ಗುರುನಾಥ ಗಾನಾಮೃತ
ಯಾವ ಸೇವೆಯ ಮಾಡಲಿ ಗುರುವೇ ನಿನ್ನ ಪ್ರೀತಿ ಪಡೆಯಲು
ರಚನೆ: ಆನಂದರಾಮ್, ಶೃಂಗೇರಿ
ಯಾವ ಸೇವೆಯ ಮಾಡಲಿ ಗುರುವೇ ನಿನ್ನ ಪ್ರೀತಿ ಪಡೆಯಲು
ಎಷ್ಟು ಮಾಡಿದರೂ ಸಾಲದು ನಿನ್ನ ಕರುಣೆ ದೊರೆಯಲು|
ಯಾವ ಹೂವ ಅರ್ಪಿಸಿ ಬೇಡಲಿ ನಿನ್ನ ಚರಣಕ್ಕೇ
ಮಾಲೆಯೋ ಬಿಡಿ ಪುಷ್ಪವೋ ಅರಿಯದಾದೆ ಗುರುವೇ"|
ಹೇಗೆ ಮಡಿ ಮಾಡಿ ಬರಲಿ ನಾನು ನಿನ್ನ ಸನಿಹಕೇ
ಮಲಿನ ಮನವ ಶುದ್ಡಿ ಮಾಡಿ ಬರಲೇ ಗುರುವೇ|
ಉಟ್ಟ ಬಟ್ಟೆಯೊಳು ನಾ ನಿನ್ನ ಬಜಿಸಲೇ ಗುರುವೇ
ನಾರಿನ ಮಡಿಯ ಬಟ್ಟೆ ಎನ್ನ ಬಳಿ ಇಲ್ಲ ಗುರುವೇ|
ಫಲ ಪುಷ್ಪ ಸಿಹಿ ಹಣ್ಣು ತಾಂಬೂಲ ಬುಟ್ಟಿಯಲಿರಿಸಿ
ಪಂಚಾಮೃತ ಎಳನೀರು ಒಪ್ಪವಾಗಿಇಡುವೆ ಗುರುವೇ|
ಮಂತ್ರವಿಲ್ಲದೆ ಬರಿ ಮಂತ್ರಾಕ್ಷತೆಯಲಿ ಪೂಜಿಸುವೆ
ಆರತಿ ಮಾಡದೆ ಮನಧಾರತಿ ಬೆಳಗುವೇ ಗುರುವೇ|
ಇನ್ನು ತಡಮಾಡದೆ ನಿನ್ನ ದರುಶನವ ನೀಡು ಗುರುವೇ
ನಿನ್ನ ಅಶಿರ್ವಾದವೆ ಎನಗೆ ತೀರ್ಥಪ್ರಸಾದ ಗುರುವೇ|
No comments:
Post a Comment