ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 101
ಗ್ರಂಥ ರಚನೆ - ಚರಣದಾಸ
ಜಗನ್ನಿಯಾಮಕ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಮಾವನವರ ಮಾತಿನ ಅರ್ಥವೇನೆಂದು ತಿಳಿಯದ ಸೊಸೆ ಮಾವ ಹಾಗೇ ಮಾಡಿದ್ದೀನಿ ಎಂದು ಹೊಸ ಪಂಚೆ ತಂದಿಟ್ಟರು. ಈ ಮಧ್ಯೆ ಬಲಗಾಲಿನ ಸ್ವಾಧೀನವನ್ನು ಸಂಪೂರ್ಣ ಕಳೆದುಕೊಂಡ ಮಾವನವರ ದೇಹ ಹಾಸಿಗೆ ವ್ರಣಕ್ಕೆ ತುತ್ತಾಯಿತು.
ಆ ಕಾರಣವಾಗಿ ಅವರನ್ನು ಮೊದಲು ಮಲಗಿದ್ದ ಜಾಗದಿಂದ ಬೇರೆಡೆಗೆ ಬದಲಿಸಿದರು. ಆಗ ಅಲ್ಲಿಗೆ ಬಂದ ಗುರುನಾಥರು ಮನೆಯ ಬಾಗಿಲಿನಲ್ಲಿ ನಿಂತು ತನ್ನ ಶಿಷ್ಯರನ್ನು ಒಳಗೆ ಕಳಿಸಿ ಸೂಕ್ತ ಪಾರಾಯಣಗಳನ್ನು ಮಾಡಲು ತಿಳಿಸಿ ಅಲ್ಲಿಂದ ಹೊರಟರು.
ಈ ಮಧ್ಯೆ ಗೌರಿ ಹಬ್ಬದ ದಿನವೂ ಬಂದಿತು. ಅದೇ ದಿನವೇ ಅತ್ತೆಯವರು ಮರಣಿಸಿದ್ದ ದಿನವೂ ಆಗಿದ್ದರಿಂದ ವರ್ಷಾವಧಿ ಹಬ್ಬವಾದ ಗೌರಿಹಬ್ಬವು ಆ ಮನೆಯಲ್ಲಿ ಕೆಲ ವರ್ಷದಿಂದ ನಿಂತುಹೋಗಿತ್ತು.
ಅಂದು ಬೆಳಿಗ್ಗೆ ಅವರನ್ನು ತಂದು ಶ್ರಾದ್ಧ ನಡೆವ ಜಾಗದಲ್ಲಿ ಕುರ್ಚಿಯಲ್ಲಿ ಕೂರಿಸಲಾಯಿತಾದರೂ ಏನೆಂದು ಅರ್ಥವಾಗುತ್ತಿರಲಿಲ್ಲ. ಗಣಪತಿ ಹಬ್ಬದ ದಿನ ಸ್ವಲ್ಪ ಎಚ್ಚರಾವಸ್ಥೆಗೆ ಬಂದ ಅವರು "ಏಕೆ ನನ್ನ ಹೆಂಡತಿಯ ಶ್ರಾದ್ಧ ಮಾಡಲಿಲ್ಲವಲ್ಲ?" ಎಂದು ಕೇಳಿದರು.
ಆಗ ಅವರ ಸೊಸೆ, "ಇಲ್ಲ ಮಾವ ಮಾಡಿದ್ದೀವಿ" ಎಂದು ಮನವರಿಕೆ ಮಾಡಿಕೊಟ್ಟರು.
ಇದಕ್ಕೂ ಮೊದಲು ಅಂದರೆ ಗೌರಿ ಹಬ್ಬಕ್ಕೂ ಕೆಲ ದಿನಗಳ ಮುನ್ನ ಆ ವೃದ್ಧರು ತನ್ನ ಮಗನನ್ನು ಕರೆದು "ನೋಡು ಆರನೇ ತಾರೀಖು ಕಾಣಿಸುತ್ತಾ ಇದೆ. ಪುಸ್ತಕದ ಮೇಲೆ ಬರೆದಿದ್ದಾರೆ. ಆರನೇ ತಾರೀಖಿನಂದೇ ನನ್ನ ಅಂತ್ಯ" ಎಂದು ಬಡಬಡಿಸತೊಡಗಿದರು.
ಏನೆಂದು ಅರ್ಥವಾಗದ ಮಗ ಗುರುನಾಥರಲ್ಲಿ ಈ ಕುರಿತು ತಿಳಿಸಿದಾಗ ಗುರುನಾಥರು, "ಏನೂ ಹೇಳಬೇಡ ಸುಮ್ಮನಿದ್ದು ಬಿಡು" ಎಂದರು.
