ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 102
ಗ್ರಂಥ ರಚನೆ - ಚರಣದಾಸ
ಸರ್ವಾಂತರ್ಯಾಮಿ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಜಗವೆಲ್ಲ ಏನೆಂದು ತಿಳಿದವನಿಗೆ ಮನೆಯಲ್ಲಿ ಏನಾಗುತ್ತಿದೆ ಎಂದು ತಿಳಿಯಲಾರದೇ? ಗುರು ಸರ್ವಾಂತರ್ಯಾಮಿ ಆಗಿದ್ದು,ದೇಹ-ವಿದೇಹ ಎಂಬ ಭೇದವಿಲ್ಲದೆ ಪರಿಹಾರ ನೀಡಬಲ್ಲವ ಗುರು ಮಾತ್ರ.
ಒಮ್ಮೆ ಮಲೆನಾಡು ಮೂಲದಿಂದ ಬಂದ ಹೆಣ್ಣು ಮಗಳೊಬ್ಬಳು ತನ್ನ ಪತಿ ಹಾಗೂ ಅಣ್ಣನೊಂದಿಗೆ ಗುರುನಿವಾಸಕ್ಕೆ ಬಂದರು. ಅವರ ಅಣ್ಣ ಪರಮ ಗುರುಭಕ್ತರಾಗಿದ್ದು ಇತ್ತೀಚೆಗಷ್ಟೇ ಮದುವೆಯಾಗಿದ್ದ ತನ್ನ ತಂಗಿಯ ಸಮಸ್ಯೆಯನ್ನು ಹೀಗೆ ಹೇಳತೊಡಗಿದರು.
"ಸ್ವಾಮಿ, ನನ್ನ ತಂಗಿಯನ್ನು ಇತ್ತೀಚೆಗಷ್ಟೇ ಬೆಂಗಳೂರಿಗೆ ಮಾಡುವೆ ಮಾಡಿ ಕೊಟ್ಟಿದ್ದೇವೆ. ಅವರು ಮಲಗುವ ಕೋಣೆಗೆ ಹೋದಾಕ್ಷಣ ಪರಸ್ಪರ ಒಟ್ಟಿಗಿರಲಾರದೆ ಹೊರಬರುತ್ತಾರೆ. ಆ ಕೋಣೆಯಿಂದ ಹೊರಬಂದಾಕ್ಷಣ ನೆಮ್ಮದಿಯಾಗುತ್ತಾರೆ. ಏಕೆ ಹೀಗೆ ಹಿಂಸೆಯಾಗುತ್ತಿದೆ ಎಂದು ಎಲ್ಲ ಕಡೆ ವಿಚಾರಿಸಿದರೂ ಏನೆಂದು ತಿಳಿದು ಬಂದಿಲ್ಲ. ಅದಕ್ಕೆ ನೇರವಾಗಿ ನಿಮ್ಮಲ್ಲಿಗೆ ಕರೆತಂದಿದ್ದೇನೆ ಗುರುಗಳೇ" ಎಂದು ಬಿನ್ನವಿಸಿಕೊಂಡರು.
ಆಗ ಅವರ ಕಡೆ ತಿರುಗಿದ ಗುರುನಾಥರು ಹೀಗೆ ಹೇಳತೊಡಗಿದರು. "ಏನಪ್ಪಾ ನೀವು ಮಲಗುವ ಕೋಣೆಯಲ್ಲಿ ನಿಮಗೆ ಉಡುಗೊರೆಯಾಗಿ ಬಂದ ಒಂದು ಗೊಂಬೆಯನ್ನು ಇಟ್ಟಿದ್ದೀರಲ್ಲವೇ" ಎನ್ನಲು, ಆ ದಂಪತಿಗಳು ತುಸು ಯೋಚಿಸಿ ಹೌದೆಂದರು.
ಆಗ ಮುಂದುವರೆದ ಗುರುನಾಥರು ಹೀಗೆ ನುಡಿದರು: - "ಆ ಗೊಂಬೆಯಲ್ಲಿ ಒಂದು ಚೈತನ್ಯದ ಆವಾಹನೆಯಾಗಿದ್ದು ಅದು ನಿಮ್ಮನ್ನು ಹಿಂಸಿಸುತ್ತಿದೆ" ಎಂದರು.
