ಗುರುನಾಥ ಗಾನಾಮೃತ
ಬದುಕು ಭಾರವಾಗಿ ಭಕುತಿ ಮಾಡದಾದೆ ಗುರುವೇ
ರಚನೆ: ಆನಂದರಾಮ್, ಶೃಂಗೇರಿ
ಬದುಕು ಭಾರವಾಗಿ ಭಕುತಿ ಮಾಡದಾದೆ ಗುರುವೇ
ಬದುಕ ನಡೆಸಿ ನಿನ್ನ ನೆನೆವ ಬುದ್ದಿ ನೀಡೋ ಗುರುವೇ|
ಬೇಡುವೆನು ಮನದ ಶಂಕೆ ದೂರ ಮಾಡೊ ಗುರುವೇ
ಮನದ ವಾಸನೆ ಕರ್ಕೋಟಕ ನಾಶ ಮಾಡು ಗುರುವೇ
ಬರಿದು ಮನವು ಕಲ್ಮಶ ತುಂಬುವುದು ನೀ ಕೈ ಬಿಟ್ಟರೆ
ನಿರ್ಮಲ ವಾದೀತು ನೀ ಹರಸಿ ನನ್ನ ಎಚ್ಚರಿಸಿದರೆ|
ಕಣ್ಣು ಕದ್ದು ನೋಡುವುದು ತಾಮಾಸಿಕ ಅಟ್ಟಹಾಸವ
ಬಾಯಿ ಚಪಲವದು ನುಡಿವುದು ಅನ್ಯರ ವಿಷಯವ|
ಆಡಂಬರದ ಬಕುತಿಯ ಬೆನ್ನತ್ತಿ ನಿನ್ನ ಅರಿಯದಾದೆ
ಅರಿವಿನಾಲಯಕೆ ದಾರಿ ತೋರೋ ಓ ನನ್ನ ಗುರುವೆ|
ಬರೀ ಬೇಡುವದೊಂದೆ ಬದುಕಾಯ್ತು ನನ್ನ ಗುರುವೇ ಕತ್ತಲೊಳು ಮನವು ಮಿಂದು ಸಾಕಾಗಿದೆ ಗುರುವೇ|
ಇನ್ನು ತಡಮಾಡದೆ ಎನ್ನ ಸಲಹಯ್ಯ ನನ್ನ ಗುರುವೇ
ಬೇಡುತಲೇ ಮನವು ಬರಿದಾಯ್ತು ಕಾಪಾಡು ಗುರುವೇ|
No comments:
Post a Comment