ಆಶ್ಚರ್ಯವೆಂದರೆ ಆ ಆರನೇ ತಾರೀಖು ಗಣಪತಿ ಹಬ್ಬವು ಆಗಿದ್ದಿತು. ಇದಾಗಿ ಸರಿಯಾಗಿ ಮುಂದಿನ ಚೌತಿಯ ಹಿಂದಿನ ದಿನ ಕರೆಮಾಡಿದ ಗುರುನಾಥರು "ನೀವು ಗಂಡ-ಹೆಂಡತಿ, ಇನ್ನು ಕೆಲವು ದಿನ ನಿಮ್ಮ ತಂದೆಯವರನ್ನು ಬಿಟ್ಟು ಬೇರೆ ಎಲ್ಲಿಯೂ ಹೋಗಕೂಡದು" ಎಂದು ತಿಳಿಸಿದರು.
ಆ ನಂತರ ಚೌತಿಯ ದಿನ ಮತ್ತೆ ಕರೆ ಮಾಡಿದ ಗುರುನಾಥರು "ಈ ದಿನ ಎಚ್ಚರವಾಗಿರಿ" ಎಂದು ತಿಳಿಸಿದರು.
ಅಂದು ಗುರುನಾಥರು ಕರೆ ಮಾಡಿದ ಕೆಲ ಗಂಟೆಗಳಲ್ಲಿ ಅವರ ತಂದೆಯವರು ದೇಹ ತ್ಯಾಗ ಮಾಡಿದರು. ಆ ವಯೋವೃದ್ಧರು ದೇಹ ಬಿಡುವ ಕೆಲ ನಿಮಿಷಗಳ ಮೊದಲು ತನ್ನ ಸೊಸೆಯ ಕೈಯಿಂದ ಒಂದು ಲೋಟಾ ಕಾಫಿಯನ್ನು ತರಿಸಿ ಕುಡಿದು "ಸಾಕಪ್ಪ ಸಾಕು" ಎಂದರು.
ನಂತರ ಗುರುನಾಥರ ಆದೇಶದಂತೆ ಆ ದೇಹಕ್ಕೆ ಹಾಲು, ನೀರಿನ ಅಭಿಷೇಕ ಮಾಡಿ ಹೊಸ ವಸ್ತ್ರಗಳನ್ನು ತೊಡಿಸಿ ಮಲಗಿಸಲಾಯಿತು.
ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಅಲ್ಲಿಗೆ ಬಂಡ ಗುರುನಾಥರು ಅವರನ್ನು ಕುರಿತು ಹೀಗೆ ನುಡಿದರು. "ನಾನು ನಿಮ್ಮ ತಂದೆಯವರನ್ನು ಎಲ್ಲಿಗೆ ಸೇರಿಸಬೇಕೋ ಅಲ್ಲಿಗೆ ಸೇರಿಸಿಯಾಗಿದೆ. ಇನ್ನು ನೀನು ಶಾಸ್ತ್ರಗಳು ಹೇಳಿದಂತೆ ಕ್ರಿಯಾದಿಗಳನ್ನು ಮಾಡಿ ಮುಗಿಸು" ಎಂದರು.
"ಗೌರಿ-ಗಣೇಶ ಹಬ್ಬ ವರ್ಷಾವಧಿ ಹಬ್ಬವಾಗಿದ್ದು, ಗೌರಿ ಹಬ್ಬದ ದಿನವೇ ನಿಮ್ಮ ತಾಯಿಯವರು ದೇಹಬಿಟ್ಟ ಕಾರಣ ಅದಾಗಲೇ ಗೌರಿಹಬ್ಬದ ಆಚರಣೆ ನಿಂತುಹೋಗಿದೆ. ಇನ್ನು ಗಣಪತಿ ಹಬ್ಬದ ದಿನದಂದೇ ನಿಮ್ಮ ತಂದೆಯವರ ದೇಹಾಂತ್ಯವು ನಿಶ್ಚಯವಾಗಿತ್ತು. ಹಾಗಾಗಿದ್ದಲ್ಲಿ ನಿಮ್ಮ ಮನೆಯಲ್ಲಿ ಜೀವನಪರ್ಯಂತ ಈ ಹಬ್ಬಗಳ ಆಚರಣೆಗಳೇ ಇಲ್ಲದಂತಾಗಿತ್ತು. ಹಾಗಾಗಬಾರದೆಂಬ ಕಾರಣಕ್ಕೆ ನಿಮ್ಮ ತಂದೆಯವರ ದೇಹಾಂತ್ಯವನ್ನು ಒಂದು ತಿಂಗಳ ಕಾಲ ಮುಂದೂಡಿದ್ದೆ" ಎಂದು ತಿಳಿಸಿ ಅಲ್ಲಿಂದ ಹೊರಟರು.
