ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 93
ಗ್ರಂಥ ರಚನೆ - ಚರಣದಾಸ
ನುಡಿದಂತೆ ನಡೆ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶುದ್ಧವಾದ ಬೆಳಕಿಗೆ ಏನೆಂದು ಹೆಸರು ಕೊಡಲು ಸಾಧ್ಯ? ಏನೇ ಹೆಸರಿಟ್ಟರೂ ಅದು ಬೆಳಕಷ್ಟೇ... ಅಲ್ಲವೇ? ಗುರುವೆಂದು ಕರೆಯಬೇಡ, ಆತ ತೋರಿದ ದಾರಿಯಲ್ಲಿ ನಡೆದರೆ ಸಾಕು, ನಿನ್ನ ಗುರು ಯಾರೆಂದು ನಿನ್ನ ಆಚರಣೆಯೇ ಹೇಳುತ್ತದೆ. ಅಂದರೆ ನುಡಿದಂತೆ ನಡೆ" ಎಂಬುದು ಇದರ ತಾತ್ಪರ್ಯ.
ಈಗಲೇ ಹೇಳಿದಂತೆ ಗುರುನಾಥರು ಪ್ರತಿದಿನ ಊರೊಳಗಿನ ಈಶ್ವರ ದರ್ಶನ ಮಾಡಿ ಊರೊಳಗಿನ ಕೆಲವರ ಮನೆಗೆ ತೆರಳಿ ಅಲ್ಲಿನ ಮಕ್ಕಳಿಗೆ ಸಿಹಿ ನೀಡಿ ಹಿರಿಯರಿಗೆ ತಿಂಡಿ, ಮಹಿಳೆಯರಿಗೆ ಅರಿಶಿನ-ಕುಂಕುಮ ನೀಡುವುದು ನಿತ್ಯದ ಕಾರ್ಯವಾಗಿತ್ತು.
ಅವರು ಹೋಗಲಾಗದಿದ್ದ ಸಂದರ್ಭದಲ್ಲಿ ಚರಣದಾಸನಾದ ನನ್ನಿಂದ ಈ ಕೆಲಸ ಮಾಡಿಸುತ್ತಿದ್ದರು.
ಒಮ್ಮೆ ಹೀಗೆ ಒಬ್ಬರ ಮನೆಗೆ ಬಂದ ಗುರುನಾಥರನ್ನು ಆ ಮನೆಯ ಮಹಿಳೆ ಹೀಗೆ ಕೇಳಿದಳು. "ಗುರುಗಳೇ ತಿಂಡಿ ಆಯ್ತಾ?"
ಗುರುನಾಥರು "ಇಲ್ಲ ತಾಯಿ, ನಿಮ್ಮನೆಯಲ್ಲಿ ಇಂದು ಏನು ತಿಂಡಿ ಮಾಡಿದ್ದೀಯಾ ತಾಯಿ?"
ಆ ತಾಯಿ, "ಗುರುಗಳೇ, ದೋಸೆ ಮಾಡಿದ್ದೀನಿ".
ಆಗ ಗುರುನಾಥರು "ಹಸಿವಾಗ್ತಿದೆ ಕೊಡ್ತೀಯೇನಮ್ಮಾ?" ಎನ್ನಲು
ವಿಚಲಿತರಾದ ಆಕೆ, "ಕೊಡ್ತೀನಿ, ಆದರೆ ನೀವು ಸ್ನಾನ ಮಾಡಿ ಬರಬೇಕು" ಎಂದು ಶರತ್ತು ವಿಧಿಸಿದಳು.
ತಕ್ಷಣವೇ ಎದ್ದ ಗುರುನಾಥರು ಆ ಮಹಿಳೆಯ ಮನೆಯ ಹಿಂದೆಯೇ ಇದ್ದ ಬಾವಿ ಸಮೀಪ ತೆರಳಿ ಕೊಡದಿಂದ ನೀರು ಸೇದಿ ಈರದು ಕೊಡ ಮೈಮೇಲೆ ಹಾಕಿಕೊಂಡು ನೇರವಾಗಿ ಆ ಮಹಿಳೆಯನ್ನು ಕರೆದು, "ಸ್ನಾನ ಆಯ್ತು ದೋಸೆ ಕೊಡು" ಎಂದು ಕೈ ಚಾಚಿದರು.
ವಾಸ್ತವವೆಂದರೆ ಅಂದು ಅವರ ಮನೆಯಲ್ಲಿ ದೋಸೆಯನ್ನೇ ಮಾಡಿರಲಿಲ್ಲ. ಗುರುನಾಥರನ್ನು ಮೆಚ್ಚಿಸಲು ಬಾಯಿಮಾತಿನ ಉಪಚಾರ ಮಾಡಲು ಹೋದ ಆ ಮಹಿಳೆ ಈಗ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದರು.
