ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 91
ಗ್ರಂಥ ರಚನೆ - ಚರಣದಾಸ
ಭಾವ ಜಗತ್ತು
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಇನ್ನೊಂದು ಜೀವಿಯ ಜನನವಾಗುವುದೆಂದರೆ ಹುಡುಗಾಟದ ಮಾತಲ್ಲ. ದೇಹ ಸಂಬಂಧವೆಂದರೆ ಆಟವಲ್ಲ. ಅದೊಂದು ತಪಸ್ಸಿನಂತೆ. ಪರಿಶುದ್ಧ ಭಾವದಿಂದ ಸ್ತ್ರೀ-ಪುರುಷ ಸಂಬಂಧವೇರ್ಪಟ್ಟಲ್ಲಿ ಸಾಧಕ ಜೀವಿಗಳು ಜನಿಸುವರು.
ಯಾವುದೇ ಪೂರ್ವನಿಗದಿ ಇರದೇ ಮದುವೆ ಮಾಡಿಸುವುದರಲ್ಲಿ ಗುರುನಾಥರು ಸಿದ್ಧಹಸ್ತರಾಗಿದ್ದರು. ಪರಸ್ಪರ ಪ್ರೀತಿಸಿ ಅಂದು ಗುರುನಾಥರ ಕಾಲಿಗೆರಗಿದ ಎಷ್ಟೋ ಅಂತರ್ಜಾತೀಯ ಜೋಡಿಗಳ ಸುಖಜೀವನಕ್ಕೆ ಮುನ್ನುಡಿಯಾದವರು ನಮ್ಮ ಗುರುನಾಥರು.
ಒಂದು ಸಂದರ್ಭದಲ್ಲಿ ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾ ಗುರುನಾಥರು ಹೀಗೆ ಹೇಳಿದರು:- "ಗಂಡು-ಹೆಣ್ಣು ಸೇರುವುದೆಂದರೆ ಅದೊಂದು ಯಜ್ಞದಂತೆ.. ಹೇಗೆ ಯಜ್ಞ ಮಾಡಿಸುವವನ, ಮಾಡುವವನ ಮನಸ್ಸು ಭಗವಂತನಲ್ಲಿ ಏಕವಾಗಿದ್ದಲ್ಲಿ ಮಾತ್ರ ಯಜ್ಞದ ಫಲ ಪರಿಪೂರ್ಣವಾಗುವುದೋ ಅಂತೆಯೇ ಸ್ತ್ರೀ-ಪುರುಷ ಸಂಸರ್ಗವಾಗುವಾಗ ಅದು ಕೇವಲ ದೇಹ ಸಂಪರ್ಕವಾಗಿರದೇ, ಉಸಿರು-ಉಸಿರೂ, ಭಾವ-ಮನಗಳು ಏಕವಾಗಿದ್ದರೆ ಮಾತ್ರ ಒಳ್ಳೆಯ ಮಕ್ಕಳು ಜನಿಸಲು ಸಾಧ್ಯ".
ಆದರೆ ಬೇಸರವೆಂದರೆ ಇಂದಿನ ದಂಪತಿಗಳು ಸಂಸರ್ಗ ಸಮಯದಲ್ಲಿ ಬೇರಾರ ಬಗ್ಗೆಯೋ ಯೋಚಿಸುತ್ತಾ ಇರುವರು. ಜಗತ್ತು ಭಾವನಾಮಯ. ಹಾಗಾಗಿ ಭಾವ ಹೇಗಿರುತ್ತದೋ ಅಂತೆಯೇ ಜನನವಾಗುವುದು. ಹಾಗಾದ್ರೆ ತಪ್ಪು ನಡೀತಿರೋದು ಎಲ್ಲಿ ಅಂತ ತಿಳಿಯಲು ಸುಲಭವಲ್ಲವೇ? ಆ ಮೂಲವನ್ನು ಸರಿಪಡಿಸಿಕೊಂಡರೆ ಸಂಸಾರ ಬಂಧನವಾಗುವುದಿಲ್ಲ, ನಂದನವಾಗುವುದು.
ಒಮ್ಮೆ ಚರಣದಾಸನಾದ ನಾನು ಗುರುನಿವಾಸದಲ್ಲಿದ್ದಾಗ ಅಲ್ಲಿಗೆ ಬಂಡ ನನ್ನ ಬಂಧುವೊಬ್ಬರು ಅವರ ಮಗನ ತುಂಟಾಟ ವಿಪರೀತವಾಗಿದ್ದು ಅದರಿಂದ ಅವನನ್ನು ನಮ್ಮ ಮನೆಗೆ ತಂದು ಬಿಟ್ಟಿರುವುದಾಗಿಯೂ ನಾನೇ ಆ ಮಗುವನ್ನು ಸಂಭಾಳಿಸಬೇಕೆಂದೂ ತಿಳಿಸಿದರು.
ನಾನು ಈ ವಿಚಾರವನ್ನು ನೇರವಾಗಿ ಗುರುನಾಥರ ಗಮನಕ್ಕೆ ತಂದೆ. ಕಾರಣ ಆ ಬಂಧುಗಳಿಗೆ ಮದುವೆಯಾಗಿ ಕಾಲ ವರ್ಷವಾದರೂ ಸಂತಾನವಾಗಿರಲಿಲ್ಲ. ನಂತರ ಗುರು ಕೃಪೆಯಿಂದ ಈ ತುಂಟ ಮಗು ಜನಿಸಿತ್ತು.
ಈ ವಿಷಯ ತಿಳಿದ ಗುರುನಾಥರು ಬೇಸರದಿಂದ "ಅಯ್ಯಾ ಆ ಜೀವನ ಅವಳ ಗರ್ಭದಲ್ಲಿ ಸೇರಿಸಲು ನಾನು ಎಷ್ಟು ಕಷ್ಟಪಟ್ಟಿರುವೆನು ಗೊತ್ತಾ? ಅದಕ್ಕೆ ಇದೇನಾ ಅವರು ತೋರಿದ ಕೃತಜ್ಞತೆ?" ಎಂದರು.
ಚರಣದಾಸನಾದ ನಾನು ಈ ವಿಚಾರವನ್ನು ನನ್ನ ಬಂಧುಗಳಿಗೆ ತಿಳಿಸಲು ತಮ್ಮ ತಪ್ಪಿನ ಅರಿವಾದ ಅವರು ಮಗನನ್ನು ಕರೆದುಕೊಂಡು ಹೋದರು. ಇಂದು ಆ ಹುಡುಗ ಪ್ರತಿಭಾವಂತನಾಗಿ ಬೆಳೆಯುತ್ತಿರುವನು.
ಹಾಗೆಯೇ ಗುರುನಾಥರು ತನ್ನ ದೂರದ ಬಂಧು ಒಬ್ಬರು ನವಮಾಸ ತುಂಬುತ್ತಿರುವ ಸಮಯದಲ್ಲಿ ಊರಿಗೆಲ್ಲಾ ಹಣ್ಣು-ಹಾಲು ಹಂಚಿ ಸಂತಸ ಪಟ್ಟಿದ್ದರು. ಆ ನಂತರ ಈ ಕುರಿತು "ಭೂಮಿಗೆ ಬರ್ತಿರೋದು ಯಾರು ಗೊತ್ತೇ? ಅದೊಂದು ಸಾಧನಾ ಜೀವಿ" ಎಂದು ತಿಳಿಸಿದ್ದರು......,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya venkatachala avadootarige nanna saashtaanga pranaamagalu. Yellarigu Daari torisi olleyadaaguvante asheervadisi Guruvarya. Sarve jano sukinobavantu.
ReplyDelete