ಒಟ್ಟು ನೋಟಗಳು

Friday, January 20, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 108


    ಗ್ರಂಥ ರಚನೆ - ಚರಣದಾಸ 


ನೀರಿನ ಋಣ





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಒಮ್ಮೆ ಗುರುನಾಥರು ಇದ್ದಕ್ಕಿದ್ದಂತೆಯೇ ತಮ್ಮ ಶಿಷ್ಯರೊಂದಿಗೆ ಶೃಂಗೇರಿಯ ಕಡೆಗೆ ಹೊರಟವರು ದಾರಿ ಮಧ್ಯದಲ್ಲಿ ಕಾರನ್ನು ನಿಲ್ಲಿಸಿ ತಾವು ಹಾಗೂ ಕೆಲವರೊಂದಿಗೆ ಇಳಿದು ಉಳಿದ ಭಕ್ತರನ್ನು ಶೃಂಗೇರಿಗೆ ಕಳಿಸಿಕೊಟ್ಟರು. 

ನಂತರ ಹೀಗೆ ಹೇಳಿದರು. "ಅಯ್ಯಾ, ತುಂಬಾ ಆಯಾಸವಾಗಿದೆ. ನಾ ಮಲಗಬೇಕು" ಎಂದು ಹೇಳಿ ರಸ್ತೆ ಬದಿಯಲ್ಲೇ ಚಾಪೆ ಹಾಕಿಸಿಕೊಂಡು ಮಲಗಿದರು. 

ಕೆಲ ಸಮಯ ಕಳೆದ ನಂತರ ಎಚ್ಚರಗೊಂಡು ಹೀಗೆ ಹೇಳಿದರು. "ಅಯ್ಯಾ ತುಂಬಾ ಬಾಯಾರಿಕೆ, ನೀರಿದ್ದರೆ ತನ್ನಿ" ಎಂನಲ್ಲೂ ಜೊತೆಗಿದ್ದವರು ನೀರಿಲ್ಲವೆಂದರು ಅಸಹಾಯಕರಾಗಿ. ಯಾವ ಅವರಲ್ಲಿ ಒಬ್ಬರು ಬಾಟಲಿ ತೆಗೆದುಕೊಂಡು "ನೀರು ಹುಡುಕುವೆ" ಎಂದು ಹೇಳಿ ಹೊರಟರು. ಆದರೆ ಅದೇನು ಪರೀಕ್ಷೆಯೋ?, ಸುತ್ತಮುತ್ತ ಎಲ್ಲಿಯೂ ಒಂದು ಹನಿ ನೀರು ದೊರಕದೆ ಬರಿಗೈಲಿ ವಾಪಸಾದರು. 

ಅದೇ ಸಮಯಕ್ಕೆ ಸರಿಯಾಗಿ ಅದೇ ದಾರಿಯಲ್ಲಿ ನೀರಿನ ಬಾಟಲ್ ಹೊತ್ತುಕೊಂಡು ಹೋಗುತ್ತಿದ್ದ ವಾಹನವೊಂದು ಬಂದು ಗುರುನಾಥರ ಸಮೀಪ ನಿಂತಿತು. 

ಅದರಿಂದ ಇಳಿದ ಒಬ್ಬ ವ್ಯಕ್ತಿ ಓಡೋಡಿ ಗುರುನಾಥರಲ್ಲಿಗೆ ಬಂದು ಭಕ್ತಿಯಿಂದ ನಮಸ್ಕರಿಸಿ ಹೀಗೆ ಹೇಳತೊಡಗಿದರು. 

"ಗುರುಗಳೇ ಏನು ನನ್ನ ಭಾಗ್ಯ ಈ ದಿನ? ತಮ್ಮ ದರ್ಶನವಾಯಿತು" ಎನ್ನಲು, ಗುರುನಾಥರು "ತಾವು ಯಾರು?" ಎಂದು ಕೇಳಿದರು. 