ಕೂಡಲೇ ಸಾವರಿಸಿಕೊಂಡು ಆ ಮಹಿಳೆ "ಗುರುಗಳೇ ನನ್ನ ಕ್ಷಮಿಸಿ. ನಾನು ಸುಳ್ಳು ಹೇಳಿದೆ. ಇಂದು ನಾನು ದೋಸೆ ಮಾಡಿರಲೇ ಇಲ್ಲ" ಎಂದು ಗುರುನಾಥರ ಕಾಲಿಗೆ ಎರಗಿದಳು.
ಒಂದು ದೇವಸ್ಥಾನದ ಅರ್ಚಕರ ಪುತ್ರನೋರ್ವ ತನ್ನ ನೆರೆಮನೆಯ ಯುವತಿಯನ್ನು ಪ್ರೀತಿಸುತ್ತಿದ್ದರು. ಆ ಯುವತಿಯೂ ಆತನನ್ನು ಪ್ರೀತಿಸುತ್ತಿದ್ದಳು. ಈ ವಿಷಯವನ್ನು ಆ ಪ್ರೇಮಿಗಳು ಗುರುನಾಥರಲ್ಲಿ ತಿಳಿಸಿದರು. ಗುರುನಾಥರು, ಕೆಲಕಾಲ ಸುಮ್ಮನಿರುವಂತೆ ತಿಳಿಸಿದರು.
ಈ ಮಧ್ಯೆ ಈ ಬಾಂಧವ್ಯದ ಬಗ್ಗೆ ಒಪ್ಪಿಗೆ ಇರದ ಯುವತಿಯ ಪೋಷಕರು ದೇವಸ್ಥಾನದ ಆಡಳಿತಾಧಿಕಾರಿಯಲ್ಲಿ ತನ್ನ ಅಸಮ್ಮತಿಯನ್ನು ತಿಳಿಸಿದರು.
ಆ ಆಡಳಿತಾಧಿಕಾರಿಯು ನೇರವಾಗಿ ಗುರುನಾಥರನ್ನು ಸಂಪರ್ಕಿಸಿ ಹೀಗೆ ವಿನಂತಿಸಿದರು. "ಸ್ವಾಮಿ, ನನ್ನದೊಂದು ವಿನಂತಿ. ಆ ಯುವತಿಗೆ ಇನ್ನು ವಯಸ್ಸು ಹದಿನೆಂಟು ಆಗಿರುವುದಿಲ್ಲ. ಆಕೆ ಹದಿನೆಂಟನೇ ವಯಸ್ಸಿಗೆ ಬರಲು ಇನ್ನು ಕೆಲವೇ ತಿಂಗಳು ಬಾಕಿ ಇದ್ದು ತದನಂತರ ನಾನೇ ಮುಂದೆ ನಿಂತು ಅವರಿಬ್ಬರ ವಿವಾಹ ನಿಶ್ಚಯ ಮಾಡುತ್ತೇನೆ. ತಾವು ದಯಮಾಡಿ ಅನುಮತಿ ನೀಡಬೇಕು" ಅಂದರು.
ಗುರುನಾಥರು "ಆಯ್ತಪ್ಪಾ" ಎಂದು ಸಮ್ಮತಿಸಿದರು.
ತದನಂತರ ಆಕೆ ಹದಿನೆಂಟನೇ ವಯಸ್ಸು ದಾಟಿ ಕೆಲವು ತಿಂಗಳು ಕಳೆಯಿತಾದರೂ ಆ ಆಡಳಿತಾಧಿಕಾರಿ ತನ್ನ ಮಾತನ್ನು ನಡೆಸಲೇ ಇಲ್ಲ. ಇತ್ತ ಯುವತಿಯ ಪೋಷಕರು ಮಗಳಿಗೆ ಬೇರೆ ವರನ ಶೋಧದಲ್ಲಿ ತೊಡಗಿದರು.
ಯುವತಿಯಿಂದ ಈ ವಿಷಯ ತಿಳಿದ ಆ ಹುಡುಗ ನೇರವಾಗಿ ಗುರುನಿವಾಸಕ್ಕೆ ಬಂದು ತನ್ನ ಪರಿಸ್ಥಿತಿಯನ್ನು ವಿವರಿಸಿ, ತಾವು ಹೀಗಾದರೂ ಮಾಡಿ ನಮ್ಮಿಬ್ಬರನ್ನು ಒಂದು ಮಾಡಬೇಕೆಂದು ಪ್ರಾರ್ಥಿಸಿದನು.