ತನ್ನ ಭಕ್ತರ ಸಂಭ್ರಮಕ್ಕೆ ಧಕ್ಕೆ ಬಾರದಂತೆ ಸಾವನ್ನೇ ಮುಂದೂಡಿದ ಗುರುಕರುಣೆಯನ್ನು ನೆನೆದು ಆ ಮನೆಯವರೆಲ್ಲರೂ ಧನ್ಯತಾಭಾವದಿಂದ ಕಣ್ಣೀರಿಟ್ಟರು.......,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುವೆಂಬ ಪದದ ಮಹಿಮೆ ಅಪಾರವಾದುದು. ಗುರು ನಾಮಸ್ಮರಣೆ ಭೂತ-ಭವಿಷ್ಯತ್-ವರ್ತಮಾನಗಳನ್ನು ಅದಲು-ಬದಲು ಮಾಡಬಲ್ಲದು. ಒಮ್ಮೆ ಗುರುವೆಂದು ಕರೆದರೆ ಸಾಕು, ಜನ್ಮ ಜನ್ಮಾಂತರವೆಲ್ಲ ಈ ಗುರು-ಶಿಷ್ಯರ ಸಂಬಂಧ ಮುಂದುವರೆಯುವುದು.
ಶಿವಮೊಗ್ಗ ಸಮೀಪದ ಹಳ್ಳಿಯೊಂದರ ನಿವಾಸಿಗಳಾಗಿದ್ದ, ಸುಸಂಸ್ಕೃತ ಕುಟುಂಬ ಒಂದಿತ್ತು. ಅನನ್ಯ ಗುರುಭಕ್ತರಾಗಿದ್ದ ಅವರು ಗುರುನಾಥರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.
ತಂದೆ-ತಾಯಿ, ಮಗ-ಸೊಸೆ, ಮೊಮ್ಮಕ್ಕಳನ್ನೊಳಗೊಂಡ ಆ ಚಿಕ್ಕ ಕುಟುಂಬದಲ್ಲಿ ಅತ್ತೆಯವರು ಗೌರಿಹಬ್ಬದ ದಿನವೇ ಮರಣಿಸಿದ್ದ ಕಾರಣ ಕಳೆದ ಕೆಲ ವರ್ಷಗಳು ಗೌರಿ ಹಬ್ಬ ಆಚರಣೆ ಇರಲಿಲ್ಲ. ವಯೋವೃದ್ಧರಾಗಿದ್ದ ಮಾವನವರು ಬಹಳ ವರ್ಷಗಳಿಂದ ಒಂದು ಸಮಸ್ಯಯಿಂದ ಬಳಲುತ್ತಿದ್ದರು. ಅದೇನೆಂದರೆ ನಮಸ್ಕರಿಸಲೋ ಅಥವಾ ಇನ್ಯಾವುದೇ ಕಾರಣಕ್ಕೆ ಕೆಳಗೆ ಬಗ್ಗಿದರೆ ಅಲ್ಲಿಯೇ ತಲೆ ತಿರುಗಿ ಬಂದು ಬಿದ್ದು ಬಿಡುತ್ತಿದ್ದರು.
ಈ ಬಗ್ಗೆ ಗುರುನಾಥರಲ್ಲಿ ವಿಚಾರಿಸಲಾಗಿ ಅವರ ಮೆದುಳಿಗೆ ರಕ್ತ ಚಲನೆಯಲ್ಲಿ ಸಮಸ್ಯೆ ಇದ್ದ ಕಾರಣ ಹೀಗಾಗುತ್ತಿತ್ತು ಎಂದು ತಿಳಿದುಬಂತು, ಹಾಗೂ ಅದಕ್ಕೆ ಪರಿಹಾರ ಕೂಡಾ ದೊರಕಿತು.
ಒಮ್ಮೆ ಆ ವಯೋವೃದ್ಧರು ಬೆಳಗಿನ ವಾಯುವಿಹಾರಕ್ಕೆಂದು ಹೋಗಿದ್ದಾಗ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟರು. ವಿಷಯ ತಿಳಿದ ಕುಟುಂಬದ ಸದಸ್ಯರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರು.