ಆಗ ಭಯಭೀತರಾದ ಆ ದಂಪತಿಗಳು ಪರಿಹಾರವನ್ನು ಕೇಳಲಾಗಿ ಗುರುನಾಥರು ಹೀಗೆ ಹೇಳಿದರು: - "ಆ ಗೊಂಬೆಯನ್ನು ನಿಮ್ಮ ಮನೆಯಿಂದ ದೂರದಲ್ಲಿರುವ ಒಂದು ಮರದ ಕೆಳಗೆ ಇಟ್ಟು ರಾತ್ರಿ ಹನ್ನೆರಡು ಗಂಟೆಗೆ ಸರಿಯಾಗಿ ಚಪ್ಪಾಳೆ ಹೊಡಿ. ತಕ್ಷಣವೇ ಆ ಗೊಂಬೆ ಸುಟ್ಟು ಬೂದಿಯಾಗುತ್ತದೆ. ಆ ನಂತರ ನಿಮಗೆ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ" ಎಂದರು.
ಹಾಗೆಯೇ ಮಾಡಲಾಗಿ ಗುರುನಾಥರು ನುಡಿದಂತೆಯೇ ಗೊಂಬೆಯು ಸುಟ್ಟು ಬೂದಿಯಾಯಿತು. ಇಂದು ಆ ದಂಪತಿಗಳು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.
ಹಾಗೆಯೇ ಇನ್ನೊಂದು ಸಂದರ್ಭದಲ್ಲಿ ಗುರುನಾಥರ ದೂರದ ಬಂಧು ಒಬ್ಬರು ಅಮೇರಿಕಾಕ್ಕೆ ವ್ಯವಹಾರ ನಿಮಿತ್ತ ಹೋಗಬೇಕಾಗಿ ಬಂತು.
ಗುರುನಿವಾಸಕ್ಕೆ ಬಂದು ಆಶೀರ್ವಾದ ಪಡೆದ ಅವರು ಅಲ್ಲಿಂದ ಬೆಂಗಳೂರು ತಲುಪಿ ಅಲ್ಲಿಂದ ಅಮೇರಿಕಾ ತಲುಪಿ ಅಲ್ಲಿಂದ ಕರೆ ಮಾಡುವವರೆಗೂ ಕುಳಿತ ಜಾಗದಿಂದ ಗುರುನಾಥರು ಅಲುಗಾಡಿರಲಿಲ್ಲ.
ಅಲ್ಲಿಂದ ಕರೆ ಮಾಡಿದ ಅವರು ತಮ್ಮ ವ್ಯವಹಾರದ ದಾಖಲೆಗಳಿದ್ದ ಚೀಲ ವಿಮಾನ ನಿಲ್ದಾಣದಲ್ಲಿ ಕೈ ತಪ್ಪಿ ಹೋಗಿದೆ. ಅದು ಸಿಗದಿದ್ದ ಪಕ್ಷದಲ್ಲಿ ನನ್ನ ಪ್ರವಾಸವೇ ವ್ಯರ್ಥ ಎಂದು ಕಣ್ಣೀರಿಡತೊಡಗಿದರು.
ಆಗ ತುಸು ಯೋಚಿಸಿದ ಗುರುನಾಥರು "ಚಿಂತಿಸಬೇಡ. ನಿನ್ನ ಚೀಲ ನಿಲ್ದಾಣದ ಸಿಬ್ಬಂದಿಯ ಪ್ರಮಾದದಿಂದಾಗಿ ಬೇರೆಯವರ ಕೈ ಸೇರಿದೆ. ಇನ್ನು ಇಷ್ಟು ಗಂಟೆಗಳಲ್ಲಿ ಆವರೇ ಬಂದು ನಿನಗೆ ಅದನ್ನು ತಲುಪಿಸುವರು" ಎಂದು ನುಡಿದರು.
ಅಂತೆಯೇ ಅವರು ಚೀಲ ಕೈ ಸೇರಿದೊಡನೆ ನನಗೆ ಕರೆ ಮಾಡಿ ಚೀಲ ಸಿಕ್ಕ ವಿಚಾರವನ್ನು ಹೇಳಿ ಸಮಾಧಾನದ ನಿಟ್ಟುಸಿರು ಬಿಟ್ಟರು. ಆಗ ಗುರುನಾಥರ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು ಗುರುನಿವಾಸದಲ್ಲಿ ನಡೆದ ಏನೋ ವಿಚಾರವನ್ನು ತಿಳಿಸಲು ಮುಂದಾದರು.
ಆಗ ಅವರನ್ನು ತಡೆದ ಗುರುನಾಥರು "ಯೋ ಜಗತ್ತಿನಲ್ಲಿ ಏನಾಗುತ್ತೇ ಎಂದು ತಿಳಿದವನಿಗೆ ತನ್ನ ಮನೇಲಿ ಏನಾಗುತ್ತೇ ಅಂಥ ತಿಳಿಯಲ್ವೇ?" ಎಂದರು ನಗುತ್ತಾ.....

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya venkatachala swamy Avara Divya charanamruta galige nanna saashtaanga pranaamagalu. Sadaa kaala Yellaranu Harasi haagu asheervadisi Kaapadi swamy. Sarve jano sukinobavantu.
ReplyDelete