ಆಗ ನೇರವಾಗಿ ಆ ದೇವಸ್ಥಾನದ ಆಡಳಿತಾಧಿಕಾರಿಯನ್ನು ಭೇಟಿಯಾದ ಗುರುನಾಥರು ಆಡಳಿತಾಧಿಕಾರಿಯನ್ನು ಕುರಿತು ಹೀಗೆ ಹೇಳಿದರು.
"ನಿಮಗ್ಯಾಕೆ ಬೇಕು ಇನ್ನೊಬ್ಬರ ಮದುವೆ ವಿಚಾರ?. ತಾವು ಇಲ್ಲಿ ಕುಳಿತಿರುವುದು ಆಡಳಿತ ನಡೆಸಲೂ ಅಥವಾ ವಿವಾಹ ವೇದಿಕೆ ನಿರ್ಮಿಸಲೋ?" ಎನ್ನಲು ಆ ಆಡಳಿತಾಧಿಕಾರಿಯು ವಿಚಲಿತರಾದರು.
ಕೂಡಲೇ ಗುರುನಾಥರು "ಮಾತು ಕೊಡಬಾರದು. ಕೊಟ್ಟ ಮೇಲೆ ತಪ್ಪಬಾರದು, ನೀವು ಕೊಟ್ಟ ಮಾತನ್ನು ನಡೆಸಲು ಆಯ್ತಾ ನಿಮ್ಮಿಂದ? ಮಾತು ಕೊಡುವ ಮುಂಚೆ ಯೋಚಿಸಬೇಕು. ಕೊಟ್ಟ ಮೇಲೆ ನಡೆಸಬೇಕಾದ್ದು ಧರ್ಮವಲ್ಲವೇ? ನೀವು ಕೊಟ್ಟ ಮಾತನ್ನೇ ನಿಮ್ಮಿಂದ ನಡೆಸಲಾಗಲಿಲ್ಲವೆಂದ ಮೇಲೆ ನಿಮ್ಮಿಂದ ಇನ್ನೇನು ತಾನೇ ಮಾಡಲು ಸಾಧ್ಯ?"
"ಒಂದೋ ಕೊಟ್ಟ ಮಾತಿನಂತೆ ನಡೆಯಿರಿ. ಇಲ್ಲವೇ ನಾನು ಏನು ಮಾಡುವೆನೆಂಬುದನ್ನು ನೋಡಿ" ಎಂದರು ವ್ಯಗ್ರರಾಗಿ. ಗುರುನಾಥರ ಉಗ್ರ ರೂಪವನ್ನು ನೋಡಿ ಆ ಆಡಳಿತಾಧಿಕಾರಿ ಬೆದರಿಬಿಟ್ಟರು.
ಕೂಡಲೇ ಅಲ್ಲಿಂದ ಹೊರಬಂದ ಗುರುನಾಥರು ಆ ಪ್ರೇಮಿಗಳನ್ನು ಓರ್ವ ಗುರುಭಕ್ತರ ಮನೆಗೆ ಕರೆಸಿ ಪರಸ್ಪರ ಹಾರ ಬದಲಾಯಿಸಿದರು. ನಂತರ ಸಿಹಿ ತಿನಿಸಿದರು. ಹೆಣ್ಣು ಒಪ್ಪಿಸಿ ಕೊಡುವ ಶಾಸ್ತ್ರವನ್ನೂ ಮುಗಿಸಿದರು.
ಈ ವಿಚಾರವನ್ನು ತಿಳಿದ ಬಳಿಕ ಆಡಳಿತಾಧಿಕಾರಿ ಹಾಗೂ ಯುವತಿಯ ಪೋಷಕರು ಬೇರೆ ದಾರಿ ಕಾಣದೇ ತಾವೇ ಮುಂದೆ ನಿಂತು ಆ ಪ್ರೇಮಿಗಳಿಗೆ ವಿವಾಹ ನೆರವೇರಿಸಿದರು......,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya venkatachala avadootarige paadagalige nanna bhakti poorvaka namanagalu. Sarvarannu uddarisi ee kantaka dinda mukthi kottu Kaapadi swamy. Hari om tatsat.
ReplyDeleteNanu iga ide reeti tumba kashtadalli iddene. nanna mistakes arivagide. Nimage nanna bhaktipoorvaka namanagalu. Dayavittu nanna kashtagalinda parihara siguva hage dari madi kodi Gurudeva.
ReplyDelete