ಪರೀಕ್ಷೆ ಮಾಡಿದ ವೈದ್ಯರು ಸೊಂಟದ ಎಡ ಮೂಳೆ ಮುರಿದಿರುವುದಾಗಿಯೂ ಶಸ್ತ್ರಚಿಕಿತ್ಸೆ ಮಾಡಿ ಸರಿಪಡಿಸಬಹುದೆಂದೂ ತಿಳಿಸಿದರು. ಆದರೆ ದುರದೃಷ್ಟವಶಾತ್ ಶಸ್ತ್ರಚಿಕಿತ್ಸೆಯ ನಂತರವೂ ಅವರಿಗೆ ಎದ್ದು ಓಡಾಡಲಾಗುತ್ತಿರಲಿಲ್ಲ. ಅದಕ್ಕೆ ಕಾರಣವೇನೆಂದು ತಿಳಿದು ಬರಲಿಲ್ಲ.
ಆ ನಂತರ ಹೆಚ್ಚಿನ ಪರೀಕ್ಷೆ ನಡೆಸಲಾಗಿ ಶಸ್ತ್ರಚಿಕಿತ್ಸೆ ಕಾಲದಲ್ಲಿ ಮೂಳೆಯನ್ನು ಅದಲು-ಬದಲಾಗಿ ಜೋಡಿಸಿದ್ದಾರೆಂದು ತಿಳಿದುಬಂತು. ಅದಾಗಲೇ ವಯೋವೃದ್ಧರಾಗಿದ್ದ ಕಾರಣ ಪುನಃ ಶಸ್ತ್ರಚಿಕಿತ್ಸೆ ಮಾಡುವುದು ಅಸಾಧ್ಯವೆಂದು ವೈದ್ಯರು ತಿಳಿಸಿದರು. ಗೌರಿ ಹಬ್ಬಕ್ಕೆ ಹದಿನೈದು ದಿನ ಬಾಕಿಯಿರುವಾಗ ಇದ್ದಕ್ಕಿದ್ದಂತೆ ಆ ವಯೋವೃದ್ಧರು ಅರೆ ಪ್ರಜ್ಞಾವಸ್ಥೆಗೆ ಜಾರಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಆಸ್ಪತ್ರೆಯಲ್ಲಿ ಅವರನ್ನು ನೋಡಿಕೊಳ್ಳುತ್ತಿದ್ದ ಅವರ ಸೊಸೆಯನ್ನು ಕುರಿತು ಹೀಗೆ ಹೇಳತೊಡಗಿದರು. "ನೋಡಲ್ಲಿ ಜಗದ್ಗುರುಗಳು ಬಂದಿದ್ದಾರೆ. ಎಲ್ಲರಿಗೂ ವಸ್ತ್ರ ಕೊಡುತ್ತಿದ್ದಾರೆ. ಜನ ಸಾಲಾಗಿ ನಿಂತಿದ್ದಾರೆ. ನೀನು ನನಗಿಂತ ಮುಂದೆ ನಿಂತಿದ್ದೀಯಾ? ನಾನು ಮೊದಲು ಹೋಗಬೇಕು. ನಿನಗೇನು ಅವಸರ" ಎಂದು ಅರೆಪ್ರಜ್ಞಾವಸ್ಥೆಯಲ್ಲಿಯೂ ತನ್ನ ಸೊಸೆಯ ಕೈ ಹಿಡಿದು ಇನ್ನೊಂದು ಬದಿಗೆ ಎಳೆದರು. ಏನೆಂದು ತಿಳಿಯದ ಸೊಸೆ ಬದಿಗೆ ಬಂದರು.
ನಂತರ ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆತರಲಾಯಿತು. ಆಗಲೂ ಅರೆಪ್ರಜ್ಞಾವಸ್ಥೆಯಲ್ಲಿದ್ದ ಅವರು ಮರುದಿನ ತನ್ನ ಸೊಸೆಯನ್ನು ಕರೆದು ಹೀಗೆ ಹೇಳತೊಡಗಿದರು. "ನೋಡು ಮೂರು ಜನ ಸನ್ಯಾಸಿಗಳು ಬಂದಿದ್ದಾರೆ. ಅವರಿಗೆ ಮಣೆ ಹಾಕು, ಪಾದಪೂಜೆ ಮಾಡು, ಪಾದುಕೆಗೆ ಹೂ ಹಾಕು. ನನಗೆ ಹೊಸ ಪಂಚೆ ಕೊಡು, ನಾನು ಹೊರಗೆ ಹೋಗಬೇಕು" ಎಂದರು.

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Sakaraayapurada poojya gurugalaada venkatachala Avara paadagalige nanna bhakti poorvaka namanagalu. Yellaranu ee kantaka dinda mukthi kottu manashanti honduvante asheervadisi Guruvarya. Hari om tatsat.
ReplyDelete