ಗುರುನಾಥ ಗಾನಾಮೃತ
ನಾನು ನನದೆಂಬುವ ಈ ಜೀವ ನಿನ್ನ ಭಜಿಸಿ ಫಲವೇನು
ರಚನೆ: ಆನಂದರಾಮ್, ಶೃಂಗೇರಿ
ನಾನು ನನದೆಂಬುವ ಈ ಜೀವ ನಿನ್ನ ಭಜಿಸಿ ಫಲವೇನು
ನೀನೇ ಎಲ್ಲವೂ ಎಂಬ ಅರಿವು ಮೂಡದೇ ಸುಖ ಉಂಟೇನು|
ನಾನು ಹಾಡಿದೆನೆಂದು ಗುರುವೇ ಓಡಿ ಬರುವಿಯ ನೀನು
ಹಾಡಿನಲಿ ಬರೀ ನಾನೇಎಂಬ ಭಾವ ತುಂಬಿದೆ ಏನು|
ಮನಸು ಮಲಿನವಿರಲು ಮಡಿ ಮಾಡಿದರೇನು ನಾನು
ನಿನ್ನ ಸನಿಹ ಬರಲು ಭಾವ ಶುದ್ಧಿ ಇರಬೇಕಲ್ಲವೇನು|
ತೋರಿಕೆಯ ಆದರದ ಮಾತುಗಳು ನಾಲಿಗೆ ಮೇಲೆ
ಕಪಟ ಭಕುತಿಯ ವೇಷ ಧರಿಸಿ ಬೇಡುವೆನು ನಾನು|
ಬರುವ ಭಕುತರ ಭಕುತಿಯ ಅರಿಯದಾದೆ ನಾನು
ಭಕುತಿ ತೋರುವ ಬರದಿ ನಿಜವ ಕಾಣದಾದೆ ನಾನು|
ಭಾವ ಶುದ್ದಿ ಭಕುತಿಗೆ ಒಲಿವ ಗುರುವಲ್ಲವೇ ನೀನು
ನಾನು ಎಂಬ ಹಮ್ಮಿನೊಳು ನಿನ್ನ ಬೇಡಿದೆನು ನಾನು|
ಗುರಿ ಕಾಣದೆ ಅಲೆಯುತಿಹೆ ದಾರಿ ತೊರೆನಗೆ ನೀನು
ಗೊಂದಲದ ಗೂಡಾಗಿದೆ ಈ ಮನ ನಿನ್ನದಲ್ಲವೇನು|
No comments:
Post a Comment