ಗುರುನಾಥ ಗಾನಾಮೃತ
ಎದ್ದು ಬರಬಾರದೆ ಬೃಂದಾವನದಿಂದ ಗುರುವೆ
ರಚನೆ: ಅಂಬಾಸುತ
ಎದ್ದು ಬರಬಾರದೆ ಬೃಂದಾವನದಿಂದ ಗುರುವೆ
ಸದ್ದು ಮಾಡದೆ ಅಲ್ಲಿ ತಪವ ಮಾಡಿಹೆ ಏಕೇ ||ಪ||
ಕಾನನದ ಏಕಾಂತ ಬಯಸಿ ಕುಳಿತಿಹೆ ಏನು?
ಭಕ್ತರಾಭೀಷ್ಟಗಳ ಸಲಿಸಿ ದಣಿದಿಹೆ ಏನು? ||೧||
ಮೌನ ಹಿಡಿದು ಕುಳಿತರೇನು ಮಾತನಾಡಿಸದೆ ಬಿಡೆನು
ಪಟ್ಟು ಹಿಡಿವೆನು ನಿನ್ನ ಪಾದವ ಕಟ್ಟುವೆನು ||೨||
ಅಷ್ಟು ಪಾಪಿಯೇ ನಾನು ನಿನ್ನ ದರುಶನ ಪಡೆಯದಷ್ಟು
ಇಷ್ಟು ಹೇಳುವೆ ಗುರುವೆ ಮುಂದೆ ನಿನ್ನಿಷ್ಟವೊ ||೩||
ಕರವ ಜೋಡಿಸಿಹೆನೊ ಶಿರವ ನೆಲಕೆ ಮುಟ್ಟಿಸಿಹೆನೊ
ಮನದ ತುಂಬ ನಿನ್ನ ಕಾಣೊ ಬಯಕೆ ತುಂಬಿಕೊಂಡಿಹೆನೊ ||೪||
ಸಖರಾಯಪುರದ ಪ್ರಭುವೆ ಭಕುತರಾ ಭಾಗ್ಯದಾ ನಿಧಿಯೇ
ಅಂಬಾಸುತಗೆ ನಿನ್ನ ಕಾಣೊ ಅರಿವನಿತ್ತು ಪೊರೆಯೊ ದೊರೆಯೇ ||೫||
No comments:
Post a Comment