀತೇ ಗುರುನಾಥ !
No comments:
Post a Comment