ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 100
ಗ್ರಂಥ ರಚನೆ - ಚರಣದಾಸ
ನಮ್ಮದಲ್ಲದ ಕೆಲಸ.....
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಒಮ್ಮೆ ಗುರುನಿವಾಸದಲ್ಲಿ ಗುರುನಾಥರೊಂದಿಗೆ ಕುಳಿತಿರಲು ಸಂಜೆ ಸುಮಾರು ಏಳು ಗಂಟೆ ಸುಮಾರಿಗೆ ಒಬ್ಬ ವ್ಯಕ್ತಿ ತನ್ನೊಂದಿಗೆ ಅರೆ ಹುಚ್ಚನಂತಿದ್ದ ಒಬ್ಬ ಯುವಕನನ್ನು ಕರೆದುಕೊಂಡು ಗುರುನಿವಾಸಕ್ಕೆ ಬಂದರು.
ಚರಣದಾಸನಾದ ನಾನು ಒಳಹೋಗಿ ಅವರಿಬ್ಬರಿಗೆ ಕುಡಿಯಲು ಕಾಫಿ ತಂದುಕೊಟ್ಟೆ. ಗುರುನಾಥರಿಗೆ ನಮಸ್ಕರಿಸಿದ ಅವರನ್ನು "ಏನು ಬಂದದ್ದು?" ಎಂದು ಕೇಳಲು ಆ ವ್ಯಕ್ತಿ ಹೀಗೆ ಹೇಳಿದರು.
"ಈ ಹುಡುಗ ರೇಖಿ ಚಿಕಿತ್ಸಕ. ಹಲವಾರು ಖಾಯಿಲೆಗಳಿಗೆ ಪರಿಹಾರವನ್ನು ನೀಡಿರುತ್ತಾನೆ. ರೇಖಿ ವಿದ್ಯೆ ಕಲಿಯುವ ಮೊದಲು ಬಹಳ ಚೆನ್ನಾಗಿಯೇ ಇದ್ದ. ಯಾವಾಗ ಚಿಕಿತ್ಸೆ ನೀಡಲು ಶುರು ಮಾಡಿದನೋ ಹೀಗಾಗಿದ್ದಾನೆ. ವೈದ್ಯರಿಗೆ ತೋರಿಸಿದರೆ, ಏನೂ ಖಾಯಿಲೆ ಇಲ್ಲ ಅಂತಾರೆ. ಆದರೆ ಈತ ಅನ್ನಾಹಾರ ಬಿಟ್ಟು ಅರೆಹುಚ್ಚನಂತೆ ಆಡುತ್ತಿರುತ್ತಾನೆ. ಏನೊಂದೂ ತಿಳಿಯದೇ ಈಗ ನಿಮ್ಮ ಬಳಿ ಕರೆ ತಂದಿರುವೆ" ಎಂದರು.
ಆ ವ್ಯಕ್ತಿಯ ಕೈಯಲ್ಲಿದ್ದ ಬಾಳೆಹಣ್ಣಿನ ಪೊಟ್ಟಣವನ್ನು ತೆಗೆದುಕೊಂಡು ತನ್ನ ತೊಡೆಯ ಮೇಲಿಟ್ಟುಕೊಂಡ ಗುರುನಾಥರು ಕೆಲ ಕಾಲ ಬಿಟ್ಟು ಆ ಹಣ್ಣನ್ನು ಅವರ ಕೈಗೆ ಹಿಂತಿರುಗಿಸಿ "ಇದನ್ನು ದಾರೀಲಿ ಸಿಗೋ ಹಳ್ಳಕ್ಕೆ ಎಸೆದುಬಿಡು. ಎಲ್ಲ ಸರಿ ಹೋಗುವುದು. ಇನ್ನು ಮುಂದೆ ರೇಖಿ ಚಿಕಿತ್ಸೆ ಯಾರಿಗೂ ನೀಡಬಾರದು" ಎಂದು ತಿಳಿಸಿದರು.
ಆಗ ಎದುರಿಗಿದ್ದ ವ್ಯಕ್ತಿ "ಗುರುಗಳೇ ಹೀಗಾಗಲು ಕಾರಣವೇನು?" ಎಂದು ಕೇಳಿದರು.
ಅದಕ್ಕೆ ಗುರುನಾಥರು "ವಿದ್ಯೆ ಯಾರು ಬೇಕಾದರೂ ಕಲಿಯಬಹುದು. ಆದರೆ ಚಿಕಿತ್ಸೆ ನೀಡುವಾಗ ಎಚ್ಚರವಿರಬೇಕು. ಒಂದೊಮ್ಮೆ ಚಿಕಿತ್ಸೆಗೊಳಗಾದ ರೋಗಿಯ ಖಾಯಿಲೆಯ ಲಕ್ಷಣಗಳು ಚಿಕಿತ್ಸಕನ ದೇಹದಲ್ಲಿ ಕಂಡು ಬಂದಲ್ಲಿ ಆತ ಚಿಕಿತ್ಸೆ ನೀಡದಿರುವುದೇ ಒಳಿತು. ಇವನ ಸಮಸ್ಯೆಯೂ ಅದೇ ಆಗಿದೆ" ಎಂದು ತಿಳಿಸಿದರು.
ಇಂದು ಆ ಹುಡುಗ ಆರೋಗ್ಯವಂತನಾಗಿರುವನು.
ಆಗ ಅಲ್ಲಿಯೇ ಇದ್ದು ಇದನ್ನೆಲ್ಲ ನೋಡುತ್ತಿದ್ದ ನನಗೆ ಒಂದು ವಿಷಯ ದಿಟವಾಯಿತು. ಪ್ರತಿಯೊಬ್ಬರೂ ನಮ್ಮದಲ್ಲದ ಕೆಲಸವನ್ನು ಮಾಡಲು ಹೋದರೆ ಅನಾಹುತ ಕಟ್ಟಿಟ್ಟ ಬುತ್ತಿ. ಇದನ್ನರಿತವ ಗುರುವಿನ ದಾರಿಯಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಂತೆ....,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Venkatachala avadootarige nanna poojya namanagalu. Yella olleyadaaguvante asheervadisi Kaapadi Guruvarya. Hari om tatsat.
ReplyDelete