ಆತ ಆತ ಹೀಗೆ ಹೇಳತೊಡಗಿದರು. "ಸ್ವಾಮಿ, ಸುಮಾರು ಹತ್ತು ವರ್ಷಗಳ ಹಿಂದೆ  ನಾನು ತಮ್ಮ ದರ್ಶನಕ್ಕಾಗಿ ಬಂದಿದ್ದೆ. ಅದು ನನ್ನ ಜೀವನದ ಬಹು ಕಷ್ಟದ ದಿನಗಳಾಗಿದ್ದವು. ನಾನು ಕೈಗೊಂಡ ಯಾವ ಕಾರ್ಯಗಳೂ ಕೈಗೂಡುತ್ತಿರಲಿಲ್ಲ. ಆರ್ಥಿಕ ಸಂಕಷ್ಟ ಹಾಗೂ ಇತರ ಸಮಸ್ಯೆಗಳಿಂದ ಬಳಲಿ ಹೋಗಿದ್ದೆ. 

ನನ್ನ ಸಮಸ್ಯೆಯನ್ನು ಆಲಿಸಿದ ನೀವು ಕುಡಿಯುತ್ತಿದ್ದ ನೀರಿನ ಲೋಟವನ್ನೇ ನನಗೆ ವರವಾಗಿ ನೀಡಿ "ಈ ನೀರಿನ ವ್ಯಾಪಾರ ಮಾಡು" ಎಂದು ನುಡಿದು ಆಶೀರ್ವದಿಸಿ ಕಳಿಸಿದಿರಿ. ತಮ್ಮ ಅಣತಿಯಂತೆ ನಾನು ವ್ಯಾಪಾರ ಆರಂಭಿಸಿದೆ. ಇಂದು ನಿಮ್ಮ ಕೃಪೆಯಿಂದಾಗಿ ನಮ್ಮ ಕಂಪೆನಿಯು ರಾಜ್ಯದಲ್ಲೇ ಅತಿ ಪ್ರತಿಷ್ಠಿತ ಕಂಪೆನಿಯಾಗಿ ಬೆಳೆದಿದೆ. ಇಂದು ನಾನು ಇಷ್ಟು ಸುಖವಾಗಿದ್ದೇನೆಂದರೆ ಅದಕ್ಕೆ ಕಾರಣ ತಮ್ಮ ಕರುಣೆ" ಎಂದು ನುಡಿದು ಕಣ್ತುಂಬಿಕೊಂಡು ಗುರುಗಳಿಗೆ ನಮಸ್ಕರಿಸಿದರು. 

ಮತ್ತೂ ಮುಂದುವರೆದ ಆತ "ಸ್ವಾಮಿ ಇಂದು ತಮಗೆ ಏನನ್ನಾದರೂ ಸಮರ್ಪಿಸೋಣ ಎಂದರೆ ಇಲ್ಲಿ ಏನೂ ದೊರಕುತ್ತಿಲ್ಲ. ಆದ್ದರಿಂದ ನನ್ನ ವಾಹನದಲ್ಲಿರುವ ನೀರಿನ ಒಂದು ಪೆಟ್ಟಿಗೆಯನ್ನೇ ನೀಡುವೆ" ಎಂದು ಹೇಳಿ ನೀರಿನ ಪೆಟ್ಟಿಗೆಯನ್ನು ಸಮರ್ಪಿಸಿ ಆನಂದದಿಂದ ಅಲ್ಲಿಂದ ತೆರಳಿದರು. ಸರ್ವಶಕ್ತನಾದ ಗುರುವಿನ ಲೀಲೆಯನ್ನು ಕಂಡ ಜೊತೆಗಿದ್ದ ಭಕ್ತರು ಮೂಕವಿಸ್ಮಿತರಾದರು...... ,,,,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


1 comment:

  1. Swamy venkatachala Avara Divya charanamruta galige nanna saashtaanga pranaamagalu. Yellaranu Harasi haagu asheervadisi Daari torisi Guruvarya. Hari om tatsat.

    ReplyDelete